ಮೈಸೂರಿನಲ್ಲಿ ಕಲುಷಿತ ನೀರು ಸೇವಿಸಿ ಯುವಕ ಸಾವು : 40 ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Team Newsnap
1 Min Read

ಮೈಸೂರು : ಯುವಕನೊಬ್ಬ ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟಿದ್ದಾನೆ . ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಒಟ್ಟು‌ 48 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಎರಡು ದಿನಗಳಿಂದ ಕೆ. ಸಾಲುಂಡಿ ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಆಗುವ ಲೈನ್‌ಗೆ ಡ್ರೈನೇಜ್ ನೀರು ಸೇರಿದ ಪರಿಣಾಮ ಗ್ರಾಮಸ್ಥರು ಸಾಲು ಸಾಲಾಗಿ ಅಸ್ವಸ್ಥರಾಗಲು ಶುರುವಾಗಿದ್ದು ,ಇದರ ಗಂಭೀರತೆ ಅರಿತ ಮೈಸೂರು ಜಿಲ್ಲಾಡಳಿತ ಗ್ರಾಮದಲ್ಲೇ ತಾತ್ಕಾಲಿಕ ವೈದ್ಯಕೀಯ ಕ್ಯಾಂಪ್ ಆರಂಭಿಸಿತ್ತು.

ಮೈಸೂರಿನ ವಿವಿಧ ಆಸ್ಪತ್ರೆಗಳಿಗೆ 48 ಜನರು ದಾಖಲಾಗಿದ್ದು ,ನಾಲ್ವರ ಸ್ಥಿತಿ ಗಂಭೀರವಾಗಿ ಈ ನಾಲ್ವರಲ್ಲಿ ಓರ್ವ ಯುವಕ ಇಂದು ಮೃತಪಟ್ಟಿದ್ದಾರೆ.

ಕನಕರಾಜ್ ( 20 ) ಅನ್ನು ನಿನ್ನೆ ತೀವ್ರ ವಾಂತಿ-ಬೇಧಿಯಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ,ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಬೆಂಗಳೂರಿನಲ್ಲಿ ರೇವ್ ಪಾರ್ಟಿ : ನಟಿ ಹೇಮಾ, ನಟ ಶ್ರೀಕಾಂತ್ ಬಂಧನ

ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿಗಳು ಪ್ರತಿಕ್ರಿಯಿಸಿದ್ದು, ಕಲುಷಿತ ನೀರಿನಿಂದಲೇ ಈ ಪ್ರಕರಣ ಆಗಿದೆ ಎಂಬುದು ಖಚಿತವಾಗಿಲ್ಲ. ನೀರನ್ನು ಪ್ರಯೋಗಾಲಕ್ಕೆ ಕಳುಹಿಸಲಾಗಿದೆ. ವರದಿ ಬರಬೇಕಿದೆ. ಸದ್ಯಕ್ಕೆ ಗ್ರಾಮದಲ್ಲೇ ತುರ್ತು ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.

Share This Article
Leave a comment