December 25, 2024

Newsnap Kannada

The World at your finger tips!

bike ulta

ಚಾಮರಾಜನಗರದಲ್ಲಿ ಬೈಕ್ ನಲ್ಲೇ ಸರಸವಾಡಿದ ಜೋಡಿಗೆ ಶಾಕ್ : ಯುವಕನ ಬಂಧನ

Spread the love

ಗುಂಡ್ಲುಪೇಟೆ ತಾಲೂಕಿನ ನಡುರಸ್ತೆಯಲ್ಲೇ ಬೈಕ್‌ನಲ್ಲಿ ರೈಡ್ ಮಾಡುತ್ತಲೇ ಸಾರ್ವಜನಿಕವಾಗಿ ಲಿಪ್‌ಲಾಕ್ (ಪರಸ್ಪರ ಚುಂಬನ) ಮಾಡಿದ್ದ ಪ್ರೇಮಿಗಳಿಗೆ ಚಾಮರಾಜನಗರ ಪೊಲೀಸರು ಶಾಕ್ ನೀಡಿದ್ದಾರೆ.

ಈ ಘಟನೆಯ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ, ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದು ಪತ್ತೆಹಚ್ಚಲು ಕ್ರಮ ಕೈಗೊಂಡರು.

ಬೈಕ್ ಸವಾರನ ವಿರುದ್ಧ ಚಾಮರಾಜನಗರ ಸಂಚಾರ ಠಾಣೆಯ ಪೊಲೀಸರು ಸಂಚಾರ ನಿಯಮ ಕಾನೂನು ಉಲ್ಲಂಘನೆ ಅಡಿಯಲ್ಲಿ ಸ್ವಪ್ರೇರಿತ ದೂರು ದಾಖಲು ಮಾಡಿಕೊಂಡರು.

ಮೊ.ನಂ: 39/2022 ಕಲಂ 279 IPC ಮತ್ತು 184 IMV ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

KA-10-EA-5121 ಪಲ್ಸರ್ ಬೈಕ್‌ನ RC ಮಾಲೀಕನಿಂದ ವಿವರ ಪಡೆದು, ಬೈಕ್ ಸವಾರ ಹೆಚ್.ಡಿ.ಕೋಟೆ ತಾಲೂಕಿನ ಶಿವಪುರ ಗ್ರಾಮದ ನಿವಾಸಿ ಎಸ್.ಸಿಸ್ವಾಮಿ ಅನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.

ಚಾಮರಾಜನಗರದ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ತಿಮ್ಮರಾಜು, ಪಿಎಸ್‌ಐ ನಂದೀಶ್‌ಕುಮಾರ್ ಅವರ ನೇತೃತ್ವದಲ್ಲಿ ಸಿಬ್ಬಂದಿ ಸಿ.ಚಿಕ್ಕಣ್ಣ, ಬಿ.ಕೆ.ಜಯರಾಮು, ಜಿ.ಬಿ.ಮಹದೇವಸ್ವಾಮಿ, ಟಿ.ಕೆ.ಜಗದೀಶ್, ಪಿ.ನವೀನ್‌ಕುಮಾರ್ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

CHAMARAJ NAGAR 1
Copyright © All rights reserved Newsnap | Newsever by AF themes.
error: Content is protected !!