ಹಳೆ ವೈಷಮ್ಯಕ್ಕೆ ಯುವಕನೊಬ್ಬನನ್ನು ಕಿಡ್ನಾಪ್ ಮಾಡಿದ ಕಿರಾತಕರು ನಂತರ ಆತನನ್ನು ಕೊಲೈಗೈದಿರುವ ಅನುಮಾನ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ನರಗಲು ಗ್ರಾಮದಲ್ಲಿ ಜರುಗಿದೆ
ಇದನ್ನು ಓದಿ –ಕೇಂದ್ರ ಮಂತ್ರಿ ಅಮಿತ್ ಶಾ ಭೇಟಿ ಸಾಧ್ಯವಾಗಲಿಲ್ಲ : ಸಂಪುಟ ರಚನೆ ಬಗ್ಗೆ ಮಾತುಕತೆ ಇಲ್ಲ : ಸಿಎಂ
ನರಗಲು ಗ್ರಾಮದ ನಿವಾಸಿ ಮೋಹನ್(31) ಕಳೆದ ಭಾನುವಾರ ಪತ್ನಿ ಬಳಿ ಹೊಲಕ್ಕೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದಾನೆ. ಆದರೆ ಮತ್ತೆ ಮನೆಗೆ ವಾಪಸ್ ಬರಲಿಲ್ಲ.
ಈ ಹಿನ್ನೆಲೆ ಕುಟುಂಬಸ್ಥರು ಆತಂಕಗೊಂಡು ಗ್ರಾಮದಲ್ಲಿ ಹುಡುಕಾಡಿದ್ದು, ಮೋಹನ್‍ನನ್ನು ಅಪಹರಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಕುಟುಂಬಸ್ಥರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ಮೋಹನ್ ಕಿಡ್ನಾಪ್‍ಗೆ ಅಕ್ರಮ ಕಲ್ಲು ಕ್ರಷರ್ ಕಾರಣವಗದೆ ಎಂಬ ಅನುಮಾನ ಕುಟುಂಬಸ್ಥರಲ್ಲಿ ವ್ಯಕ್ತವಾಗಿದೆ . ಈ ಜಾಲವನ್ನು ಹಿಡಿದ ಪೊಲೀಸರು ಮೋಹನ್‌ಗಾಗಿ ಹುಡುಕಾಡುತ್ತಿದ್ದಾರೆ .
ಕುಮಾರ್ ಗ್ರಾ.ಪಂ ಚುನಾವಣೆಯಲ್ಲಿ ಸೋತಿದ್ದ. ಈ ಸೋಲಿಗೆ ಮೋಹನ್ ಕಾರಣ ಎಂದು ಅವನ ಮೇಲೆ ಕುಮಾರ್ ಹಗೆ ಸಾಗಿಸುತ್ತಿದ್ದ. ಅಲ್ಲದೇ ತಮಿಳುನಾಡು ಮೂಲದ ರಾಜು ಕ್ರಷರ್, ಕುಮಾರ್ ಜಮೀನಿನಲ್ಲಿ ನಡೆಯುತ್ತಿತ್ತು. ಇತ್ತೀಚೆಗೆ ಈ ಕ್ರಷರ್ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖಾ ಸಿಬ್ಬಂದಿ ದಾಳಿ ನಡೆಸಿದ್ದರು. ಈ ದಾಳಿಗೆ ಮೋಹನ್ ಕಾರಣವೆಂದು ರಾಜು ತಿಳಿದುಕೊಂಡಿದ್ದಾನೆ. ಈ ಹಿನ್ನೆಲೆ ಮೋಹನ್‍ನನ್ನ ರಾಜು ಮತ್ತುಕುಮಾರ್ ಅಪಹರಿಸಿದ್ದಾರೆ ಎಂದು ಅನುಮಾನವನ್ನು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
ಇಬ್ಬರು ಸೇರಿ ಮೋಹನ್‍ನನ್ನು ನರಗಲುನಲ್ಲಿ ಅಪಹರಿಸಿ ಹೊಳೆನರಸೀಪುರದ ಬಳಿ ಕೊಲೈಗೈದು ಮೃತದೇಹವನ್ನು ಹೂತು ಹಾಕಿರುವ ಶಂಕೆ ವ್ಯಕ್ತವಾಗುತ್ತಿದೆ. ಶಂಕೆ ಹಿನ್ನೆಲೆ ಮೊಬೈಲ್ ನೆಟ್‍ವರ್ಕ್ ಆಧರಿಸಿ ಪೊಲೀಸರು ಮೋಹನ್ ಶವ ಹುಡುಕಾಟ ಮಾಡುತ್ತಿದ್ದಾರೆ.
- ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
- ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
- ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ
- 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇತಿಹಾಸ ಸೃಷ್ಟಿಸಲಿದೆ: ಸಚಿವ ಚಲುವರಾಯಸ್ವಾಮಿ
- ಸಿಎಂ ಪತ್ನಿಯ ನಿವೇಶನ ಹಗರಣ: ದೂರು ಹಿಂಪಡೆಯಲು ಆಮಿಷ ನೀಡಿದ ಆರೋಪ
More Stories
ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ