January 10, 2025

Newsnap Kannada

The World at your finger tips!

8f6d7038 2be6 4834 baa6 4eb534f5b873

ನವೆಂಬರ್ 22 ಕ್ಕೆ ಮದುವೆಯಾಗಬೇಕಿದ್ದ ಜೋಡಿಗಳಿಗೆ, ಈಗ ತಿಥಿಗೆ ತಯಾರಿ…..

Spread the love

ನವೆಂಬರ್ 22 ಕ್ಕೆ ಕ್ಯಾತಮಾರನ ಹಳ್ಳಿ ಚಂದ್ರ ಹಾಗೂ ಶಶಿಕಲಾ ಮದುವೆ ನಿಶ್ಚಯವಾಗಿತ್ತು. ಎಲ್ಲವೂ ಸುಸೂತ್ರವಾಗಿ ನಡೆದಿದ್ದರೆ ಮದುವೆ ಮಾಡಲು ಕುಟುಂಬದವರು ಸಿದ್ದತೆ ಮಾಡಿದ್ದರು. ಆದರೆ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಮದುವೆ ದಿನಾಂಕಕ್ಕೂ ಮುನ್ನ ಇಬ್ಬರು ಜೋಡಿಗಳ ತಿಥಿ ಕಾರ್ಯಕ್ರಮ ನಡೆಯಲಿದೆ. ಇದು ಎರಡೂ ಕುಟುಂಬಕ್ಕೆ ದುಃಖದ ಸಂಗತಿಯಾಗಿದೆ.

ವಧು ಶಶಿಕಲಾ ಮನೆಯವರು ಮದುವೆ ಭಾರಿ ಸಿದ್ದತೆ ಮಾಡಿದ್ದರು. ಆದರೆ ತಿಥಿ ಮಾಡಲು ತಯಾರಿ ಮಾಡಬೇಕಾಗಿದೆ ಎಂದು ಕುಟುಂಬದವರು ನೊಂದು ಹೇಳುತ್ತಾರೆ.

couple

ಪ್ರಿ ವೆಡ್ಡಿಂಗ್ ಶೂಟ್ ಮಾಡುವ ತಲಕಾಡು ಬಳಿ ಕಾವೇರಿ ನದಿಯಲ್ಲಿ ಜಲ ಸಮಾಧಿಯಾದ ನವ ಜೋಡಿಗಳು ಮೈಸೂರಿನ ಪ್ರಮುಖ ಸ್ಥಳಗಳಲ್ಲಿ ಶೂಟ್ ಮುಗಿಸಿದ ಫೋಟೊಗಳು ಲಭ್ಯ ವಾಗಿವೆ.

ಸೋಮವಾರ ಒಂದೇ ತೆಪ್ಪದಲ್ಲಿದ್ದ ಜೋಡಿಗಳು ಜಲ ಸಮಾಧಿಯಾದ ನಂತರ ಶವಗಳನ್ನು ಪತ್ತೆ ಮಾಡಿ ನೀರಿನಿಂದ ಹೊರ ತಂದು ಶವ ಪರೀಕ್ಷೆ ಮುಗಿಸಿ, ಎರಡೂ ಕುಟುಂಬದವರು ಅಂತ್ಯ ಸಂಸ್ಕಾರ ನೆರವೇರಿಸಿದರು.
ಎರಡೂ ಕುಟುಂಬಗಳಲ್ಲಿ ಸಂಭವಿಸಿದ ದುರಂತ ಘಟನೆಯ ಶಾಕ್ ನಿಂದ ಯಾರೂ ಹೊರ ಬಂದಿಲ್ಲ.

Copyright © All rights reserved Newsnap | Newsever by AF themes.
error: Content is protected !!