ನಿಮ್ಮ ಆಧಾರ್ ಕಾಡ್೯ನ ತಪ್ಪು ಒಪ್ಪುಗಳನ್ನು ಹೀಗೆ ಸರಿ ಮಾಡಬಹುದು

Team Newsnap
1 Min Read

ನಮ್ಮ ದೇಶದಲ್ಲಿ ಅತ್ಯಂತ ಪ್ರಮುಖ ಮತ್ತು ವಿಶ್ವಾಸಾರ್ಹ ದಾಖಲೆ ಎಂದರೆ ಆಧಾರ್ ಕಾಡ್೯.

ಸಾರ್ವಜನಿಕ ಸಬ್ಸಿಡಿ ಮತ್ತು ನಿರು ದ್ಯೋಗ ಪ್ರಯೋಜನ ಯೋಜನೆಗಳ ಪ್ರಯೋಜನ ಪಡೆಯಲು ಸಧ್ಯ ಆಧಾರ್‌ ಅನಿವಾರ್ಯ.

ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವುದ ರಿಂದ ಹಿಡಿದು, ಸರ್ಕಾರದ ಪಡಿತರದಿಂದ ಆಹಾರ ಧಾನ್ಯ ಖರೀದಿಸುವವರೆಗೆ, ಆಧಾರ್ ನಿಮಗೆ ಬೇಕೆ ಬೇಕು. ಇಂತಹ ಆಧಾರ್‌ ಅಪ್ ಡೇಟ್ ಮಾಡೋದು ತುಂಬಾನೇ ಅಗತ್ಯ.

ಆಧಾರ್ ಕಾರ್ಡ್ʼನಲ್ಲಿ ಸಾಮಾನ್ಯ ವಾಗಿರುವ ಬಹುತೇಕ ಬದಲಾವಣೆಗಳನ್ನು ಅಂದ್ರೆ, ನಿಮ್ಮ ಫೋನ್ ನಂಬರ್, ವಿಳಾಸ ಅಥವಾ ಇಮೇಲ್ ಐಡಿಯನ್ನ ಮನೆಯಲ್ಲೇ ಕುಳಿತು ಬದಲಾಯಿಸ್ಬೋದು. ಇದಕ್ಕಾಗಿ ನೀವು ಆಧಾರ್ ಕೇಂದ್ರ ಅಥವಾ ಅಪ್ ಡೇಟ್ ಕೇಂದ್ರಕ್ಕೆ ಭೇಟಿ ನೀಡಬೇಕಿಲ್ಲ.

ಕೆಲವೇ ನಿಮಿಷಗಳಲ್ಲಿ ನಿಮ್ಮ ಆಧಾರ್ ಕಾರ್ಡ್ ನಲ್ಲಿನ ಸಾಮಾನ್ಯ ಬದಲಾವಣೆ ಗಳನ್ನು ಆನ್ ಲೈನ್ ನಲ್ಲಿ ಹೇಗೆ ಮಾಡಬೇಕು ಎನ್ನುವುದು ಇಲ್ಲಿದೆ ನೋಡಿ.

  • 2009ರಲ್ಲಿ ಸ್ಥಾಪಿತವಾದ ಶಾಸನ ಬದ್ಧ ಪ್ರಾಧಿಕಾರವಾದ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ (ಯುಐಡಿಎಐ) ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ‘ಆಧಾರ್ ಅಪ್ ಡೇಟ್ ಗೆ ಮುಂದುವರೆಯಿರಿ’
  • ವೆಬ್ ಸೈಟ್ ಕೇಳಿದ ವಿವರಗಳನ್ನು ಭರ್ತಿ ಮಾಡಿ ಮತ್ತು ಕ್ಯಾಪ್ಚಾ ದಲ್ಲಿ ಟೈಪ್ ಮಾಡಿ
  • ನಿಮ್ಮ ಮೊಬೈಲ್ ಫೋನ್ ನಲ್ಲಿ ನೀವು ಸ್ವೀಕರಿಸುವ ಓಟಿಪಿ ಯನ್ನು ನಮೂದಿಸಿ
  • ಅಗತ್ಯ ಬದಲಾವಣೆಗಳನ್ನು ಮಾಡಿ ಮತ್ತು ಅಪ್ ಡೇಟ್ ಮೇಲೆ

ಯುಐಡಿಎಐ ನೋಂದಾಯಿತ ಮೊಬೈಲ್ ಸಂಖ್ಯೆಗೆ ಮಾತ್ರ ಒಟಿಪಿ ಕಳುಹಿಸುತ್ತದೆ. ಇದಲ್ಲದೆ, ನೀವು ನಿಮ್ಮ ಮೊಬೈಲ್ ಸಂಖ್ಯೆ, ವಿಳಾಸ, ಲಿಂಗ, ಹೆಸರು, ಜನ್ಮ ದಿನಾಂಕ ಮತ್ತು ಭಾಷೆಯನ್ನು ಆನ್ ಲೈನ್ ನಲ್ಲಿ ಅಪ್ ಡೇಟ್ ಮಾಡಬಹುದು. ನಿಮ್ಮ ಬಯೋಮೆಟ್ರಿಕ್ ಅಪ್ ಡೇಟ್ ಮಾಡಲು ಅಥವಾ ನಿಮ್ಮ ಪೋಷಕರ ವಿವರಗಳನ್ನು ಬದಲಾಯಿಸಲು, ನೀವು ಆಧಾರ್ ಸೇವಾ ಕೇಂದ್ರ ಅಥವಾ ಅಪ್ ಡೇಟ್ ಕೇಂದ್ರಕ್ಕೆ ಭೇಟಿ ನೀಡಿ.

Share This Article
Leave a comment