ಆಕೆ ಏಜ್ ಜಸ್ಟ್ 17 . ಇನ್ನೂ ಬಾಲಕಿ ಅನ್ನುವ ಹಾಗಿಲ್ಲ. ಏಕೆಂದರೆ ಆ ಬಾಲಕಿ
ಒಬ್ಬ ವಿವಾಹಿತನನ್ನು ಪ್ರೀತಿಸುತ್ತಿದ್ದಳು!
ಆದರೆ ಈ ಅಪ್ರಾಪ್ತ ವಯಸ್ಸಿನ ಬಾಲಕಿಗೆ ವಿವಾಹಿತ ಪುರುಷನ ಜೊತೆ ಮದುವೆ ಸಾಧ್ಯವಿಲ್ಲವೆಂದು ತಿಳಿದಾಗ ಪ್ರಿಯಕರನೊಂದಿಗೆ ಸೇರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆಕೆ ಸತ್ತು ಹೋದಳು. ಪ್ರಿಯತಮ ಸಧ್ಯಕ್ಕೆ ಬಚಾವ್ ಆಗಿದ್ದಾನೆ.
ಘಟನೆ ವಿವರ ಹೀಗಿದೆ:
ರಾಯಚೂರಿನ ಜಿಲ್ಲೆಯ ಜಾಲೇರದೊಡ್ಡಿಯ 17 ವರ್ಷದ ಮಹಾದೇವಿ ಎಂಬಾಕೆ ಯರಜಂತಿ ಎಂಬಾಕೆ ಗ್ರಾಮದ 28 ವರ್ಷದ ನರಸಪ್ಪ ಎಂಬಾತನನ್ನು ಪ್ರೀತಿ ಮಾಡುತ್ತಿದ್ದಳು.
ನರಸಪ್ಪನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಆದರೂ ನರಸಪ್ಪ ಮಹಾದೇವಿಯನ್ನು ಪ್ರೀತಿಸುತ್ತಿದ್ದನು.
ವಿವಾಹಿತ ನರಸಪ್ಪನೊಂದಿಗೆ ಪ್ರೀತಿ ಮಾಡುತ್ತಿರುವುದಕ್ಕೆ ಮಹಾದೇವಿ ಅಪ್ಪ ಅಮ್ಮ ಸಾಕಷ್ಟು ತೀವ್ರ ವಿರೋಧ ವ್ಯಕ್ತಪಡಿಸಿದರು.
ಈ ನಡುವೆ ನರಸಪ್ಪನನ್ನು ಮಹಾದೇವಿ ತುಂಬಾ ಪ್ರೀತಿಸುತ್ತಿದ್ದಳು. ನಮ್ಮಿಬ್ಬರ ಮದುವೆ ಸಾಧ್ಯವಿಲ್ಲ ಎಂದು ತಿಳಿದ ಮಹಾದೇವಿ ಮತ್ತು ನರಸಪ್ಪ ಇಬ್ಬರೂ ಸೇರಿ ವಿಷ ಸೇವಿಸಿದ್ದರು.
ನಮ್ಮ ಸಾವಿಗೆ ಯಾರೂ ಕಾರಣರಲ್ಲ. ಮುಂದಿನ ಜನ್ಮದಲ್ಲಿ ಗಂಡ-ಹೆಂಡತಿಯಾಗಿ ಇರುತ್ತೇವೆ ಎಂದು ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿದ್ದಾರೆ. ದುರಾದೃಷ್ಟವಶಾತ್ ಮಹಾದೇವಿ ಕೊನೆಯುಸಿರೆಳೆದ. ಅಸ್ವಸ್ಥಗೊಂಡ ನರಸಪ್ಪನನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಪ್ರಾಣಾಪಾಯದಿಂದ ಪಾರಾಗಿದ್ದಾನೆ.
- ಪೆಟ್ರೋಲ್ GST ವ್ಯಾಪ್ತಿಗೆ ಸೇರಿಸುವ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಹತ್ವದ ಸ್ಪಷ್ಟನೆ
- ಐಶ್ವರ್ಯಗೌಡ ವಂಚನೆ ಪ್ರಕರಣ: ಶಾಸಕ ನರೇಂದ್ರಸ್ವಾಮಿಯ ಕೈವಾಡ ಶಂಕೆ, ಅನ್ನದಾನಿಯ ಗಂಭೀರ ಆರೋಪ
- ಹೊಸ ವರ್ಷದ ಸಂಭ್ರಮ: KSBCLನಿಂದ ಒಂದೇ ದಿನ 308 ಕೋಟಿ ರೂ. ಮದ್ಯ ಮಾರಾಟ
- 12 ರಾಶಿಗಳ 2025ರ ವಾರ್ಷಿಕ ಭವಿಷ್ಯ
- ಅಂಗನವಾಡಿಗೆ ತೆರಳಿದ್ದ 3 ವರ್ಷದ ಬಾಲಕಿಗೆ ಹಾವು ಕಚ್ಚಿ ದಾರುಣ ಸಾವು
More Stories
ಪೆಟ್ರೋಲ್ GST ವ್ಯಾಪ್ತಿಗೆ ಸೇರಿಸುವ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಹತ್ವದ ಸ್ಪಷ್ಟನೆ
ಐಶ್ವರ್ಯಗೌಡ ವಂಚನೆ ಪ್ರಕರಣ: ಶಾಸಕ ನರೇಂದ್ರಸ್ವಾಮಿಯ ಕೈವಾಡ ಶಂಕೆ, ಅನ್ನದಾನಿಯ ಗಂಭೀರ ಆರೋಪ
ಹೊಸ ವರ್ಷದ ಸಂಭ್ರಮ: KSBCLನಿಂದ ಒಂದೇ ದಿನ 308 ಕೋಟಿ ರೂ. ಮದ್ಯ ಮಾರಾಟ