ಮದುವೆಯಾಗಲು ರೈತ ಯುವಕರಿಗೆ ಹೆಣ್ಣು ಕೊಡ್ತಿಲ್ಲ- ಯವ ರೈತನ ಅಳಲು: ಸಚಿವ ಯೋಗೇಶ್ವರ್ ಗೆ ಹೊಸ ಸಲಹೆ

Team Newsnap
2 Min Read
  • ಮಂಡ್ಯದ ಯುವ ರೈತನಿಗೆ ಎದುರಾದ ಸಮಸ್ಯೆ
  • ನನ್ನದು ಮಾತ್ರವಲ್ಲ, ಇಡೀ ರೈತ ಯುವಕರ ಸಮಸ್ಯೆಯಾಗಿದೆ.
  • ರೈತನನ್ನು ಮದುವೆಯಾದರೆ ಪ್ರೋತ್ಸಾಹ ಧನ ನೀಡಿ

ಇದು ನನ್ನೊಬ್ಬನ ಸಮಸ್ಯೆ ಅಲ್ಲ ಸಾರ್
ಮಂಡ್ಯ ಸೇರಿದಂತೆ ರಾಜ್ಯದ ಯುವ ರೈತರ ಸಮಸ್ಯೆ. ನಮಗೆ ಮದುವೆ ಯಾಗಲು ಹೆಣ್ಣು ನೀಡುತ್ತಿಲ್ಲ ಎಂದು ಸಚಿವ ಪಿ ಯೋಗೇಶ್ವರ್ ಬಳಿ ಯುವ ರೈತರೊಬ್ಬರು ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

yogishwar

ಲಾಕ್‍ಡೌನ್ ಸಂದರ್ಭದಲ್ಲಿ ಪಟ್ಟಣ ಪ್ರದೇಶದಲ್ಲಿ ವಾಸ ಮಾಡಲು ಸಾಧ್ಯವಾಗದೇ ಶೇ.75 ಜನರು ಹಳ್ಳಿಗಳಿಗೆ ವಾಪಸ್ ಬಂದಿದ್ದರು. ಈ ವೇಳೆ ಜನರು ಹಳ್ಳಿ ಲೈಫ್ ಸೂಪರ್, ರೈತನೇ ಗ್ರೇಟ್ ಎಂದು ಹೇಳುತ್ತಿದ್ದರು.

ಆದರೆ ಲಾಕ್‍ಡೌನ್ ಮುಗಿದ ಬಳಿಕ ಹಳ್ಳಿ ಲೈಫ್‍ನ ಅನುಭವಿಸಲು ಇಷ್ಟ ಪಡುತ್ತಿಲ್ಲ ಹಾಗೂ ರೈತನಿಗೆ ಹೆಣ್ಣು ಕೊಡಲು ಹೆಣ್ಣೆತ್ತವರು ಮೂಗು ಮುರಿಯುತ್ತಾರೆ. ನಾವೂ ಸಹ ಸಾಕಷ್ಟು ಸಂಪಾದನೆ ಮಾಡಿದರೂ ಹೆಣ್ಣು ಕೊಡೋಕೆ ಹಿಂದೇಟು ಹಾಕುತ್ತಾರೆ ಎನ್ನುವುದು ಆ ಯುವ ರೈತನ ಅಳಲು.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ರೈತ ಪ್ರವೀಣ್ ರೈತರಿಗೆ ಹೆಣ್ಣು ಕೊಡುತ್ತಿಲ್ಲ ಎಂದು ಸಚಿವ ಯೋಗೇಶ್ವರ್ ಹತ್ತಿರ ತನಗೆ ಹೆಣ್ಣು ಸಿಗದ ಬಗ್ಗೆ ಕಹಾನಿಯನ್ನು ಹೇಳಿಕೊಂಡಿದ್ದಾರೆ.

ಆಡಿಯೋ ವೈರಲ್

ಸರ್, ನಾನೊಬ್ಬ 28 ವರ್ಷದ ಯುವಕ, ರೇಷ್ಮೆ ಕೃಷಿಯನ್ನು ಮಾಡುತ್ತೇನೆ. ಒಳ್ಳೆಯ ಸಂಪಾದನೆ ಇದೆ. ಆದರೆ ನಾನು ಮದುವೆಯಾಗಲು ಹುಡುಗಿ ಕೇಳಲು ಹೋದರೆ, ನನಗೆ ಹುಡುಗಿ ಕೊಡುತ್ತಿಲ್ಲ. ನಾವು ರೈತರಿಗೆ ಕೊಡಲ್ಲ. ಸಿಟಿಯಲ್ಲಿ ಇದ್ದವರಿಗೆ ಹೆಣ್ಣು ಕೊಡುತ್ತೇವೆ ಎಂದು ಹೆಣ್ಣೆತ್ತವರು ಹೇಳುತ್ತಿದ್ದಾರೆ. ಇದು ನನ್ನೊಬ್ಬನ ಸಮಸ್ಯೆ ಮಾತ್ರವಲ್ಲ, ಇಡೀ ರೈತ ಯುವಕರ ಸಮಸ್ಯೆ ಎಂದು ಹೇಳಿರುವ ಆಡಿಯೋ ಈಗ ವೈರಲ್ ಆಗಿದೆ.

ಪರಿಹಾರವನ್ನೂ ಹೇಳಿದ ಯುವ ರೈತ:

ಈ ಸಮಸ್ಯೆಗೆ ಪರಿಹಾರವೂ ಇದೆ ಸಾರ್ . ಇಂದು ಕಾಯ್ದೆ ತನ್ನಿ. ಅಂತರ್ಜಾತಿ ಮದುವೆಯಾದವರಿಗೆ 2 ಲಕ್ಷ, 3 ಲಕ್ಷ ಎಂದು ಕೊಡುತ್ತೀರಾ. ಅದೇ ರೀತಿ ರೈತನನ್ನು ಮದುವೆಯಾದರೆ, ಲಕ್ಷ- ಲಕ್ಷ ಪ್ರೋತ್ಸಾಹ ಧನ. ಅವರಿಗೆ ಹುಟ್ಟಿದ ಮಕ್ಕಳಿಗೆ ವಿಮೆ ಅಥವಾ ಪ್ರೋತ್ಸಾಹ ಧನ ನೀಡುವಂತಹ ಯೋಜನೆಗಳನ್ನು ತನ್ನಿ. ಈ ಬಗ್ಗೆ ಸಿಎಂ ಸರ್‍ ಗೂ ಹೇಳಿ ಸರ್, ಇದೊಂದು ಒಳ್ಳೆಯ ಕೆಲಸ ಮಾಡಿ ಎಂದು ಪ್ರವೀಣ್ ಅವರು ಮನವಿ ಮಾಡಿಕೊಂಡಿದ್ದಾರೆ.

ಯುವ ರೈತ ಪ್ರವೀಣ್ ಸಲಹೆಗೆ ಉತ್ತರ ನೀಡಿರುವ ಸಚಿವ ಸಿ.ಪಿ.ಯೋಗೇಶ್ವರ್, ಹೌದು ಅಣ್ಣ ನೀನು ಹೇಳುತ್ತಿರುವುದು ಸರಿ ಇದೆ. ಯೋಚನೆ ಮಾಡೋಣಾ ಇದು ಬಹಳ ಗಂಭೀರ ಸಮಸ್ಯೆ. ಈ ಬಗ್ಗೆ ನಾನು ಸಿಎಂ ಸಾರ್ ಹತ್ತಿರ ಮಾತನಾಡುತ್ತೇನೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.

Share This Article
Leave a comment