ಯೋಗೇಶ್ ಗೌಡ ಹತ್ಯೆ ಪ್ರಕರಣ; ಮಾಜಿ ಸಚಿವ ವಿನಯ್, ವಿಜಯ್ ಕುಲಕರ್ಣಿ ಬಂಧಿಸಿದ ಸಿಬಿಐ

Team Newsnap
1 Min Read

ಧಾರವಾಡದ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶ್ ಗೌಡ ಹತ್ಯೆ ಗೆ ಸಂಬಂಧಪಟ್ಟಂತೆ ಕಾಂಗ್ರೆಸ್ ನಾಯಕ, ಮಾಜಿ ಸಚಿವ ವಿನಯ್ ಕುಲಕರ್ಣಿ ಹಾಗೂ ಸಹೋದರ ವಿಜಯ್ ಕುಲಕರ್ಣಿ ಅವರನ್ನು ಸಿಬಿಐ ಗುರುವಾರ ಬೆಳಿಗ್ಗೆ ಬಂಧಿಸಿದೆ.

ಜೂನ್ 15, 2016ರಂದು ಯೋಗೇಶ್ ಗೌಡ ಕೊಲೆಯಾಗಿತ್ತು. ಈ ಪ್ರಕರಣದಲ್ಲಿ ವಿನಯ್ ಹೆಸರು ಕೇಳಿಬಂದಿತ್ತು. ಅಲ್ಲದೇ ಸಚಿವರಾದ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹತ್ಯೆಯ ಪ್ರಕರಣದಲ್ಲಿ ವಿನಯ್ ಭಾಗಿಯಾಗಿದ್ದರು ಎಂದು ಆರೋಪಿಸಿದ್ದರು.

ಯೋಗೇಶ್ ಕೊಲೆ ಆದ ಸಮಯದಲ್ಲಿ ವಿನಯ್ ಕುಲಕರ್ಣಿ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕರಾಗಿದ್ದರು.

ಕೆಲ ದಿನಗಳ ಹಿಂದಷ್ಟೇ ಸಿಬಿಐ ಅಧಿಕಾರಿಗಳು ವಿನಯ್ ಕುಲಕರ್ಣಿ, ಸಹೋದರ ವಿಜಯ್ ಕುಲಕರ್ಣಿ ಅವರನ್ನು ವಿಚಾರಣೆ ನಡೆಸಿದ್ದರು. ಈ ಕಾರಣದಿಂದಲೇ ವಿನಯ್ ಬಿಜೆಪಿಗೆ ಸೇರಲು ಪ್ರಯತ್ನಿಸುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಈ ಸುದ್ದಿಗಳನ್ನು ವಿನಯ್ ಕುಲಕರ್ಣಿ ಹಾಗೂ ಬಿಜೆಪಿ ಪಕ್ಷದವರು ತಳ್ಳಿ ಹಾಕಿದ್ದರು.

vinay1

ಇಂದು ಬೆಳಿಗ್ಗೆ ಸಿಬಿಐ ಅಧಿಕಾರಿಗಳು ವಿನಯ್ ಧಾರವಾಡದ ಬಾರಕೋಟ್ರಿ ಪ್ರದೇಶದ ನಿವಾಸದಲ್ಲಿ ವಶಕ್ಕೆ ಪಡೆದುಕೊಂಡರು. ಈ ಪ್ರಕರಣ ಮುಚ್ವಿ ಹಾಕಲು ಕೆಲವು ಪೋಲೀಸ್ ಅಧಿಕಾರಿ ಗಳು ಶಾಮೀಲಾಗಿರುವ ಶಂಕೆ ಬಗ್ಗೆಯೂ ತನಿಖೆ ನಡೆದಿದೆ

ಸಹೋದರ ಬಂಧನ
ಈ ನಡುವೆ ವಿನಯ್ ಕುಲಕರ್ಣಿ ಸಹೋದರ ವಿಜಯ್ ಕುಲಕರ್ಣಿ ಅವರನ್ನು ಬಂಧಿಸಿದ್ದಾರೆ.ಇಬ್ಬರನ್ನೂ ಧಾರವಾಡದ ಉಪ ನಗರ ಪೋಲಿಸ್ ಠಾಣೆಗೆ ಕರೆದು ತಂದಿದ್ದಾರೆ.

Share This Article
Leave a comment