ಮುಖ್ಯಮಂತ್ರಿ ಸ್ಥಾನಕ್ಕೆ ಇಂದೇ ರಾಜೀನಾಮೆ ನೀಡುತ್ತೇನೆ ಎಂದು ಬಿ.ಎಸ್ ಯಡಿಯೂರಪ್ಪ ಪ್ರಕಟಿಸಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಇವತ್ತಿಗೆ 2 ವರ್ಷ ಪೂರೈಸಿದೆ. ನಾಯಕತ್ವ ಬದಲಾವಣೆ ಬಿಕ್ಕಟ್ಟು ಗೊಂದಲದ ನಡುವೆಯೇ ಆರಂಭವಾದ ಸಮಾವೇಶದಲ್ಲಿ ರಾಜೀನಾಮೆ ನೀಡುವುದಾಗಿ ತಿಳಿಸಿದರು.
ನಿಮ್ಮೆಲ್ಲರ ಅಪ್ಪಣೆ ಪಡೆದು ರಾಜಭವನಕ್ಕೆ ತೆರಳಿ ರಾಜೀನಾಮೆ ಪತ್ರ ಕೊಡುವವನಿದ್ದೇನೆ. ಕಾರ್ಯಕ್ರಮದ ಬಳಿಕ ಊಟ ಮುಗಿಸಿಕೊಂಡು ನೇರ ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ನೀಡಲಿದ್ದೇನೆ
ನಾನು ದುಃಖದಿಂದ ರಾಜೀನಾಮೆ ಸಲ್ಲಿಕೆ ಮಾಡುತ್ತಿಲ್ಲ. 75 ವರ್ಷದ ಯಡಿಯೂರಪ್ಪ ಅವರಿಗೆ 2 ವರ್ಷ ಸಿಎಂ ಆಗಲು ಮತ್ತೆ ಅವಕಾಶ ನೀಡಿದರು. ಈ ಸಂದರ್ಭದಲ್ಲಿ ನಾನು ಮೋದಿ ಹಾಗೂ ಅಮಿತ್ ಶಾ ಅವರಿಗೆ ಪದಗಳಲ್ಲಿ ಧನ್ಯವಾದ ಹೇಳಲು ಆಗಲ್ಲ ಎಂದರು.
ತಮ್ಮ ಹೋರಾಟದ ದಿನಗಳನ್ನು ಭಾಷಣದ ವೇಳೆ ನೆನಪಿಸಿದ ಸಿಎಂ ಬಿಎಸ್ವೈ ಅವರು, ನಾನೊಬ್ಬನೇ ವಿಧಾನಸಭೆಯೊಳಗೆ ಹೋರಾಡಿದ್ದೇನೆ. ನನ್ನ ಕರ್ತವ್ಯವನ್ನು ಮಾಡಿದ್ದೇನೆ.. ನನಗೆ ತೃಪ್ತಿ ಸಮಾಧಾನವಿದೆ ಎಂದರು.
ಮಂಡ್ಯ ಜಿಲ್ಲೆಯ ಬೂಕನಕೆರೆಯಲ್ಲಿ ಹುಟ್ಟಿ ಸಂಘದ ಕಾರ್ಯಕರ್ತನಾಗಿ ಕಾರ್ಯ ಪ್ರಾರಂಭಸಿದೆ. ಪುರಸಭೆಯಿಂದ ಗೆದ್ದು ಅಧ್ಯಕ್ಷನಾದೆ. ಆಗ ಮನೆಯಿಂದ ಕಚೇರಿಗೆ ದಾರಿ ಮಧ್ಯದಲ್ಲಿ ಮಾರಣಾಂತಿಕ ಹಲ್ಲೆ ನಡೆದಿತ್ತು.. ಮುಗಿದೇ ಹೋದೆ ಅಂತ ಕೈ ಮುಗಿದರು. ಬದುಕಿದ್ದರೆ ನಾಡಿನ ಜನತೆಗೆ ನನ್ನ ಬದುಕನ್ನು ಮೀಡಲಿದಡ್ತೇನೆ ಅಂದಿದ್ದೆ. ಆ ಸಮಾಧಾನ ನನಗಿದೆ.. ರೈತಪರ ಹೋರಾಟ, ದಲಿತರ ಹೋರಾಟಕ್ಕಾಗಿ ನಾನು ಹೋರಾಡಿದ್ದೇನೆ.
ಶಿವಮೊಗ್ಗದಲ್ಲಿ 50-60 ಸಾವಿರ ಜನರನ್ನು ಸೇರಿಸಿದ್ದೆ ರಾಜನಾಥ ಸಿಂಗ್ ಹೆಮ್ಮೆ ಪಟ್ಟಿದ್ದರು. ಕರ್ನಾಟಕ ರಾಜ್ಯದಲ್ಲಿ ಪಕ್ಷ ಬಲಪಡಿಸುವ ಕೆಲಸ ಮಾಡಿದ ಪರಿಣಾಮ ಈ ಸ್ಥಾನದಲ್ಲಿದ್ದೇನೆ.
ಕರ್ನಾಟಕದಲ್ಲಿ ಪಕ್ಷ ಕಟ್ಟಬೇಕಿದೆ ದೆಹಲಿಗೆ ಬರಲ್ಲ ಅಂತ ಹೇಳಿದೆ. ಆ ಸಮಯದಲ್ಲಿ ವಾಜಪೇಯಿ, ಅಡ್ವಾಣಿ, ಜೋಶಿ ಇವರ ಕಾರ್ಯಕ್ರಮದಲ್ಲಿ 200-300 ಜನ
ಸೇರ್ತಾ ಇರಲಿಲ್ಲ.. ಈ ಸಮಯದಲ್ಲಿ ನಾಡನಾದ್ಯಂತ ಹೋರಾಟ ಮಾಡಿದೆ. ಇವತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಹಲವರು ಜಾತಿಯ ವಿಷಬೀಜ ಬಿತ್ತಿದರೂ ಸಹ ಜನ ನಮ್ಮನ್ನ ಕೈಬಿಡಲಿಲ್ಲ.
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ