ದೆಹಲಿಯತ್ತ ಪ್ರಯಾಣ ಬೆಳಸಿದ ಯಡಿಯೂರಪ್ಪ : ವರಿಷ್ಠರೊಂದಿಗೆ ಮಾತುಕತೆ

Team Newsnap
1 Min Read

ಹೈಕಮಾಂಡ್​ನಿಂದ ತುರ್ತು ಬುಲಾವ್​ ಬಂದ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಇಂದು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ಪುತ್ರ ವಿಜಯೇಂದ್ರ ಕೂಡ ಒಂದೇ ಕಾರಿನಲ್ಲಿ ಏರ್​ಪೋರ್ಟ್​ಗೆ ಹೊರಟಿದ್ದಾರೆ.

ಇಂದು ಬೆಳಗ್ಗೆ 8.20ರ ಯುಕೆ-808 ವಿಮಾನದ ಮೂಲಕ ದೆಹಲಿಗೆ ಪ್ರಯಾಣಿಸಲಿರುವ ಸಿಎಂ, ಬೆಳಗ್ಗೆ 11.05ಕ್ಕೆ ದೆಹಲಿ ಏರ್‌ಪೋರ್ಟ್ ತಲುಪಲಿದ್ದಾರೆ.

ಭೇಟಿಯ ಕಾರ್ಯ ಸೂಚಿ ಏನು? :

ಸಂಪುಟ ವಿಸ್ತರಣೆಯ ಅನುಮತಿಗಾಗಿ ವರಿಷ್ಠರ ಜೊತೆ ಬಿಎಸ್​ವೈ ಚರ್ಚೆ ನಡೆಸಲಿದ್ದಾರೆ.
ಲೋಕಸಭಾ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸದ್ಯದಲ್ಲೇ ದಿನಾಂಕ ಘೋಷಣೆಯಾಗಲಿದೆ. ಈ ಹಿನ್ನೆಲೆ ಮಾತುಕತೆ ನಡೆಸಲಿದ್ದಾರೆ.

ಉಪ-ಚುನಾವಣೆಗಳಿಗೆ ಅಭ್ಯರ್ಥಿಗಳಾಗಲು ಬಿಜೆಪಿಯಲ್ಲಿ ಭಾರೀ ಫೈಟ್ ನಡೆದಿದೆ. ಅಭ್ಯರ್ಥಿಗಳ ವಿಚಾರವನ್ನೂ ಇತ್ಯರ್ಥ ಮಾಡಿಕೊಂಡು ಬರಲು ಸಿಎಂ ಯಡಿಯೂರಪ್ಪ ಹೈಕಮಾಂಡ್​ ಭೇಟಿಗೆ ಹೊರಟಿದ್ದಾರೆ.

ಅನುಮತಿ ಸಿಗುತ್ತೋ ಇಲ್ಲವೋ ಗೊತ್ತಿಲ್ಲ:

ದೆಹಲಿಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಯಡಿಯೂರಪ್ಪ, ರಾಜ್ಯದಲ್ಲಿ ಎದುರಾಗಲಿರುವ ಎರಡು ವಿಧಾನಸಭಾ ಹಾಗೂ ಒಂದು ಲೋಕಸಭಾ ಕ್ಷೇತ್ರದ ಉಪ- ಚುನಾವಣೆ ಹಿನ್ನೆಲೆ, ಅಭ್ಯರ್ಥಿಗಳು ಯಾರಾಗಬೇಕೆಂದು ಇಂದು ಚರ್ಚೆ ಮಾಡುತ್ತೇವೆ ಎಂದರು. ಗ್ರಾಮ ಪಂಚಾಯಿತಿ ಚುನಾವಣೆಯ ಗೆಲುವಿನ ಬಗ್ಗೆ ವರಿಷ್ಠರಿಗೆ ಮಾಹಿತಿ ನೀಡಿದ್ದೇನೆ. ಇಂದು ಕೂಡ ಗ್ರಾಮ ಪಂಚಾಯಿತಿ ಚುನಾವಣೆಯ ಗೆಲುವಿನ ಬಗ್ಗೆ ಮಾಹಿತಿ ನೀಡುತ್ತೇನೆ. ಇದರ ಜೊತೆಗೆ ಉಳಿದೆಲ್ಲ ವಿಚಾರಗಳ ಬಗ್ಗೆಯೂ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದ್ರು.

ಸಂಪುಟ ವಿಸ್ತರಣೆ ವಿಚಾರದ ಬಗ್ಗೆಯೂ ವರಿಷ್ಠರ ಜೊತೆ ಚರ್ಚಿಸುತ್ತೇನೆ. ಸಂಪುಟ ವಿಸ್ತರಣೆಗೆ ಇವತ್ತೇ ಅನುಮತಿ ಕೊಡ್ತಾರಾ ಇಲ್ವಾ ಅಂತ ಗೊತ್ತಿಲ್ಲ. ವರಿಷ್ಠರ ಜತೆ ಚರ್ಚೆ ಬಳಿಕ ಈ ಬಗ್ಗೆ ಸ್ಪಷ್ಟವಾಗುತ್ತದೆ ಎಂದು ಬಿಎಸ್​ವೈ ಹೇಳಿದರು.

Share This Article
Leave a comment