December 29, 2024

Newsnap Kannada

The World at your finger tips!

1492596c 9817 4fbb 8e74 62402a7777f9

ಯಡಿಯೂರಪ್ಪ ನಮ್ಮ ಕ್ಯಾಪ್ಟನ್: ಶಾಸಕ ಎಸ್.ಎ.ರಾಮದಾಸ್

Spread the love

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಮ್ಮ ಕ್ಯಾಪ್ಟನ್ ಆಗಿದ್ದು, ಮುಂದಿನ ಎರಡೂವರೆ ವರ್ಷವೂ ಅವರೇ ಆಡಳಿತ ನಡೆಸಲಿದ್ದಾರೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.

yediyurappa

ಸುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಅವರ ಸಚಿವ ಸಂಪುಟ ಸಹೋದ್ಯೋಗಿಗಳ ತಂಡದಲ್ಲಿ ಯಾರಿರಬೇಕು ಎಂಬುದನ್ನ ಅವರೇ ನಿರ್ಧರಿಸುತ್ತಾರೆ‌. ನನಗೂ ಅವಕಾಶ ಕೊಟ್ಟರೆ ಸ್ವಚ್ಛವಾಗಿ ಆಡಳಿತ ನಡೆಸುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಾನು ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಂಡಿಲ್ಲ. ಸಚಿವ ಸ್ಥಾನ ಸಿಕ್ಕರೆ ಹೆಚ್ಚಿನ ಜವಬ್ದಾರಿಯಿಂದ ಕೆಲಸ ಮಾಡುತ್ತೇನೆ. ಸಿಗದೆ ಇದ್ದರು ನಮ್ಮ ಕೆಲಸ ನಾವು ಮಾಡುತ್ತೇವೆ. ಯಡಿಯೂರಪ್ಪ ಅವರು ನಮ್ಮ ಮನೆಯ ಯಜಮಾನರು ಎಂದು ಹೇಳಿದರು.

Copyright © All rights reserved Newsnap | Newsever by AF themes.
error: Content is protected !!