January 6, 2025

Newsnap Kannada

The World at your finger tips!

yathnal

ಯಡಿಯೂರಪ್ಪನವರಿಗೆ ಸಿಡಿ ತೋರಿಸಿ ಇಬ್ಬರು ಮಂತ್ರಿಗಳಾಗಿದ್ದಾರೆ – ಯತ್ನಾಳ್

Spread the love

ಮುಖ್ಯಮಂತ್ರಿಗಳ ವಿರುದ್ಧ ಸಿಡಿ ಭೂತ ಬಿಟ್ಟು ಬ್ಲಾಕ್ ಮೇಲ್ ಮಾಡಿ ಇಬ್ಬರು ಮಂತ್ರಿ ಯಾಗುತ್ತಿದ್ದಾರೆ ಎಂದು ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ಬಾಂಬ್ ಸಿಡಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಂಬಂಧಿಸಿದ ಸಿಡಿಯೊಂದನ್ನು ತೋರಿಸಿ ಬ್ಲಾಕ್ ಮೇಲ್ ಮಾಡುವ ಮೂಲಕ ಇಬ್ಬರು ಸಚಿವರಾಗಿದ್ದಾರೆ ಎಂದು ನೇರವಾಗಿ ಹೇಳಿದರು.

ಸಿಡಿ ತೋರಿಸಿ ಸಚಿವರಾಗಿದ್ದಾರೆ ಎಂಬ ಇದೇ ಮಾತನ್ನು ಶಾಸಕ ವಿಶ್ವನಾಥ್ ಕೂಡ ಹೇಳಿದ್ದಾರೆ. ಹಾಗಾದ್ರೆ ಆ ಸಿಡಿ ಯಾವುದಿರಬಹುದು ಎಂಬ ಪ್ರಶ್ನೆ ಇಡೀ ಕರ್ನಾಟಕದ ಜನರನ್ನು ಕಾಡಿದೆ‌ ಎಂದರು.

ಹಿರಿತನ, ಅನುಭವ ಏನನ್ನೂ ಪರಿಗಣಿಸದ ಯಡಿಯೂರಪ್ಪ ಇಬ್ಬರನ್ನು ಸಚಿವರಾಗಿ ಮಾಡಿದ್ದಾರೆ. ಸಿಡಿ ಯೊಂದನ್ನು ಇಟ್ಟುಕೊಂಡು ಕಳೆದ ಮೂರು ತಿಂಗಳಿನಿಂದ ಯಡಿಯೂರಪ್ಪ ಅವರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಇವರಲ್ಲಿ ಒಬ್ಬರಂತೂ ಸಿಡಿ ತೋರಿಸಿ ಬ್ಲಾಕ್ ಮೇಲ್ ಮಾಡುವುದರ ಜೊತೆಗೆ ಸಿಎಂ ಪುತ್ರ ವಿಜೇಂದ್ರ ಅವರಿಗೆ ಹಣ ಕೊಟ್ಟು ಸಚಿವರಾಗಿದ್ದಾರೆ ಎಂದು ಯತ್ನಾಳ್ ಆರೋಪಿಸಿದ್ದಾರೆ.

ಯಡಿಯೂರಪ್ಪ ಅವರಿಂದ ಲಿಂಗಾಯಿತ, ವೀರಶೈವ ಸಮಾಜ ತಲೆತಗ್ಗಿಸುವಂತಾಗಿದೆ. ಒಂದಂತೂ ಸ್ಪಷ್ಟ. ಯಡಿಯೂರಪ್ಪ ಜೊತೆಗೆ ಲಿಂಗಾಯಿತ-ವೀರಶೈವರಿಲ್ಲ ಎಂದು ಯತ್ನಾಳ್ ಬಿಎಸ್ ವೈ ವಿರುದ್ಧ ಸಿಡಿಗುಂಡು ಹಾರಿಸಿದರು.

Copyright © All rights reserved Newsnap | Newsever by AF themes.
error: Content is protected !!