ಹನಮಂತ ಹರಿಜನ (21), ಮುರಳಿ ನಡವಿನಮನಿ (20) ನವೀನ್ ಗಾಜಿ (19) ಮೃತ ಯುವಕರು.
ಈ ಮೃತ ಯುವಕರು ಸೂರಣಗಿ ಗ್ರಾಮದ ನಿವಾಸಿಗಳು. ಯಶ್ ಬರ್ತ್ ಡೇಗಾಗಿ ಅಭಿಮಾನಿಗಳು ಗ್ರಾಮದಲ್ಲಿ ಕಟೌಟ್ ಕಟ್ಟಲು ಮುಂದಾಗಿದ್ದರು.
ಕಟೌಟ್ ಮೇಲೆ ಎತ್ತುತ್ತಿದ್ದಾಗ ಮೇಲೆ ಹಾದು ಹೋಗಿದ್ದ ಯುವಕರಿಗೆ ವಿದ್ಯುತ್ ಶಾಕ್ ತಗುಲಿದೆ. ಈ ವೇಳೆ ಅಲ್ಲೇ ನಿಂತುಕೊಂಡಿದ್ದ ಮಂಜುನಾಥ್ ಹರಿಜನ, ದೀಪಕ ಹರಿಜನ, ಪ್ರಕಾಶ ಮ್ಯಾಗೇರಿ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗ್ರಾಮದ ವಿಜಯ್ ದುರಂತದ ಬಗ್ಗೆ ಮಾಹಿತಿ ನೀಡಿ, . ನಾವು ವಿಚಾರ ತಿಳಿದು ಅಲ್ಲಿಗೆ ಹೋಗಿದ್ದೇವು. ತಮ್ಮ ಗ್ರಾಮದ ಜನರಿಗೆ ಸರ್ಪ್ರೈಸ್ ಕೊಡಬೇಕು ಅಂದುಕೊಂಡು ರಾತ್ರಿ 12 ಗಂಟೆಗೆ ಮಾತುಕತೆ ನಡೆಸಿ ಕಟೌಟ್ ಹಾಕಲು ಮುಂದಾಗಿದ್ದರು. ಆದರೆ ವಿಧಿ ಬರಹ ಬೇರೆಯದ್ದೇ ಆಗಿತ್ತು. 8 ರಿಂದ 10 ಹುಡುಗರು ಸೇರಿ ಕಟೌಟ್ ರೆಡಿ ಮಾಡಿದ್ದರು. ಅದಕ್ಕೆ ಕಬ್ಬಿಣದ ರಾಡ್ ಗಳನ್ನು ಬಳಸಿದ್ದರಿಂದ ಅನಾಹುತ ಆಗಿದೆ.
ಕಟೌಟ್ ರೆಡಿ ಮಾಡಿದ ಮೇಲೆ ಎತ್ತಿ ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಮೇಲೆ ಹಾದು ಹೋಗಿದ್ದ 11 ಕೆವಿ ವಿದ್ಯುತ್ ಲೈನ್ ಗೆ ತಾಗಿ ಅನಾಹುತ ಆಗಿದೆ. ಮೂವರು ಹುಡುಗರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ವಿದ್ಯುತ್ ಲೈನ್ ಗೆ ಕಟೌಟ್ ತಗುಲುತ್ತೆ ಎಂದು ಗೊತ್ತಿರಲಿಲ್ಲ. ಈ ರೀತಿಯ ಘಟನೆ ನಡೆಯಬಾರದಿತ್ತು. ಇದೊಂದು ಅಭಿಮಾನದ ದುರಂತ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು