ಕೆ ಜಿಎಫ್ -2 ಚಿತ್ರದ ಟೀಸರ್ ನಲ್ಲಿ
ನಾಯಕ ಯಶ್ ಸಿಗರೇಟ್ ಹಚ್ಚುವ ದೃಶ್ಯವಿದೆ . ‘ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಅನ್ನೋ ಸೂಚನೆಯನ್ನು ಟೀಸರ್ ನಲ್ಲಿ ಹಾಕಿರಲಿಲ್ಲ ಎಂಬ ಕಾರಣ ಕ್ಕಾಗಿ ಆರೋಗ್ಯ ಇಲಾಖೆ ಯಶ್, ನಿರ್ಮಾಪಕರಿಗೆ ನೋಟಿಸ್ ಜಾರಿ ಮಾಡಿದೆ.
ಟೀಸರ್ ಧೂಮಪಾನವನ್ನು ಪ್ರಚೋದಿಸುತ್ತದೆ ಹಾಗೂ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನನ್ನಗಳ ಕಾಯ್ದೆ-2003 ಸೆಕ್ಷನ್ 5ರ ಉಲ್ಲಂಘಟನೆಯಾಗಿದೆ. ಹೀಗಾಗಿ ಸಿಗರೇಟ್ ಸೇದುವ ದೃಶ್ಯವನ್ನು ತೆಗೆದುಹಾಕುವಂತೆ ಇಲಾಖೆ ನೋಟಿಸ್ ನಲ್ಲಿ ತಿಳಿಸಿದೆ.
ನೋಟಿಸ್ ಅಲ್ಲ- ಮನವಿ :
ಈ ಸಂಬಂಧ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಡಾ. ಸುಧಾಕರ್, ನಟ ಯಶ್ ಗೆ ನೋಟಿಸ್ ಕೊಟ್ಟಿಲ್ಲ. ಬದಲಿಗೆ ಅದೊಂದು ಮನವಿ ಅಷ್ಟೇ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮನವಿ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಬರೀ ಯಶ್ ಗೆ ಮಾತ್ರ ಅಲ್ಲ ಎಲ್ಲಾ ನಟರಿಗೂ ಮನವಿ ಮಾಡುತ್ತೇವೆ. ಸಾವಿರಾರು ಅಭಿಮಾನಿಗಳು ನಿಮ್ಮನ್ನು ಫಾಲೋ ಮಾಡುತ್ತಾರೆ. ಹಾಗಿರುವಾಗ ಸಿಗರೇಟ್ ಸೇದುವುದನ್ನ ಎಲ್ಲಾ ತೋರಿಸಬಾರದು. ಏಕೆಂದರ್ ಕ್ಯಾನ್ಸರ್ ಪೀಡಿತರು ಜಾಸ್ತಿ ಆಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇದನ್ನೆಲ್ಲ ತೋರಿಸಬಾರದು, ಜಾಗೃತಿ ಮೂಡಿಸಬೇಕು ಎಂದು ಸಚಿವರು ತಿಳಿಸಿದ್ದಾರೆ.
More Stories
ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು
ಮುಖ್ಯಮಂತ್ರಿ ವಿರುದ್ಧ ಅಪಪ್ರಚಾರ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ