December 28, 2024

Newsnap Kannada

The World at your finger tips!

ಟಿಪ್ಪು ಎಕ್ಸ್​ಪ್ರೆಸ್

ಟಿಪ್ಪು ಎಕ್ಸ್​ಪ್ರೆಸ್​​ ರೈಲು ಹೆಸರು ಬದಲಾವಣೆಗೆ ಯದುವೀರ್ ಒಡೆಯರ್​​ ಬೆಂಬಲ ?

Spread the love

ಟಿಪ್ಪು ಎಕ್ಸ್​ಪ್ರೆಸ್​ ಹೆಸರು ಬದಲಾವಣೆ ಮಾಡಿ ಒಡೆಯರ್​ ಹೆಸರಿಟ್ಟರೆ ಒಳ್ಳೆಯದು ಎಂದು
ರಾಜವಂಶಸ್ಥ ಯದುವೀರ್ ಒಡೆಯರ್ ಅಭಿಪ್ರಾಯ ಪಟ್ಟರು.

Tippu Express Train Name Change ?

ಈ ಕುರಿತು ಮಾತನಾಡಿದ ಯದುವೀರ್ ಒಡೆಯರ್ ಟಿಪ್ಪು ಟ್ರೈನ್ ನ ಹೆಸರು ಬದಲಾವಣೆ ಮಾಡುವುದು ಸರ್ಕಾರಕ್ಕೆ ಬಿಟ್ಟ ವಿಷಯ, ಒಡೆಯರ್​ ಎಂದು ಬದಲಾಯಿಸಿದರೆ ಒಳ್ಳೆಯದು ಎಂಬುದು ನನ್ನ ಅನಿಸಿಕೆ ಎಂದಿದ್ದಾರೆ.

ಯದುವೀರ್ ಒಡೆಯರ್

ಮೈಸೂರು ಸಂಸದರೇ ಒಡೆಯರ್​ ಹೆಸರಿನಲ್ಲಿ ಟ್ರೈನ್​ ಬರಬೇಕು ಎಂದಿದ್ದಾರೆ. ಇದು ಸರ್ಕಾರದ ಇಚ್ಛೆ ಆದರೇ ಇದಕ್ಕೆ ಜನಸಾಮಾನ್ಯರ ಬೆಂಬಲವೂ ಬೇಕು ಎಂದರು.

ಆಗಿನ ಕಾಲದಲ್ಲಿಯೇ ನಮ್ಮ ನಾಲ್ವಡಿ ಕೃಷ್ಣರಾಜ ಒಡೆಯರ್​, ಹತ್ತನೇ ಕೃಷ್ಣರಾಜ ಒಡೆಯರ್​ ರೈಲ್ವೆ ಸೇವೆಗೆ ಎಷ್ಟೆಲ್ಲಾ ಆದ್ಯತೆ ನೀಡಿದ್ದಾರೆ ಎಂಬುದರ ಬಗ್ಗೆ ಎಲ್ಲರಿಗೂ ತಿಳಿದಿದೆ. ಹೀಗಿರುವಾಗ ಒಡೆಯರ್​ ಎಂದು ಮರು ನಾಮಕರಣ ಮಾಡುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!