ಪ್ರಪಂಚದ ಅತ್ಯಂತ ಶಕ್ತಿಶಾಲಿ ಹಣ್ಣು : ಕಿವಿ

Team Newsnap
3 Min Read

ನೋಡಲು ಎಷ್ಟು ಡಿಫರೆಂಟ್ ಆಗಿದೆಯೋ ರುಚಿಯಲ್ಲೂ ಕೂಡ ಅಷ್ಟೇ ವಿಭಿನ್ನವಾದ ಹಣ್ಣು, ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಶಕ್ತಿ ಶಾಲಿ ಹಣ್ಣು, ಸೇಬಿಗಿಂತ ಐದು ಪಟ್ಟು ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಹಣ್ಣು. ದೇಹದ ಸ್ವಾಸ್ಯವನ್ನು ಹಾಳು ಮಾಡುವ ಎಲ್ಲಾ ಸಮಸ್ಯೆಗಳಿಗೆ ಕಿವಿ ಹಿಂಡುವ ಹಣ್ಣು ಯಾವುದು ಅಂತೀರಾ…. ಅದೇ ಹುಳಿ ಹುಳಿ ಸಿಹಿ ಸಿಹಿ ರುಚಿ ನೀಡುವ ಕಿವಿ ಹಣ್ಣು.

ಕಿವಿ ಹಣ್ಣಿನಲ್ಲಿರುವ ಪೋಷಕಾಂಶಗಳು

ಪೊಟ್ಯಾಸಿಯಮ್, ಫೈಬರ್, ವಿಟಮಿನ್ ಸಿ, ಫೋಲಿಕ್ ಆಮ್ಲ, ವಿಟಮಿನ್ ಇ ಮತ್ತು ಪಾಲಿಫಿನಾಲ್ಗಳು ಕಿವಿಯಲ್ಲಿ ಹೇರಳವಾಗಿ ಇರುತ್ತದೆ. ಈ ಹಣ್ಣು ಅಧಿಕ ಪೋಷಕಾಂಶಗಳನ್ನು ಹೊಂದಿರುವ ಹಣ್ಣು ಎಂಬುದಾಗಿ ರೂಟ್ಗರ್ಸ್ ವಿಶ್ವವಿಧ್ಯಾನಿಲಯದಲ್ಲಿ ಡಾ. ಪೌಲ್ ಲಾಚಾನ್ಸ್ ನಡೆಸಿದ ಅಧ್ಯಯನದಿಂದ ಧೃಢ ಪಟ್ಟಿದೆ. ಈ ಅಧ್ಯಯನದಲ್ಲಿ ಸಾಮಾನ್ಯವಾಗಿ ದಿನ ನಿತ್ಯ ತಿನ್ನುವ ಸುಮಾರು 27 ಹಣ್ಣುಗಳನ್ನು ತೆಗೆದುಕೊಂಡು ಪರೀಕ್ಷಿಸಿದಾಗ ಅದರಲ್ಲಿ ಕಿವಿ ಹಣ್ಣು ಇತರ ಎಲ್ಲಾ ಹಣ್ಣುಗಳಿಗಿಂತ ಅತ್ಯಾಧಿಕ ಪೋಷಕಾಂಶಗಳನ್ನು ಹೊಂದಿರುವ ಹಣ್ಣು ಎಂದು ತಿಳಿದು ಬಂದಿದೆಯಂತೆ. ಈ ಹಣ್ಣು ಯಾವ ರೋಗಗಳಲ್ಲಿ ಪರಿಣಾಮಕಾರಿ ಎಂದು ನಾವು ನಿಮಗೆ ಹೇಳೋಣ.

ಇದನ್ನು ಓದಿ –ಎದೆಗೂಡಿನೊಳಗಿನ ಪ್ರೀತಿಯ ಹಣತೆ ಆರದಿರಲಿ..!

ಈ ಹಣ್ಣಿನ ಸೇವನೆಯಿಂದ ಆಗುವ ಲಾಭಗಳು

  1. ಈ ಹಣ್ಣಿನ ಸೇವನೆಯಿಂದ ರೋಗನಿರೋಧಕ ಶಕ್ತಿ ಬಲಪಡುತ್ತದೆ. ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಋತುಮಾನದ ಕಾಯಿಲೆಗಳಿಗೆ ಗುರಿಯಾಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಈ ಹಣ್ಣನ್ನು ಸೇವಿಸಿದಾಗ ಇದರಲ್ಲಿರುವ ವಿಟಮಿನ್ ಸಿ ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
  2. ಕಿವಿ ಹಣ್ಣಿನ ಅತ್ಯಂತ ಮಹತ್ವದ ಆರೋಗ್ಯ ಪ್ರಯೋಜನವೆಂದರೆ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸದೆ ರಕ್ತವನ್ನು ತೆಳುಗೊಳಿಸುವ ಸಾಮರ್ಥ್ಯ. ಈ ಹಣ್ಣು ರಕ್ತ ಹೆಪ್ಪುಗಟ್ಟುವಿಕೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಅದ್ಭುತವಾದ ಏಜೆಂಟ್ ಆಗಿದ್ದು, ಹೃದಯದ ಆರೋಗ್ಯವನ್ನು ಸುಧಾರಿಸುವ ಅತ್ಯುತ್ತಮ ಹಣ್ಣುಗಳಲ್ಲಿ ಒಂದಾಗಿದೆ.
  3. ಖಾಲಿ ಹೊಟ್ಟೆಯಲ್ಲಿ ಕಿವಿಹಣ್ಣು ತಿನ್ನುವುದರಿಂದ ಹೃದಯಾಘಾತ ಮತ್ತು ಎದೆಯುರಿ ಮುಂತಾದ ಸಮಸ್ಯೆಗಳು ಕಡಿಮೆಯಾಗುತ್ತದೆ.
  4. ಕಿವಿ ಹಣ್ಣಿನಲ್ಲಿ ನಾರಿನಂಶ ಹೇರಳವಾಗಿರುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನೂ ನಿವಾರಿಸುತ್ತದೆ. ದಿನನಿತ್ಯ ಖಾಲಿ ಹೊಟ್ಟೆಯಲ್ಲಿ ಕಿವಿ ತಿನ್ನುವುದರಿಂದ ಹೊಟ್ಟೆ ಸ್ವಚ್ಛವಾಗಿರುತ್ತದೆ. ಜೊತೆಗೆ ಮಲಬದ್ಧತೆ, ಅಸಿಡಿಟಿ ಮತ್ತು ಗ್ಯಾಸ್ ಸಮಸ್ಯೆಗೆ ಮುಕ್ತಿ ದೊರೆಯುತ್ತದೆ.
  5. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಕಿವಿ ಹಣ್ಣನ್ನು ತಿನ್ನುವುದರಿಂದ ದೇಹದಲ್ಲಿನ ಪೋಷಕಾಂಶಗಳ ಕೊರತೆ ನೀಗುತ್ತದೆ.
  6. ಕಿವಿ ಹಣ್ಣು (kiwi fruit) ಹೆಚ್ಚು ಫೈಬರ್ ಗುಣವನ್ನು ಹೊಂದಿದ್ದು, ಇದು ಹಸಿವನ್ನು ಕಡಿಮೆ ಮಾಡಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
  7. ತಜ್ಞರು ಹೇಳುವ ಪ್ರಕಾರ ಕಿವಿ ಹಣ್ಣನ್ನು ನಿರಂತರವಾಗಿ ಸೇವಿಸುವುದರಿಂದ ಕರುಳು ಕ್ಯಾನ್ಸರ್ ನಿಂದ ದೂರವಿರಬಹುದು. ಈ ಮೂಲಕ ಕ್ಯಾನ್ಸರ್ ನಿರೋಧಕ ಆಹಾರವಾಗಿ ಕಿವಿ ಹಣ್ಣು ಹೆಚ್ಚು ಪ್ರಸಿದ್ಧಿ ಪಡೆದಿದೆ.
  8. ಕಿವಿಹಣ್ಣಿನಲ್ಲಿ ಕಿತ್ತಳೆ ಹಣ್ಣಿನಲ್ಲಿರುವುದಕ್ಕಿಂತ ಅಧಿಕ ಪಟ್ಟು ವಿಟಮಿನ್ ಸಿ ಹೊಂದಿದ್ದು ವಿಟಮಿನ್ ಸಿ ಅಸ್ತಮಾದಂತಹ ಕಾಯಿಲೆಗಳು ತಡೆಗಟ್ಟಲು ಸಹಾಯ ಮಾಡುತ್ತದೆ. ಮಕ್ಕಳು ವಾರದಲ್ಲಿ 5-6 ಕಿವಿ ಹಣ್ಣು ತಿಂದರೆ ಅವರಿಗೆ ಅಸ್ತಮಾ, ಉಸಿರಾಟದ ತೊಂದರೆಗಳು ಬರದಂತೆ ತಡೆಯುತ್ತದೆನ್ನುತ್ತಾರೆ ನುರಿತ ಆಹಾರ ತಜ್ಞರು.
  9. ಬಾಳೆ ಹಣ್ಣಿನಲ್ಲಿರುವ ಪೊಟ್ಯಾಷಿಯಂ ಅಂಶದಷ್ಟು ಈ ಕಿವಿ ಹಣ್ಣಿನಲ್ಲೂ ಇದೆ. ಇದರಲ್ಲಿ ಕ್ಯಾಲೋರಿ ಕಡಿಮೆ ಇರುವುದರಿಂದ ಆರೋಗ್ಯದ ಸ್ವಾಸ್ಥ್ಯಕ್ಕೆ ಒಳ್ಳೆಯದು ಹಾಗೂ ಇದರಲ್ಲಿರುವ ಸೋಡಿಯಂ ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವಲ್ಲಿ ಸಹಾಯಮಾಡುತ್ತದೆ.
  10. ಸಾಮಾನ್ಯವಾಗಿ ವಿಟಮಿನ್ ಇ ಇರುವ ಆಹಾರದಲ್ಲಿ ಕೊಬ್ಬಿನಂಶವಿರುತ್ತದೆ. ಆದರೆ ಕಿವಿ ಹಣ್ಣಿನಲ್ಲಿ ಕೊಬ್ಬಿನಂಶ ತುಂಬಾ ಕಡಿಮೆ ಇದ್ದು ವಿಟಮಿನ್ ಇ ಇರುವುದರಿಂದ
    ಇದು ಚರ್ಮದ ಆರೋಗ್ಯಕ್ಕೆ ಉತ್ತಮ.
  11. ಕಿವಿ ಹಣ್ಣು ಆಂಟಿ ಆಕ್ಸಿಡೆಂಟ್ ಒಳಗೊಂಡಿದ್ದು, ಚರ್ಮ ಹೊಳೆಯುವಂತೆ ಮಾಡುತ್ತದೆ.
  12. ಕಿವಿ ಹಣ್ಣಿನಲ್ಲಿರುವ ಸತು ಪುರುಷರಲ್ಲಿರುವ ಹಾರ್ಮೋನ್ ಟೆಸ್ಟೋಸ್ಟಿರೋನ್(testosterone) ಹೆಚ್ಚು ಮಾಡುವಲ್ಲಿ ಸಹಕಾರಿಯಾಗಿದೆ.
  13. ಕಿವಿ ಹಣ್ಣಿನಲ್ಲಿ ಪೊಟಾಷಿಯಂ ಅಂಶ ಜಾಸ್ತಿ ಇದ್ದು ಹೃದಯ ಬಡಿತ ಹಾಗೂ ರಕ್ತದೊತ್ತಡ ನಿವಾರಿಸುತ್ತದೆ.
  14. ಡೆಂಗ್ಯ್ಯೂ ಜ್ವರದಿಂದ ಬಳಲುತ್ತಿರುವವರು ಪ್ರತಿದಿನ ಕಿವಿಹಣ್ಣನ್ನು ತಿಂದರೆ ರಕ್ತಕಣವನ್ನು ಹೆಚ್ಚು ಮಾಡುತ್ತದೆ. ಹೀಗಾಗಿ ಡೆಂಘೀ ಸೋಂಕಿಗೆ ರಾಮಬಾಣವಾಗಿದೆ. .
  15. ಕಿವಿ ಹಣ್ಣಿನಲ್ಲಿ ಇತರ ಹಣ್ಣಿನಲ್ಲಿರುವುದಕ್ಕಿಂತ ಅಧಿಕ ಪ್ರಮಾಣದಲ್ಲಿ ಫಾಲಿಕ್ ಆಸಿಡ್ ಇದ್ದು ಗರ್ಭಿಣಿಯರು ನಿತ್ಯವೂ ತಿನ್ನುವುದರಿಂದ ಗರ್ಭಸ್ಥ ಶಿಶುವಿಗೂ ಸುರಕ್ಷೆ ನೀಡುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
  16. ಕಿವಿ ತುಂಬಾ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಈ ಹಣ್ಣು ಅಮೃತವಿದ್ದಂತೆ. ವರ್ಷವಿಡೀ ಮಾರುಕಟ್ಟೆಯಲ್ಲಿ ಸಿಗುವ ಈ ಹಣ್ಣನ್ನು ಸೂಪರ್ ಫುಡ್ ಎಂತಲೂ ಕರೆಯಲಾಗುತ್ತದೆ
sowmya sanath

ನೆನಪಿನಲ್ಲಿಡಬೇಕಾದ ಸಂಗತಿ : ಮೂತ್ರಪಿಂಡದ ಕಲ್ಲುಗಳ ಇತಿಹಾಸ ಅಥವಾ ಅಂತಹುದೇ ಹಣ್ಣುಗಳಿಗೆ ಅಲರ್ಜಿಯಂತಹ ಕೆಲವು ವೈದ್ಯಕೀಯ ಪರಿಸ್ಥಿತಿಗಳನ್ನು ಹೊಂದಿರುವ ವ್ಯಕ್ತಿಗಳು ಅದನ್ನು ಸೇವಿಸುವ ಮೊದಲು ಆರೋಗ್ಯ ವೃತ್ತಿಪರರೊಂದಿಗೆ ಸಮಾಲೋಚಿಸಬೇಕಾದುದು ಬಹಳ ಮುಖ್ಯ.

ಸೌಮ್ಯಾ ಸನತ್ ✍️

Share This Article
Leave a comment