ಇಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಅತೀ ಎತ್ತದಲ್ಲಿ ನಿರ್ಮಿಸಲಾಗಿರುವ “ಸೆಲಾ ಪಾಸ್ ದ್ವಿಪಥ ಸುರಂಗ” ಮಾರ್ಗವನ್ನು ಅನಾವರಣಗೊಳಿಸಿದ್ದಾರೆ.
ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶ, ಮೇಘಾಲಯ, ನಾಗಾ ಲ್ಯಾಂಡ್, ಸಿಕ್ಕಿಂ, ತ್ರಿಪುರಾ ಅಭಿವೃದ್ಧಿಗಾಗಿ ಒಟ್ಟು 55,000 ಸಾವಿರ ಕೋಟಿ ರೂಪಾಯಿ ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ಶುಕ್ರವಾರ ಅಸ್ಸಾಂಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಕಾಜಿರಂಗ ನ್ಯಾಷನಲ್ ಪಾರ್ಕ್ ನಲ್ಲಿ ಜಂಗಲ್ ಸಫಾರಿ ನಡೆಸಿದ್ದಾರೆ.
ಸೆಂಟ್ರಲ್ ಕೋಹೊರಾ ರಂಗೆ ಪಾರ್ಕ್ ನಲ್ಲಿ ಆನೆ ಸಫಾರಿ ಕೈಗೊಂಡಿದ್ದು, ಬಳಿಕ ಅರಣ್ಯಾಧಿಕಾರಿಗಳ ಜತೆ ಜೀಪ್ ಸಫಾರಿ ನಡೆಸಿದ್ದಾರೆ.
ಅರುಣಾಚಲ ಪ್ರದೇಶದ ಪಶ್ಚಿಮ ಕಮಿಂಗ್ ಮತ್ತು ತವಾಂಗ್ ಜಿಲ್ಲೆಗಳನ್ನು ಸೆಲಾ ಪಾಸ್ ದ್ವಿಪಥ ಸುರಂಗ ಮಾರ್ಗವು ಸಂಪರ್ಕಿಸುತ್ತದೆ.
2019ರಲ್ಲಿ ಸೆಲಾ ಪಾಸ್ ನಿರ್ಮಾಣಕ್ಕೆ ಪ್ರಧಾನಿ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದು , ಸೆಲಾ ಪಾಸ್ ವಾಸ್ತವ ಗಡಿ ನಿಯಂತ್ರಣ ರೇಖ್ ತಲುಪಲು ಇರುವ ಏಕೈಕ ಮಾರ್ಗವಾಗಿದೆ.ಮಾಜಿ ಕಾಂಗ್ರೆಸ್ ಶಾಸಕ ವಾಸು ಇನ್ನಿಲ್ಲ
ಅರುಣಾಚಲಪ್ರದೇಶದ ಸೆಲಾ ಪಾಸ್ ಸುರಂಗವು ಸರ್ವ ಋತು ಹವಾಮಾನ ಸಂಪರ್ಕವನ್ನು ಒದಗಿಸಲಿದ್ದು, ಅಂದಾಜು 825 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ .
More Stories
ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ