ವಿಶ್ವ ಸಂಸ್ಥೆಯು ೭೫ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಈ ವೇಳೆ ದೃಶ್ಯ ಸಂದೇಶ ಕಳುಹಿಸಿದ ಪ್ರಧಾನಿ ನರೇಂದ್ರ ಮೋದಿಯವರು ‘ಪ್ರಸ್ತುತ ವಾಸ್ತವಗಳನ್ನು ಪ್ರತಿಬಿಂಬಿಸುವ, ಸಮಕಾಲೀನ ಸಮಸ್ಯೆಗಳನ್ನು ಪರಿಹರಿಸುವ ಹಾಗೂ ಮಾನವ ಕಲ್ಯಾಣಕ್ಕೆ ಒತ್ತು ನೀಡುವ ಸುಧಾರಿತ ಬಹುಪಕ್ಷೀಯತೆ ಜಗತ್ತಿಗೆ’ ಎಂದು ಹೇಳಿದರು.
‘ನಾವು ಇಂದಿನ ಸವಾಲುಗಳನ್ನು ಹಳೆಯ ರಚನೆಗಳೊಂದಿಗೆ ಹೋರಾಡಲು ಸಾಧ್ಯವಿಲ್ಲ. ಸಮಗ್ರ ಸುಧಾರಣೆಗಳಿಲ್ಲದೆ ವಿಶ್ವಸಂಸ್ಥೆಯು ʼಆತ್ಮವಿಶ್ವಾಸದ ಬಿಕ್ಕಟ್ಟನ್ನುʼ ಎದುರಿಸುತ್ತಿದೆ’ ಎಂದು ಮೋದಿ ಹೇಳಿದ್ದಾರೆ.
ತನ್ನ ಅಸ್ತಿತ್ವದ ೭೫ ವರ್ಷಗಳನ್ನು ಪೂರೈಕೆ ಮಾಡುತ್ತಿರುವ ವಿಶ್ವಸಂಸ್ಥೆ, ಭವಿಷ್ಯದ ರಾಜಕೀಯ ಘೋಷಣೆಯನ್ನು ಅಂಗೀಕರಿಸುವ ಜೊತೆಗೆ, ಭಯೋತ್ಪಾದನೆಯನ್ನು ಎದುರಿಸಲು ಯಾಂತ್ರಿಕ ವ್ಯವಸ್ಥೆಯನ್ನು ಬಲಪಡಿಸುವ ಕರೆ ನೀಡಿದೆ.
ಈ ಘೋಷಣೆಯು ವಿಶ್ವಸಂಸ್ಥೆಯ ಸುಧಾರಣೆಯ ಅಗತ್ಯವನ್ನು ಅಂಗೀಕರಿಸಿದೆ ಎಂದು ಗಮನಿಸಿದ ಮೋದಿಯವರು ‘ಇಂದಿನ ಅಂತರ್
ಸಂ ಪರ್ಕಿತ ಜಗತ್ತಿಗೆ, ಇಂದಿನ ನೈಜತೆಗಳನ್ನು ಪ್ರತಿಬಿಂಬಿಸುವ, ಎಲ್ಲಾ ಭಾಗೀದಾರರಿಗೆ ಧ್ವನಿ ನೀಡುತ್ತದೆ, ಸಮಕಾಲೀನ ಸವಾಲುಗಳನ್ನು ಪರಿಹರಿಸುವ ಮತ್ತು ಮಾನವ ಕಲ್ಯಾಣವನ್ನು ಕೇಂದ್ರೀಕರಿಸುವ ಸುಧಾರಿತ ಬಹುಪಕ್ಷೀಯತೆಯ ಅಗತ್ಯವಿದೆ. ೧೯೪೫ರಲ್ಲಿ ರಚಿತವಾದ ಅಂಶಗಳು ಇಂದಿನ ಸಮಕಾಲೀನ ವಾಸ್ತವಗಳನ್ನು ಪ್ರತಿಬಿಂಬಿಸುವದಿಲ್ಲ’ ಎಂದು ಪ್ರತಿಪಾದಿಸಿದ್ದಾರೆ.
‘ನಮ್ಮ ಕಾರ್ಯ ವಿಧಾನಗಳು ವೇಗವನ್ನು ಹೆಚ್ಚಿಸಿಕೊಳ್ಳಬೇಕು. ಪ್ರಧಾನ ಕಾರ್ಯದರ್ಶಿ ನಡೆಸುತ್ತಿರುವ ಸುಧಾರಣೆಗಳನ್ನು ಎಲ್ಲರನ್ನೂ ಬೆಂಬಲಿಸುತ್ತೇವೆ. ವಿಶ್ವಸಂಸ್ಥೆಯ ಮೂರು ಪ್ರಮುಖ ಅಂಗಗಳ ಸುಧಾರಣೆಗಳಿಗಾಗಿ ನಾವು ಬದ್ಧರಾಗಿದ್ದೇವೆ. ಚರ್ಚೆಗಳಲ್ಲಿ ಹೊಸ ಜೀವನವನ್ನು ತುಂಬಲು ನಾವು ಬದ್ಧರಾಗಿದ್ದೇವೆ ಭದ್ರತಾ ಮಂಡಳಿಯ ಸುಧಾರಣೆಯ ಕುರಿತು ಮತ್ತು ಸಾಮಾನ್ಯ ಸಭೆಯನ್ನು ಪುನರುಜ್ಜೀವನಗೊಳಿಸುವ ಮತ್ತು ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯನ್ನು ಬಲಪಡಿಸುವ ಕೆಲಸವನ್ನು ಮುಂದುವರಿಸಿ” ಎಂದು ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.
ಭಾರತವು ೨೦೨೧ರಿಂದ ೨ ವರ್ಷಗಳ ಅವಧಿಗೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಶಾಶ್ವತವಲ್ಲದ ಸದಸ್ಯತ್ವ ಪಡೆದಿದೆ. ಈ ಹಿನ್ನಲೆಯಲ್ಲಿ ಮೋದಿಯವರ ಮಾತುಗಳು ಬಹಳ ಮಹತ್ವ ಪಡಿದಿವೆ.
More Stories
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ