December 19, 2024

Newsnap Kannada

The World at your finger tips!

Dr K Sudhakar 1581670361

sudhakar picture

ಮದುವೆ ನಂತರ ಮಕ್ಕಳನ್ನು ಹೆರಲು ಆಧುನಿಕ ಮಹಿಳೆಯು ಬಯಸಲ್ಲ: ಸಚಿವ ಸುಧಾಕರ್

Spread the love

ಆಧುನಿಕ ಮಹಿಳೆಯರು ಒಂಟಿಯಾಗಿರಲು ಬಯಸುತ್ತಾರೆ. ಮದುವೆ ಆದರೆ ಮಕ್ಕಳನ್ನು ಹೆರಲು ಬಯಸಲ್ಲ. ಇದು ಒಳ್ಳೆಯದಲ್ಲ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿರುವ ಮಾತುಗಳು ಇದೀಗ ವಿವಾದಕ್ಕೀಡಾಗಿದೆ.

ನಿಮ್ಹಾನ್ಸ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಚಿವರು, ವಿವಾಹಿತ ಸುಶಿಕ್ಷಿತ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಪೇಚಿಗೆ ಸಿಲುಕಿದ್ದಾರೆ.

ಅವಿಭಕ್ತ ಕುಟುಂಬಗಳ ನಶಿಸುವಿಕೆ ವಿಚಾರ ಪ್ರಸ್ತಾಪದ ಸಚಿವರು
ಮುತ್ತಾತ-ಮುತ್ತಜ್ಜಿ ಇರುವುದು ಬಿಡಿ, ನಾವು ನಮ್ಮ ಹೆತ್ತವರು ನಮ್ಮ ಜೊತೆಗೆ ಇರಲು ಬಯಸಲ್ಲ. ಇವತ್ತು ಇದನ್ನು ಹೇಳಲು ಬೇಸರ ಆಗುತ್ತೆ ಎಂದರು

ಭಾರತದಲ್ಲಿ ಬಹಳಷ್ಟು ಅಧುನಿಕ ಮಹಿಳೆಯರು ಒಂಟಿಯಾಗಿರಲು ಬಯಸ್ತಾರೆ. ಒಂದು ವೇಳೆ ಅವರು ಮದುವೆ ಆದರೂ ಅವರು ಮಕ್ಕಳಿಗೆ ಜನ್ಮ ನೀಡಲು ಬಯಸಲ್ಲ. ಅವರು ಬೇರೆಯವರಿಗಾಗಿ ಮಗು ಹೆರಲು ಇಷ್ಟಪಡುತ್ತಾಳೆ. ಹೀಗಾಗಿ ನಮ್ಮ ಆಲೋಚನೆಯಲ್ಲಿ ವಿಚಿತ್ರ ಬದಲಾವಣೆ ಆಗಿದೆ, ಅದು ಒಳ್ಳೆಯದಲ್ಲ ಎಂದಿದ್ದಾರೆ.

ಬಹಳಷ್ಟು ಮಹಿಳೆಯರು ಮದುವೆಯಾದರೂ ಮಕ್ಕಳಿಗೆ ಜನ್ಮ ಕೊಡಲು ಹಿಂಜರಿಯುತ್ತಿದ್ದು, ಬಾಡಿಗೆ ತಾಯಂದಿರಿಂದ ಮಕ್ಕಳನ್ನು ಪಡೆಯುತ್ತಾರೆ. ಅವರ ಆಲೋಚನೆಯ ದೃಷ್ಟಿಕೋನವೇ ಸಂಪೂರ್ಣ ಬದಲಾಗಿದೆ. ಇಂತಹ ದೃಷ್ಟಿಕೋನ ಸೂಕ್ತವಲ್ಲ ಎಂದು ಹೇಳಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಚಿವರ ಹೇಳಿಕೆಗೆ ಭಾರೀ ಆಕ್ರೋಶ ಹಾಗೂ ಟೀಕೆ ವ್ಯಕ್ತವಾಗುತ್ತಿದೆ.

Copyright © All rights reserved Newsnap | Newsever by AF themes.
error: Content is protected !!