ಭಾರತ ತಂಡ ವುಮೆನ್ಸ್ ಏಷ್ಯಾಕಪ್ ಟೂರ್ನಿಯಲ್ಲಿ ಅತ್ಯಧಿಕ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು ,ಬಾಂಗ್ಲಾದೇಶ್ ತಂಡ ಒಮ್ಮೆ ಟ್ರೋಫಿ ಮುಡಿಗೇರಿಸಿಕೊಂಡಿದೆ.
ಟೀಮ್ ಇಂಡಿಯಾ ಒಟ್ಟು 7 ಬಾರಿ ಏಷ್ಯಾಕಪ್ ಎತ್ತಿ ಹಿಡಿದಿದ್ದು ,ಇದೀಗ ಭಾರತ ಮಹಿಳಾ ತಂಡವು ಹಾಲಿ ಚಾಂಪಿಯನ್ ಆಗಿ ಈ ಬಾರಿಯ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ.
ಜುಲೈ 19 ರಿಂದ ಶ್ರೀಲಂಕಾದಲ್ಲಿ ಆರಂಭವಾಗಲಿರುವ ಈ ಬಾರಿಯ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿದ್ದು ,ಈ ತಂಡಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದೆ.
ಶುಕ್ರವಾರ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಯುಎಇ ಮತ್ತು ನೇಪಾಳ ತಂಡಗಳು ಮುಖಾಮುಖಿಯಾಗಲಿದ್ದು, ಇದೇ ದಿನ ನಡೆಯಲಿರುವ ಎರಡನೇ ಪಂದ್ಯ , ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ.ಇದನ್ನು ಓದಿ –ಆಣೆಕಟ್ಟೆಗಳ ಜಲಾಶಯಗಳ ನೀರಿನ ಮಟ್ಟ
ಏಷ್ಯಾಕಪ್ ತಂಡಗಳ ಗ್ರೂಪ್:
ಗ್ರೂಪ್- A
- ಭಾರತ
- ಪಾಕಿಸ್ತಾನ್
- ಯುಎಇ
- ನೇಪಾಳ
ಗ್ರೂಪ್- B
- ಶ್ರೀಲಂಕಾ
- ಬಾಂಗ್ಲಾದೇಶ್
- ಥೈಲ್ಯಾಂಡ್
- ಮಲೇಷ್ಯಾ
ಮಹಿಳಾ T20 ಏಷ್ಯಾ ಕಪ್ ವೇಳಾಪಟ್ಟಿ:
- ಯುಎಇ vs ನೇಪಾಳ ಜುಲೈ 19, 2024 2:00 PM
- ಭಾರತ vs ಪಾಕಿಸ್ತಾನ್ ಜುಲೈ 19, 2024 7:00 PM
- ಮಲೇಷ್ಯಾ vs ಥೈಲ್ಯಾಂಡ್ ಜುಲೈ 20, 2024 2:00 PM
- ಶ್ರೀಲಂಕಾ vs ಬಾಂಗ್ಲಾದೇಶ್ ಜುಲೈ 20, 2024 7:00 PM
- ಭಾರತ vs ಯುಎಇ ಜುಲೈ 21, 2024 2:00 PM
- ಪಾಕಿಸ್ತಾನ್ vs ನೇಪಾಳ ಜುಲೈ 21, 2024 7:00 PM
- ಶ್ರೀಲಂಕಾ vs ಮಲೇಷ್ಯಾ ಜುಲೈ 22, 2024 2:00 PM
- ಬಾಂಗ್ಲಾದೇಶ್ vs ಥೈಲ್ಯಾಂಡ್ ಜುಲೈ 22, 2024 7:00 PM
- ಪಾಕಿಸ್ತಾನ್ vs ಯುಎಇ ಜುಲೈ 23, 2024 2:00 PM
- ಭಾರತ vs ನೇಪಾಳ ಜುಲೈ 23, 2024 7:00 PM
- ಬಾಂಗ್ಲಾದೇಶ್ vs ಮಲೇಷ್ಯಾ ಜುಲೈ 24, 2024 2:00 PM
- ಶ್ರೀಲಂಕಾ vs ಥೈಲ್ಯಾಂಡ್ ಜುಲೈ 24, 2024 7:00 PM
- ಮೊದಲ ಸೆಮಿಫೈನಲ್ ಜುಲೈ 26, 2024 2:00 PM
- ಎರಡನೇ ಸೆಮಿಫೈನಲ್ ಜುಲೈ 26, 2024 7:00 PM
- ಫೈನಲ್ ಜುಲೈ 28, 2024 7:00 PM
More Stories
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
ಚುನಾವಣೆಗೂ ಮುನ್ನ ಕೇಜ್ರಿವಾಲ್ ಸಂಕಷ್ಟ – ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಇಡಿಗೆ ರಾಜ್ಯಪಾಲರ ಅನುಮತಿ