March 23, 2025

Newsnap Kannada

The World at your finger tips!

death,murder,women

women was murdered and hanged by husband's family

ಸೊಸೆ ಹತ್ಯೆ ಮಾಡಿ ಗಂಡನ ಮನೆಯವರೇ ನೇಣು ಹಾಕಿದ್ದಾರೆ – ಮೃತಳ ಕುಟುಂಬದವರ ಆರೋಪ

Spread the love

ಗೃಹಿಣಿಯೊಬ್ಬರು ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ . ಗಂಡನ ಮನೆಯವರೇ ಹತ್ಯೆ ಮಾಡಿ ನೇಣು ಹಾಕಿದ್ದಾರೆಂದು ಆರೋಪಿಸಿ ವ್ಯಕ್ತಿಯೊಬ್ಬರಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ಹಾಸನದ ವಿದ್ಯಾನಗರದಲ್ಲಿ ನಡೆದಿದೆ.

ಇದನ್ನು ಓದಿ –ಮಾಜಿ ಸಿಎಂ ಸಿದ್ಧರಾಮಯ್ಯ ಸೇರಿ 29 ಮಂದಿ ಕಾಂಗ್ರೆಸ್ ನಾಯಕರಿಗೆ ಸಮನ್ಸ್ ಜಾರಿ

ಕಳೆದ ಹತ್ತು ವರ್ಷದ ಹಿಂದೆ ಹೊಳೆನರಸೀಪುರ ತಾಲೂಕಿನ ಪಡುವಲಹಿಪ್ಪೆ ಗ್ರಾಮದ ರಂಜಿತಾ ಅವರನ್ನು, ಹಾಸನದ ವಿದ್ಯಾನಗರ ನಿವಾಸಿ ಅಕ್ಷಯ್‍ಗೆ ಮದುವೆ ಮಾಡಿಕೊಡಲಾಗಿತ್ತು.

ಹತ್ತು ವರ್ಷ ಕಳೆದರೂ ದಂಪತಿಗೆ ಮಕ್ಕಳಿರಲಿಲ್ಲ. ಗಂಡ ಅಕ್ಷಯ್ ಹಾಗೂ ಮನೆಯವರು ಈ ಕಾರಣಕ್ಕಾಗಿ ನಿರಂತರವಾಗಿ ರಂಜಿತಾಗೆ ಕಿರುಕುಳ ನೀಡಿ, ದೈಹಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ರಂಜಿತಾ ಪೋಷಕರು ಆರೋಪಿಸಿದ್ದಾರೆ

ಮಾಜಿ ಸಚಿವ ರೇವಣ್ಣ, ಹುಡುಗನ ಮನೆಯವರಿಗೆ ಬುದ್ದಿವಾದ ಹೇಳಿದ್ದರಂತೆ. ಆದರೂ ಗಂಡನ ಮನೆಯವರ ಕಿರುಕುಳ ತಪ್ಪಿರಲಿಲ್ಲ. ಇದೀಗ ರಂಜಿತಾ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ ಗಂಡನ ಮನೆಯವರೇ ಕೊಲೆ ಮಾಡಿ, ನೇಣು ಹಾಕಿದ್ದಾರೆ ಎಂದು ಕಿಡಿಕಾರಿದ್ದಾರೆ.

ರಂಜಿತಾ ಮನೆಯ ಕಿಟಕಿ ಗಾಜು, ಪಾಟ್‍ಗಳನ್ನು ಒಡೆದು ಹಾಕಿದ್ದಾರೆ. ರಂಜಿತಾ ಗಂಡ ಅಕ್ಷಯ್ ಮನೆಯವರ ಪರವಾಗಿ ಮಾತನಾಡಲು ಬಂದವರ ಮೇಲೂ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ವೇಳೆ ತಡೆಯಲು ಬಂದ ಪೊಲೀಸರನ್ನೂ ತಳ್ಳಾಟ ನೂಕಾಟ ನಡೆಸಿದ್ದಾರೆ. ಹಾಸನ ಬಡಾವಣೆ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!