December 26, 2024

Newsnap Kannada

The World at your finger tips!

sucide

ಹೃದಯ ಖಾಯಲೆಗೆ ಹೆದರಿ ಮಕ್ಕಳಿಬ್ಬರಿಗೆ ವಿಷ ಕೊಟ್ಟು ತಾಯಿ ಆತ್ಮಹತ್ಯೆ; ಮಗ ಬಚಾವ್

Spread the love

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ತಾಯಿಯೊಬ್ಬರು ತನ್ನ ಇಬ್ಬರು ಮಕ್ಕಳಿಗೆ ವಿಷ ಉಣಿಸಿ, ತಾನೂ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅದೃಷ್ಟವಶಾತ್ 6ವಷ೯ ಮಗು ಬದುಕಿದೆ. ಪರಿಸ್ಥಿತಿ ಗಂಭೀರವಾಗಿದೆ.

ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ. 27 ವರ್ಷದ ಯಲ್ಲವ್ವ ಚಂದಣ್ಣವರ ಆತ್ಮಹತ್ಯೆ ಮಾಡಿಕೊಂಡವರು.

ತಾಯಿ ನೀಡಿದ ವಿಷದ ಪರಿಣಾಮಕ್ಕೆ 2 ವರ್ಷದ ಮಗು ಕೂಡ ಸಾವನ್ನಪ್ಪಿದೆ. ಇನ್ನು 6 ವರ್ಷದ ಬಾಲಕ ಗಂಭೀರ ಸ್ಥಿತಿಯಲ್ಲಿ ಇದ್ದು, ನರಗುಂದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೊದಲು ತಾಯಿ ಕ್ರಿಮಿನಾಶಕ ಸೇವನೆ ಮಾಡಿ ಬಳಿಕ ಮಕ್ಕಳಿಗೆ ಕುಡಿಸಿದ್ದಾರೆ ಎನ್ನಲಾಗಿದೆ. ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಳೆ ಆಲೂರಿನಲ್ಲಿ ನದಿಗೆ ಹಾರಿದ್ದ ತಾಯಿ ಮಕ್ಕಳ ಪ್ರಕರಣದ ಬೆನ್ನಲ್ಲೆ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

Copyright © All rights reserved Newsnap | Newsever by AF themes.
error: Content is protected !!