ಮಹಿಳಾ ಡಿಸಿಪಿ ಐಶ್ವರ್ಯ ದರ್ಪ : ತನ್ನನ್ನು ಗುರುತಿಸದ ಮಹಿಳಾ ಪೇದಗೆ ಎರಡು ದಿನ ಶಿಕ್ಷೆ !

Team Newsnap
1 Min Read

ಮಾಸ್ಕ್ ಹಾಕಿದ್ದ‌ ತನ್ನನ್ನು ಗುರುತಿಸದೇ ಠಾಣೆಯ ಬಳಿ ತಡೆದ ಮಹಿಳಾ ಪೇದೆಗೆ ಎರಡು ದಿನಗಳ ಕಾಲ ಸಂಚಾರಿ ಪೋಲಿಸ್ ಕೆಲಸ ಮಾಡುವ ಶಿಕ್ಷೆ ವಿಧಿಸಿದ್ದಾರೆ ಮಹಿಳಾ ಡಿಸಿಪಿ ಐಶ್ವರ್ಯ. ‌
ಲೇಡಿ ಡಿಸಿಪಿ ಐಶ್ವರ್ಯ ನೀಡಿದ ಶಿಕ್ಷೆಯ ಬಗ್ಗೆ ಹಿರಿಯ ಅಧಿಕಾರಿಗಳೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ, ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.

ಕೇರಳದ ಕೊಚ್ಚಿಯಲ್ಲಿ ಜನವರಿ 1ರಂದು ಡಿಸಿಪಿ ಆಗಿ ಐಶ್ವರ್ಯಾ ಅಧಿಕಾರ ವಹಿಸಿಕೊಂಡಿದ್ದಾರೆ. ಆಕೆ ಕಳೆದ ಭಾನುವಾರದಂದು ಸ್ಥಳೀಯ ಪೊಲೀಸ್​ ಠಾಣೆಗೆ ಇನ್​ಸ್ಪೆಕ್ಷನ್​ಗೆ ತೆರಳಿದ್ದಾರೆ. ಈ ವೇಳೆ ಪೊಲೀಸ್​ ಸಮವಸ್ತ್ರವನ್ನು ಧರಿಸದೆ, ಸಾಮಾನ್ಯ ಬಟ್ಟೆಯಲ್ಲೇ ಹೋಗಿದ್ದಾರೆ. ಪೊಲೀಸ್​ ಕಾರನ್ನು ಠಾಣೆಯಿಂದ ಸ್ವಲ್ಪ ದೂರದಲ್ಲೇ ನಿಲ್ಲಿಸಿ, ಮಾಸ್ಕ್​ ಧರಿಸಿ, ಠಾಣೆಗೆ ಕಾಲಿಟ್ಟಿದ್ದಾರೆ. ಆಗ ಮಹಿಳಾ ಪೊಲೀಸ್​ ಪೇದೆ ಯೊಬ್ಬರು ಈಕೆಯನ್ನು ದಾರಿಯಲ್ಲೇ ತಡೆದು ಏನಾಗಬೇಕಿತ್ತು ಎಂದು ಕೇಳಿದ್ದಾರೆ.

ಉನ್ನತ ಹುದ್ದೆಯಲ್ಲಿರುವ ನನ್ನನ್ನು ಗುರುತಿಸದೆ, ದಾರಿಯಲ್ಲೇ ತಡೆದರೆಂಬ ಸಿಟ್ಟಿನಿಂದ ಐಶ್ವರ್ಯ ಆ ಪೇದೆಗೆ ಎರಡು ದಿನಗಳ ಕಾಲ ಟ್ರಾಫಿಕ್​ ವಿಭಾಗದಲ್ಲಿ ಕೆಲಸ ಮಾಡುವ ಶಿಕ್ಷೆ ನೀಡಿದ್ದಾರೆ.

ಪೊಲೀಸರೆಂದ ಮೇಲೆ ಯಾವಾಗಲೂ ಅಲರ್ಟ್​ ಆಗಿರಬೇಕು. ಉನ್ನತ ಅಧಿಕಾರಿಗಳ ಬಗ್ಗೆಯೂ ಮಾಹಿತಿ ಇರಬೇಕು. ಆ ಪೇದೆಗೆ ಆ ಮಾಹಿತಿ ಇಲ್ಲದ ಹಿನ್ನೆಲೆಯಲ್ಲಿ ಶಿಕ್ಷೆ ನೀಡಿದ್ದೇನೆ ಎಂದು ಆಕೆ ಹೇಳಿಕೊಂಡಿದ್ದಾರೆ.

ಆದರೆ ಐಶ್ವರ್ಯ ಅಧಿಕಾರ ವಹಿಸಿಕೊಂಡು ಕೇವಲ ಒಂದು ವಾರವಷ್ಟೇ ಆಗಿರುವುದು. ಅದರಲ್ಲೂ ಮಾಸ್ಕ್​ ಧರಿಸಿದಾಗ ನಮ್ಮವರನ್ನೇ ಗುರುತಿಸುವುದು ಕಷ್ಟ. ಹೀಗಿರುವಾಗ ಆಕೆಯನ್ನು ಗುರುತಿಸುವುದು ಪೇದೆಗೆ ಕಷ್ಟವಾಗಿದೆ. ಕರೊನಾ ಕಾರಣದಿಂದ ಠಾಣೆಗೆ ಹೆಚ್ಚು ಜನರು ಬರುವಂತಿಲ್ಲ ಎನ್ನುವ ನಿಯಮವಿದೆ. ಅದರಿಂದಾಗಿಯೇ ಆಕೆ ವಿಚಾರಣೆ ಮಾಡಿದ್ದಾಗಿ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಅಧಿಕಾರ ವಹಿಸಿಕೊಂಡು 15 ದಿನಗಳೊಳಗೆ ಇಂತಹ ಶಿಕ್ಷೆ ನೀಡುವುದು ತಪ್ಪಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Share This Article
Leave a comment