ಪ್ರೇಮ ನಿವೇದನೆಯನ್ನು ಒಪ್ಪಲಿಲ್ಲ ಎಂಬ ಕಾರಣಕ್ಕಾಗಿ ಯುವಕನೊಬ್ಬ ವಿದ್ಯಾರ್ಥಿನಿಯನ್ನು 14 ಬಾರಿ ಇರಿದು, ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಇದನ್ನು ಓದಿ –ರಾಜ್ಯಾದ್ಯಂತ ಏಕಕಾಲಕ್ಕೆ 50 ಕಡೆಗಳಲ್ಲಿ IT ದಾಳಿ: ಬೆಂಗಳೂರಿನ ಉದ್ಯಮಿಗಳಿಗೆ ಶಾಕ್
ತಮಿಳುನಾಡಿನ ತಿರುಚ್ಚಿಯಲ್ಲಿ 16 ವರ್ಷದ ವಿದ್ಯಾರ್ಥಿನಿ ಪ್ರೀತಿಯನ್ನು ನಿರಾಕರಿಸಿದ್ದಕ್ಕಾಗಿ 22 ವರ್ಷದ ಯುವಕ ಚಾಕುವಿನಿಂದ 14 ಬಾರಿ ಇರಿದಿದ್ದಾನೆ.
ಈ ಆರೋಪಿಯನ್ನು ಕೇಶವನ್ ಎಂದು ಗುರುತಿಸಲಾಗಿದೆ, ಪೊಲೀಸರು ಆತನನ್ನು ಹುಡುಕಲು ಮೂರು ವಿಶೇಷ ತಂಡಗಳನ್ನು ರಚಿಸಿಕೊಂಡಿದ್ದರು. ಆದರೆ ಅವನು ಶವವಾಗಿ ಪತ್ತೆಯಾಗಿದ್ದಾನೆ
ತಿರುಚ್ಚಿಯ ಅತಿಕುಲಂ ನಿವಾಸಿಯಾಗಿರುವ ವಿದ್ಯಾರ್ಥಿನಿ 11ನೇ ತರಗತಿ ಓದುತ್ತಿದ್ದಳು. ಪರೀಕ್ಷೆ ಮುಗಿಸಿ ಸಂತ್ರಸ್ತೆ ತನ್ನ ಸಂಬಂಧಿಯನ್ನು ಭೇಟಿಯಾಗಲು ತೆರಳುತ್ತಿದ್ದಾಗ ಆರೋಪಿ ಕೇಶವನ್ ಆಕೆಯನ್ನು ಹಿಂಬಾಲಿಸಿಕೊಂಡು ರೈಲ್ವೇ ಮೇಲ್ಸೇತುವೆ ಬಳಿ ತಡೆದಿದ್ದಾನೆ.
ಈ ವೇಳೆ ಕೇಶವನ್ ಸಂತ್ರಸ್ತೆಯನ್ನು ಪ್ರೀತಿಸುವಂತೆ ಒತ್ತಾಯಿಸಿದ್ದಾನೆ. ಆದರೆ ಆಕೆ ನಿರಾಕರಿಸಿದಳು
ತಕ್ಷಣ ಅವಳನ್ನು 14 ಬಾರಿ ಚುಚ್ಚಿದ್ದಾನೆ. ಸಹಾಯಕ್ಕಾಗಿ ಸಂತ್ರಸ್ತೆ ಕಿರುಚಿಕೊಂಡಿದ್ದಾಳೆ ಆರೋಪಿ ಚಾಕನ್ನು ಅಲ್ಲೇ ಎಸೆದು ಓಡಿ ಹೋಗಿದ್ದಾನೆ.
ಶವವಾಗಿ ಪತ್ತೆಯಾದ ಆರೋಪಿ :
ಈ ಘಟನೆಯನಂತರ ಮಂಗಳವಾರ ರಾತ್ರಿ ರೈಲ್ವೆ ಹಳಿ ಮೇಲೆ ಆರೋಪಿ ಕೇಶವನ್ ಶವವಾಗಿ ಪತ್ತೆಯಾಗಿದ್ದಾನೆ. ಕೇಶವನ್‍ನನ್ನು ಹಿಡಿಯಲು ಪೊಲೀಸರು ಮೂರು ತಂಡಗಳನ್ನು ರಚಿಸಿದಾಗ, ಮನಪ್ಪರೈ ಬಳಿಯ ರೈಲ್ವೆ ಹಳಿಗಳ ಮೇಲೆ ಶವವೊಂದು ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕೆ ಹೋಗಿ ಶವದ ಪಕ್ಕದಲ್ಲಿದ್ದ ಫೋನ್‍ನಲ್ಲಿ ಅವರ ಅಪ್ಪನಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ತಂದೆಯೂ ಅದು ಕೇಶವನ್ ಎಂದು ಗುರುತಿಸಿದ್ದಾರೆ.
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ