January 28, 2026

Newsnap Kannada

The World at your finger tips!

WhatsApp Image 2024 09 23 at 10.26.51 AM

ಬೆಂಗಳೂರಿನಲ್ಲಿ ಮಹಿಳೆಯನ್ನು 50 ತುಂಡಾಗಿ ಕತ್ತರಿಸಿ ಹತ್ಯೆ ಪ್ರಕರಣ: ಇಬ್ಬರು ವಶಕ್ಕೆ

Spread the love

ಬೆಂಗಳೂರು: ವೈಯಾಲಿಕಾವಲ್ ನ ಬಸಪ್ಪ ಗಾರ್ಡನ್ ಪೈಪ್ ಲೈನ್ ರಸ್ತೆಯ ಮನೆಯಲ್ಲಿ ನಡೆದ ಮಹಾಲಕ್ಷ್ಮಿ(29) ಹತ್ಯೆ ಪ್ರಕರಣದಲ್ಲಿ ಇಬ್ಬರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ.

ಪ್ರಿಯಕರ ಸೇರಿದಂತೆ ನಾಲ್ವರು ಕೊಲೆ ಮಾಡಿರುವ ಶಂಕೆ ಇದೆ ಎಂದು ಸ್ನೇಹಿತರು ಮಹಾಲಕ್ಷ್ಮಿ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.

ನಾಲ್ವರಿಂದ ಕೃತ್ಯ ನಡೆದ ಶಂಕೆ ಹಿನ್ನಲೆಯಲ್ಲಿ ತನಿಖೆ ಚುರುಕುಗೊಳಿಸಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಭಾನುವಾರ ನಡೆದ ಮರಣೋತ್ತರ ಪರೀಕ್ಷೆಯ ವೇಳೆ ಮೃತದೇಹವನ್ನು 50 ತುಂಡುಗಳಾಗಿ ಕತ್ತರಿಸಿರುವುದು ದೃಢಪಟ್ಟಿದೆ.ಇಂದಿನಿಂದ ರಾಜ್ಯದಾದ್ಯಂತ 20 ಜಿಲ್ಲೆಗಳಲ್ಲಿ ಭಾರಿ ಮಳೆ

ಕೊಲೆಯಾದ ಮಹಾಲಕ್ಷ್ಮಿ ಬಳಸುತ್ತಿದ್ದ ಮೊಬೈಲ್ ಸಂಖ್ಯೆ ಪಡೆಯಲಾಗಿದ್ದು ,ಸುತ್ತಮುತ್ತಲಿನ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಕೂಡ ವಶಕ್ಕೆ ಪಡೆದು ತನಿಖೆ ಮುಂದುವರೆಸಲಾಗಿದೆ.

error: Content is protected !!