ವಿಜಯನಗರ ಬಳಿಯ ಅತ್ತಿಗುಪ್ಪೆ ಮೂಲದ ಅನುಷಾ ಸಾವನ್ನಪ್ಪಿದ ಮಹಿಳೆ.
ಬೆಂಗಳೂರಿನ ನಾಯಂಡಹಳ್ಳಿ ಸಿಗ್ನಲ್ ಬಳಿ ಅತಿ ವೇಗವಾಗಿ ಬರುತ್ತಿದ್ದ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ನಲ್ಲಿದ್ದ ಅನುಷಾ ಸಾವನ್ನಪ್ಪಿದ್ದಾರೆ.
ಜೊತೆಗೆ ಬೈಕ್‌ನಲ್ಲಿದ್ದ ತಾಯಿ ವನಜಾಕ್ಷಿ ಸ್ಥಿತಿ ಗಂಭೀರವಾಗಿದೆ ಕಾಲು ಕಟ್ ಆಗಿದೆ. ಇನ್ನೂ 7 ವರ್ಷದ ಮಗ ಆರ್ಯನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಈ ಹಿನ್ನೆಲೆಯಲ್ಲಿ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವೇಳೆ ಆ ಜಾಗದಿಂದ 50 ಮೀ. ಅಂತರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಿಂತಿತ್ತು. ಅಪಘಾತ ಮಾಡಿ ನಿಲ್ಲಿಸದೇ ವೇಗವಾಗಿ ಪರಾರಿಯಾಗುತ್ತಿದ್ದ ಲಾರಿಯನ್ನು ನೋಡಿ ಕೆಎಸ್‌ಆರ್‌ಟಿಸಿ ಚಾಲಕ ಲಾರಿಯನ್ನು ತಡೆಯುವುದಕ್ಕೆ ಮುಂದಾಗಿ ಬಸ್ ಅನ್ನು ಅಡ್ಡಲಾಗಿ ನಿಲ್ಲಿಸಿದ್ದಾನೆ.
ಬಸ್ ಅಡ್ಡ ಬರುತ್ತಿದ್ದಂತೆ ಚಾಲಕ ಲಾರಿಯಿಂದಲೇ ಜಿಗಿದು ಓಡಿ ಹೋಗಿದ್ದಾನೆ. ಪರಿಣಾಮ ಕೆಎಸ್‌ಆರ್‌ಟಿಸಿ ಬಸ್‌ಗೆ (KSRTC Bus) ಲಾರಿ ಡಿಕ್ಕಿಯಾಗಿ ನಿಂತಿದೆ. ಭೀಕರ ಅಪಘಾತದ ಪರಿಣಾಮ ನಾಯಂಡಹಳ್ಳಿ ಸಿಗ್ನಲ್‌ನ 4 ಕಡೆಗೆ ತಟ್ಟಿದ್ದು, ಸುಮಾರು 2 ಗಂಟೆಗಳ ನಾಲ್ಕೈದು ಕಿಮೀ ಜಾಮ್ ಆಗಿ ವಾಹನ ಸವಾರರು ಪರದಾಡಿದರು.ಇದನ್ನು ಓದಿ –ಶಾಸಕ ರೇಣುಕಾಚಾರ್ಯ ವಿರುದ್ದ ಬೆಂಗಳೂರಿನಲ್ಲಿ ನೀತಿ ಸಂಹಿತಿ ಉಲ್ಲಂಘನೆ ಕೇಸು ದಾಖಲು
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು