ಆಸೆ ಈಡೇರಿಸದಿದ್ದರೆ ಕೇಸ್ ಹಾಕಿಸುವೆ ಎಂದು ಹಿರಿಯ ಪೋಲಿಸ್ ಅಧಿಕಾರಿಯಿಂದ ಮಹಿಳೆ ಧಮ್ಕಿ ಹಾಕಿದ್ದಾರೆ.
ಹೀಗಾಗಿ ಆ ಮಹಿಳೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧವೇ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಕಳೆದ ಡಿಸೆಂಬರ್ ನಲ್ಲಿ ಮಹಿಳೆ ಗೃಹ ಇಲಾಖೆಗೆ ದೂರು ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲಾಜೆಸ್ಟಿಕ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಗೆ
ಲೈಂಗಿಕ ಕಿರುಕುಳ ನೀಡಿರುವ ಪೊಲೀಸ್ ಅಧಿಕಾರಿ ಈ ಮುನ್ನ ಪೊಲೀಸ್ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದರು. ಈ ವೇಳೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಹೇಳಲಾಗಿದೆ.
ಎನ್ ಜಿ ಒ ಒಂದರ ಜೊತೆ ಗುರುತಿಸಿಕೊಂಡಿದ್ದ ಮಹಿಳೆ ಮತ್ತೊಬ್ಬ ಮಹಿಳೆ ಜೊತೆ ಅಧಿಕೃತ ಕೆಲಸದ ಮೇಲೆ ಈ ಅಧಿಕಾರಿಯನ್ನು ಭೇಟಿ ಮಾಡಿದ್ದರು. ಈ ವೇಳೆ ಅವರು ಮಹಿಳೆಯ ಮೊಬೈಲ್ ನಂಬರ್ ತೆಗೆದುಕೊಂಡಿದ್ದರು,
ರಾತ್ರಿ 11 ಗಂಟೆಗೆ ಕರೆ ಮಾಡಿದ ಅಧಿಕಾರಿ ಆಕೆಯನ್ನು ಮನೆಗೆ ಬರುವಂತೆ ಹೇಳಿದ್ದಾರೆ, ಆ ವೇಳೆ ಮಹಿಳೆ ಅವರ ಮನೆಗೆ ತೆರಳಿದ್ದಾರೆ.
ಆಕೆಯ ಜೊತೆ ಸಂಬಂಧ ಹೊಂದಲು ಆಸಕ್ತಿ ಇರುವುದಾಗಿ ಅಧಿಕಾರಿ ತಿಳಿಸಿದ್ದಾರೆ, ಆದರೆ ಇದಕ್ಕೆ ನಿರಾಕರಿಸಿದ ಮಹಿಳೆ, ತಾನು ವಿವಾಹಿತೆ ಎಂದು ಹೇಳಿ ಕೂಡಲೇ ಅಲ್ಲಿಂದ ಹೊರಟಿದ್ದಾರೆ, ಅದಾದ ನಂತರ ಅಧಿಕಾರಿ ಆಕೆಯ ಮೊಬೈಲ್ ಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಾರೆ. ತನ್ನ ಆಸೆ ಈಡೇರಿಸಿದಿದ್ದರೇ ದೂರು ದಾಖಲಿಸುವ ಬೆದರಿಕೆ ಒಡ್ಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ,
ಮಹಿಳೆ ನೀಡಿರುವ ದೂರು ಗೃಹ ಇಲಾಖೆ ಗಮನಕ್ಕೆ ಬಂದಿದೆ. ಅಧಿಕಾರಿಯನ್ನು ಕರೆಸಿ ವಿಚಾರಣೆ ಮಾಡುವುದಾಗಿ ಹಿರಿಯ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಗೊತ್ತಾಗಿದೆ.
- ತಿರುಪತಿ ದೇವಾಲಯದಲ್ಲಿ ಬೆಂಕಿ ಅವಘಡ: ಲಡ್ಡು ವಿತರಣಾ ಕೌಂಟರ್ನಲ್ಲಿ ಶಾರ್ಟ್ ಸರ್ಕ್ಯೂಟ್
- ರಾಜ್ಯದಲ್ಲಿ ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನಾಂಕ ನಿಶ್ಚಿತ
- ರಸ್ತೆ ಅಪಘಾತ ಸಂತ್ರಸ್ತರಿಗೆ ನೆರವಾದವರಿಗೆ ₹25,000 ಬಹುಮಾನ: ಕೇಂದ್ರ ಸರ್ಕಾರ
- ರಾಜ್ಯದ ಈ ಪ್ರದೇಶಗಳಲ್ಲಿ ಮಳೆಯ ಮುನ್ಸೂಚನೆ
- ಪಾಸ್ಪೋರ್ಟ್ ಸೇವೆ ವಿಸ್ತರಣೆ: ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ
More Stories
ರಾಜ್ಯದಲ್ಲಿ ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನಾಂಕ ನಿಶ್ಚಿತ
ರಸ್ತೆ ಅಪಘಾತ ಸಂತ್ರಸ್ತರಿಗೆ ನೆರವಾದವರಿಗೆ ₹25,000 ಬಹುಮಾನ: ಕೇಂದ್ರ ಸರ್ಕಾರ
ರಾಜ್ಯದ ಈ ಪ್ರದೇಶಗಳಲ್ಲಿ ಮಳೆಯ ಮುನ್ಸೂಚನೆ