ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮಹಿಳೆಯೊಬ್ಬರಿಗೆ ಕಚ್ಚಿ ಗಾಯಗೊಳಿಸಿ ಪರಿಣಾಮ ದರ್ಶನ್ ವಿರುದ್ದ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಮಾಡಲಾಗಿದೆ.
ಮೂರು ದಿನಗಳ ಹಿಂದೆ ದರ್ಶನ್ ಮನೆ ಮುಂದೆ ಅಮಿತ್ ಜಿಂದಾಲ್ ಎಂಬ ಮಹಿಳೆ ತನ್ನ ಕಾರ್ ಪಾರ್ಕ್ ಮಾಡಿದ್ದರು.
ತಮ್ಮ ಕಾರ್ ತೆಗೆಯುವ ವೇಳೆ ಮಹಿಳೆ, ನಾಯಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಮಧ್ಯೆ ಜಗಳ ಆಗಿದೆ. ಇದರ ಪರಿಣಾಮ ದರ್ಶನ್ ವಿರುದ್ಧ ಮಹಿಳೆ ದೂರು ನೀಡಿದ್ದಾರೆ.
ಈ ಸಂಬಂಧ ಮಾತಾಡಿದ ಮಹಿಳೆ, ನಾನು ಖಾಸಗಿ ಆಸ್ಪತ್ರೆಯೊಂದಕ್ಕೆ ಭೇಟಿ ಕೊಟ್ಟಿದ್ದೆ. ನನ್ನ ಕಾರನ್ನು ದರ್ಶನ್ ಮನೆ ಬಳಿ ಖಾಲಿ ಸೈಟಿನಲ್ಲಿ ನಿಲ್ಲಿಸಿದ್ದೆ. ಕಾರ್ ತೆಗೆದುಕೊಳ್ಳಲು ಬಂದಾಗ ಅದೇ ಜಾಗದಲ್ಲಿ ನಾಯಿ ಇತ್ತು. ಆಗ ಆ ನಾಯಿಯನ್ನು ಕಟ್ಟಿ ಎಂದು ಕೇಳಿದೆ. ಅದಕ್ಕೆ ನಾಯಿಯನ್ನು ನೋಡಿಕೊಳ್ಳುತ್ತಿದ್ದ ನಿರ್ಲಕ್ಷ್ಯ ತೋರಿದ.
ಆಗ ಮಾತಿಗೆ ಮಾತು ಬೆಳೆದಾಗ ನಾಯಿ ನನ್ನ ಮೈಮೇಲೆ ಎಗರಿ ಕಚ್ಚಿದ್ದು, ಹೊಟ್ಟೆಯ ಭಾಗಕ್ಕೆ ಗಾಯವಾಗಿದೆ ಎಂದಿದ್ದಾರೆ.68 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
ಬೇಜವಾಬ್ದಾರಿ ತೋರಿದ ವ್ಯಕ್ತಿ ಮತ್ತು ಮನೆ ಮಾಲೀಕ ನಟ ದರ್ಶನ್ ವಿರುದ್ಧ ಎಫ್ಐಆರ್ ಆಗಿದೆ. ಎ2 ಆರೋಪಿ ಎಂದು ದರ್ಶನ್ ವಿರುದ್ಧ ಎಫ್ಐಆರ್ ಮಾಡಲಾಗಿದೆ.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ