January 7, 2025

Newsnap Kannada

The World at your finger tips!

dysp lakshmi

ಡಿವೈಎಸ್ಪಿ ಲಕ್ಷ್ಮೀ ಗೆ ಮನು ಜೊತೆ ವಿವಾಹೇತರ ಸಂಬಂಧವಿತ್ತೆ?

Spread the love

ಡಿವೈಎಸ್ಪಿ ಲಕ್ಷ್ಮೀ ಆತ್ಮಹತ್ಯೆ ಹಿಂದೆ ಅಡಗಿರುವ ಸತ್ಯಗಳು ಪೋಲಿಸರ ತನಿಖೆಯಲ್ಲಿ ಬದಲಾಗುತ್ತಿವೆ.

ಪತಿಯಿಂದ ದೂರಿವಿದ್ದ ಡಿವೈಎಸ್‌ಪಿ ಲಕ್ಷ್ಮಿ ತಮ್ಮ ಆಪ್ತ ಸ್ನೇಹಿತ ಮನೋಹರ್ ಜೊತೆಗೆ ಅಕ್ರಮ ಸಂಬಂಧವನ್ನು ಹೊಂದಿದ್ದರು ಎನ್ನುವ ಸ್ಪೋಟಕ ಮಾಹಿತಿ ಹರಿದಾಡುತ್ತಿದೆ.

ಈ ಸಂಬಂಧದಿಂದಾಗಿ ತಾನು ಪತ್ನಿ, ಮಕ್ಕಳಿನಿಂದ ದೂರ ಉಳಿದಿದ್ದೆ ಎನ್ನುವ ಸಂಗತಿಯನ್ನು ಮನೋಹರ್ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. ಈ ಮಾಹಿತಿಯನ್ನು ಬಂಧಿತರಾದ ಪ್ರಜ್ವಲ್ ಹಾಗೂ ಧರ್ಮೇಗೌಡ ಕೂಡ ಒಪ್ಪಿಕೊಂಡಿದ್ದಾರೆ ಎಂದು ಪೋಲಿಸ್ ಮೂಲಗಳು ಹೇಳಿವೆ.

ಸಂಬಂಧ ಹೇಗೆ ಗಟ್ಟಿಯಾಯಿತು? :

ಪರಿಚಯಸ್ಥರ ಮೂಲಕ ಬಿಬಿಎಂಪಿ ಕ್ಲಾಸ್ 1 ಗುತ್ತಿಗೆದಾರ ಮನೋಹರ್ ಡಿವೈಎಸ್ಪಿ ಲಕ್ಷ್ಮಿಗೆ ಪರಿಚಯವಾಗಿದ್ದ. ಈ ನಡುವೆ ಮನು ಹಾಗೂ ಲಕ್ಷ್ಮಿ ಇಬ್ಬರ ನಡುವೆ ತೀರ ಆಪ್ತ ಸಂಬಂಧ ಶುರುವಾಯಿತು. ಮನುನನ್ನು ಲಕ್ಷ್ಮಿ ತೀರ ಹಚ್ಚಿಕೊಂಡಿದ್ದರು. ಲಾಕ್‌ ಡೌನ್‌ ಟೈಮ್‌ ನಲ್ಲಿ ಇವರಿಬ್ಬರನ್ನು ಇನ್ನಿಲ್ಲದ ಹಾಗೇ ಹತ್ತಿರ ಮಾಡಿತ್ತು ಎನ್ನಲಾಗಿದೆ.

ಈ ಸಂಬಂಧ ಎಲ್ಲಿಯವರೆಗೂ ಮುಂದುವರೆದಿತ್ತು ಎಂದರೆ ನೀನು ನಿನ್ನ ಹೆಂಡತಿ ಮಕ್ಕಳನ್ನು ಬಿಟ್ಟು ಬರೆಬೇಕು ನನ್ನ ಜೊತೆಯಲ್ಲಿ ಇರಬೇಕು ಎಂದು ಲಕ್ಷ್ಮೀ ಹಠ ಮಾಡುವಷ್ಟು ಅತಿರೇಕಕ್ಕೆ ಹೋಗಿತ್ತು ಎಂದು ಹೇಳಲಾಗಿದೆ. ಈ ಕಾರಣ ಮನು, ಲಕ್ಷ್ಮೀ ನಡುವೆ ಕೆಲವು ಬಾರಿ ಗಲಾಟೆ ಮಾಡಿದ್ದರು.

ಇದೇ ವಿಷಯಕ್ಕೆ ಲಕ್ಷ್ಮಿ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರಂತೆ. ಲಕ್ಷ್ಮಿ ಮನು ವಿಶಯದಲ್ಲಿ ತೀರ ಸೆನ್ಸಿಟಿವ್‌ ಆಗಿ ನಡೆದುಕೊಳ್ಳುತ್ತಿದ್ದರಂತೆ. ಇದಲ್ಲದೇ ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಳ್ಳುವ ದಿನ ನಡೆದ ಪಾರ್ಟಿಯಲ್ಲಿ ಗುಂಡಿನ ಗಮ್ಮತ್ತಿನಲ್ಲಿ ಗಲಾಟೆ ಮಾಡಿ ಕೊಂಡಿದ್ದಾರೆ. ಲಕ್ಷ್ಮೀ ಚೀರಾಟ ಕೂಗಾಟ ಮಾಡಿದ್ದಾರೆ. ಕೊನೆಗೆ ರೂಂ ಗೆ ನೇಣು ಹಾಕಿಕೊಂಡಿದ್ದಾರೆ.

ಒಟ್ಟಿನಲ್ಲಿ ಲಕ್ಷ್ಮಿ ಬಗ್ಗೆ ಹರಿದಾಡುತ್ತಿರುವ ಅನೈತಿಕ ಸಂಬಂಧದ ಬಗ್ಗೆ ಪೊಲೀಸ್‌ ಇಲಾಖೆಯ ತನಿಖೆಯಿಂದಲೇ ತಿಳಿದು ಬರಬೇಕಾಗಿದೆ. ಲಕ್ಷ್ಮಿ ಅವರ ಚಾರಿತ್ರ್ಯದ ಬಗ್ಗೆ ನಾನಾ ಮಂದಿ ನಾನಾ ರೀತಿಯಲ್ಲಿ ಮಾತನಾಡುತ್ತಿದ್ದಾರೆ, ಈ ಬಗ್ಗೆ ಸತ್ಯ ಹೊರ ಬಂದರೇ ಎಲ್ಲದಕ್ಕೂ ಉತ್ತರ ಸಿಗಲಿದೆ

Copyright © All rights reserved Newsnap | Newsever by AF themes.
error: Content is protected !!