ಐಪಿಎಲ್ 20-20ಯ 29ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ 13 ರನ್‌ಗಳ ಜಯ ಸಾಧಿಸಿತು.
ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡಿಸಿ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಡಿಸಿ ತಂಡದಿಂದ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಮೈದಾನಕ್ಕಿಳಿದರು. ಶಾ ಶೂನ್ಯಕ್ಕೆ ಪೆವಿಲಿಯನ್ ಸೇರಿದರು. ಆದರೆ ಧವನ್ ಹಾಗೂ ಎಸ್. ಐಯ್ಯರ್ ಅವರ ಮಿಂಚಿನಾಟ ತಂಡಕ್ಕೆ ಗೆಲುವಿನ ಕಿರೀಟ ತೊಡಿಸಿತು. ಧವನ್ 33 ಬಾಲ್‌ಗಳಿಗೆ 57 ರನ್ ಗಳಿಕೆ ಮಾಡಿದರೆ, ಐಯ್ಯರ್ 43 ಬಾಲ್‌ಗಳಿಗೆ 53 ರನ್ ಗಳಿಸಿದರು. ಡಿಸಿ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು.
ಆರ್‌ಆರ್ ಪರ ಬ್ಯಾಟಿಂಗ್ ಆರಂಭಿಸಿದ ಬಿ. ಸ್ಟೋಕ್ಸ್ ಹಾಗೂ ಜೆ. ಬಟ್ಲರ್ ಆಟಕ್ಕೆ ಉತ್ತಮ ಆರಂಭ ನೀಡಿದರು. ಸ್ಟೋಕ್ಸ್ 35 ಬಾಲ್ಗಳಲ್ಲಿ 41 ರನ್ ಗಳಿಕೆ ಮಾಡಿದರೆ, ಬಟ್ಲರ್ 9 ಬಾಲ್‌ಗಳಲ್ಲಿ 22 ರನ್ ಗಳಿಸಿದರು. ಬಟ್ಲರ್ ನಂತರ ಬಂದ ರಾಬಿನ್ ಉತ್ತಪ್ಪರವರು 27 ಬಾಲ್‌ಗಳಿಗೆ 32 ರನ್‌ಗಳ ಕೊಡುಗೆಯನ್ನು ತಂಡಕ್ಕೆ ನೀಡಿದರೂ ಸಹಕಾರಿಯಾಗಲಿಲ್ಲ. ಆರ್‌ಆರ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿ ಪಂದ್ಯದಲ್ಲಿ ಪಲಾಯನಗೈಯಿತು.
More Stories
ವಕ್ಫ್ ಆಸ್ತಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ರಾಜ್ಯಾದ್ಯಂತ ಡಿ. 31 ರಿಂದ ಸಾರಿಗೆ ನೌಕರರ ಮುಷ್ಕರ
ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬೆಂ-ಮೈ ಎಕ್ಸ್ಪ್ರೆಸ್ವೇ ಸಂಚಾರ ಮಾರ್ಗದಲ್ಲಿ ಬದಲಾವಣೆ