November 17, 2024

Newsnap Kannada

The World at your finger tips!

vairmudi

ಮೇಲುಕೋಟೆ ವೈರಮುಡಿ ಉತ್ಸವ: ಭಕ್ತರ ಪಾಲ್ಗೊಳ್ಳುವಿಕೆಗೆ ಈ ವರ್ಷವೂ ಮತ್ತೆ ಕೊರೋನಾ ಕರಿನೆರಳು ?

Spread the love

ಮಂಡ್ಯ ಜಿಲ್ಲೆಯ ವಿಶ್ವ ವಿಖ್ಯಾತ ಮೇಲುಕೋಟೆ ವೈರಮುಡಿ ಉತ್ಸವ ಸಂಭ್ರಮ, ಅದ್ದೂರಿ ಆಚರಣೆಗೆ ಈ ವರ್ಷವೂ ಕೊರೋನಾ ಕರಿನೆರಳಿನಿಂದಾಗಿ‌ ಬ್ರೇಕ್ ಬೀಳುವ ಸಾಧ್ಯತೆ ಇದೆ.

ನೆರೆಯ ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಕೊರೋನಾ ಅಬ್ಬರ ಹೆಚ್ಚಾಗಿದೆ. ಇದು ಕರ್ನಾಟಕ ಕ್ಕೂ ವ್ಯಾಪಿಸುವ ಕಾರಣಕ್ಕಾಗಿ ಮುಖ್ಯ ಮಂತ್ರಿ ಯಡಿಯೂರಪ್ಪ ನವರು ಇಂದು ಸಂಜೆ ಉನ್ನತ ಮಟ್ಟದ ಸಮಿತಿ ಹಾಗೂ ಅಧಿಕಾರಿಗಳ ಸಭೆ ಕರೆದು ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಈಗಾಗಲೇ ಮಲೆ ಮಹದೇಶ್ವರ ಸ್ವಾಮಿಯ ಉತ್ಸವ ಕೂಡ ಸರಳ ಮತ್ತು ಸಾಂಪ್ರದಾಯಿಕವಾಗಿ ಆಚರಣೆ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ವೈರಮುಡಿ ಉತ್ಸವಕ್ಕೆ ಹೊರ ರಾಜ್ಯಗಳಿಂದಲೂ ಸಾಕಷ್ಟು ಸಂಖ್ಯೆ ಭಕ್ತರು ಆಗಮಿಸುತ್ತಾರೆ. ಇದರಿಂದ ಜಿಲ್ಲೆಯಲ್ಲಿ ಮತ್ತೆ ಕೊರೋನಾ ಆರ್ಭಟ ಹೆಚ್ಚಾಗಲಿದೆ. ಹೀಗಾಗಿ ವೈರಮುಡಿ ಉತ್ಸವ ವನ್ನು ಸರಳವಾಗಿ ಆಚರಣೆ ಮಾಡುವ ಬಗ್ಗೆ ಚಿಂತನೆ ಆರಂಭವಾಗಿದೆ.

ಇಂದು ಮಹತ್ವ ಸಭೆ : ಪುಟ್ಟರಾಜು

ಈ ಕುರಿತಂತೆ ಶಾಸಕ ಸಿ ಎಸ್ ಪುಟ್ಟರಾಜು ನ್ಯೂಸ್ ಸ್ನ್ಯಾಪ್ ಜೊತೆ ಮಾತನಾಡಿ, ಮೇಲುಕೋಟೆ ವೈರಮುಡಿ ಉತ್ಸವವನ್ನು ಅದ್ದೂರಿಯಾಗಿ ಮಾಡಲು ಸಿದ್ದತೆ ಗಳು ಭರದಿಂದ ಸಾಗಿವೆ. ಆದರೆ ಕೊರೋನಾ ಸೋಂಕಿನ ಎರಡನೇ ಅಲೆ ಭಾಧಿಸಲಿದೆ ಎಂಬ ಸರ್ಕಾರದ ಎಚ್ಚರಿಕೆ ಹಾಗೂ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಗಮನದಲ್ಲಿಟ್ಟುಕೊಂಡು ಇಂದು ಜಿಲ್ಲಾಧಿಕಾರಿಗೂ ಹಾಗೂ ಹಿರಿಯ ಅಧಿಕಾರಿಗಳ ಜೊತೆ ಮಹತ್ವದ ಸಮಾಲೋಚನೆ ನಡೆಸಿ ನಂತರ ಅಂತಿಮ‌ ನಿರ್ಧಾರಕ್ಕೆ ಬರಲಾಗುವುದು ಎಂದು ಹೇಳಿದರು.

Copyright © All rights reserved Newsnap | Newsever by AF themes.
error: Content is protected !!