January 13, 2025

Newsnap Kannada

The World at your finger tips!

former

ರೈತರ ಹೋರಾಟ ಇಂದು ಕೊನೆನಾ? ಕೇಂದ್ರದ ಮುಂದೆ ರೈತರ 6 ಬೇಡಿಕೆಗಳು

Spread the love

ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ 3 ಕೃಷಿ ಕಾಯ್ದೆಗಳನ್ನು ಕೊನೆಗೂ ಅನ್ನದಾತರ ಹೋರಾಟಕ್ಕೆ ಮಣಿದು ಹಿಂಪಡೆದಿದೆ.

ಕಾಯ್ದೆಗಳನ್ನು ಹಿಂಪಡೆಯುವ ಮೂಲಕ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಈಗ ಅನ್ನದಾತರು ಕೂಡ ಕೊಟ್ಟ ಮಾತಿನಂತೆ ಪ್ರತಿಭಟನೆ ಕೈಬಿಡಬೇಕು ಅಂತಾ ಹೋರಾಟ ನಿರತ ರೈತ ಸಂಘಟನೆಗಳಿಗೆ ಕೇಂದ್ರ ಗೃಹ ಇಲಾಖೆ ಪತ್ರ ಬರೆದಿದೆ.
ಈ ನಡುವೆ ರೈತ ಸಂಘಟನೆಗಳ ಇಂದಿನ ಸಭೆ ಮಹತ್ವ ಪಡೆದಿದೆ.

ಇಂದು 2 ಗಂಟೆಗೆ ಮತ್ತೆ ರೈತರ ಮುಖಂಡರ ಸಭೆ ಕರೆದಿದ್ದಾರೆ. ಆ ಸಭೆಯಲ್ಲಿ ಪ್ರತಿಭಟನೆ ಹಿಂಪಡೆಯಬೇಕೋ, ಬೇಡವೋ ಎಂಬ ನಿರ್ಧಾರವಾಗುವ ಸಾಧ್ಯತೆ ಇದೆ. ಅನ್ನದಾತರು ಈ ಐತಿಹಾಸಿಕ ಹೋರಾಟದ ಹಾದಿಗೆ ಅಂತ್ಯ ಹಾಡ್ತಾರಾ ಅಥವಾ ಇಲ್ಲಿಂದ ಹೊಸ ಆರಂಭ ಮಾಡುತ್ತಾರೆಯೇ ಎಂಬ ಕುತೂಹಲವಿದೆ

ರೈತರ 6 ಬೇಡಿಕೆಗಳು :

1) ಕೇಂದ್ರ ಸರ್ಕಾರ ಪತ್ರದಲ್ಲಿ ತಿಳಿಸಿರುವಂತೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವ ಸಮಿತಿಯಲ್ಲಿ ರೈತ ಸಂಘಟನೆಗಳ ನಾಯಕರೂ ಇರಬೇಕು. ಜೊತೆಗೆ ಕನಿಷ್ಠ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು.

2)ಲಖೀಂಪುರ ಘಟನೆ ಸಂಬಂಧ ಕೇಂದ್ರದ ರಾಜ್ಯ ಗೃಹ ಸಚಿವ ಅಜಯ್ ಮಿಶ್ರಾ ಅವರನ್ನು ಸಚಿವ ಸ್ಥಾನದ ಹುದ್ದೆಯಿಂದ ವಜಾಗೊಳಿಸಿ, ಬಂಧಿಸಬೇಕು.

3)ರೈತ ಪ್ರತಿಭಟನೆ ವೇಳೆ ಮೃತಪಟ್ಟ 700 ಮಂದಿ ರೈತರಿಗಾಗಿ ಸಿಂಘುವಿನಲ್ಲಿ ಹುತಾತ್ಮರ ಸ್ಮಾರಕ ನಿರ್ಮಾಣಕ್ಕೆ ಭೂಮಿ ನೀಡಬೇಕು, ಜೊತೆಗೆ ಆ ಕುಟುಂಬಗಳಿಗೆ ಪರಿಹಾರ ನೀಡಬೇಕು.

4)ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿದ್ಯುತ್ ತಿದ್ದುಪಡಿ ಮಸೂದೆ, 2020/ 2021 ಕರಡ ಮಸೂದೆ ಹಿಂಪಡೆಯಬೇಕು.

5) ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಅಕ್ಕಪಕ್ಕದ ಪ್ರದೇಶಗಳಲ್ಲಿನ ಕಮಿಷನ್ ಫಾರ್ ಏರ್ ಕ್ವಾಲಿಟಿ ಮ್ಯಾನೇಜ್ಮೆಂಟ್ ಆಕ್ಟ್ 2021ರಲ್ಲಿರುವ ರೈತರ ಮೇಲಿನ ದಂಡದ ನಿಬಂಧನೆಗಳನ್ನು ತೆಗೆದುಹಾಕುವುದು. ಜೊತೆಗೆ ರೈತರ ವಿರುದ್ಧ ದಂಡದ ಕ್ರಮಕ್ಕೆ ಅವಕಾಶ ನೀಡುವ ಸೆಕ್ಷನ್ – 15 ರದ್ದು ಮಾಡ್ಬೇಕು.

6)ರೈತರ ಮೇಲಿನ ಎಲ್ಲಾ ಕ್ರಿಮಿನಲ್ ಮೊಕದ್ದಮೆಗಳನ್ನು ವಾಪಸ್​ ಪಡೆಯಬೇಕು. ದೆಹಲಿ, ಹರಿಯಾಣ, ಚಂಡೀಗಢ, ಉತ್ತರ ಪ್ರದೇಶ ಮತ್ತು ಇತರ ಹಲವು ರಾಜ್ಯಗಳಲ್ಲಿ ಚಳುವಳಿಯ ಸಮಯದಲ್ಲಿ ಆಗಿರುವ ಕೇಸಸ್​​ಗಳನ್ನು ಕೂಡಲೇ ಹಿಂಪಡೆಯಬೇಕು.

Copyright © All rights reserved Newsnap | Newsever by AF themes.
error: Content is protected !!