December 22, 2024

Newsnap Kannada

The World at your finger tips!

indian railways

ಡಿಸೆಂಬರ್​ 1ರಿಂದ ದೇಶದಲ್ಲಿ ರೈಲು ಸಂಚಾರ ಸ್ಥಗಿತಗೊಳ್ಳುತ್ತಾ ?

Spread the love

ಡಿಸೆಂಬರ್​ 1ರಿಂದ ಭಾರತೀಯ ರೈಲ್ವೆ ಇಲಾಖೆ ದೇಶದಲ್ಲಿ ಮತ್ತೊಮ್ಮೆ ರೈಲು ಸಂಚಾರ ನಿಲ್ಲಿಸಲಿದೆ. ಜೊತೆಗೆ, ಬಹುತೇಕ ಕೊವಿಡ್ ವಿಶೇಷ ಟ್ರೇನ್​ಗಳೂ ಕೂಡ ಸಂಚಾರ ಮಾಡುವುದಿಲ್ಲ ಎಂಬ ಒಂದು ಮೆಸೇಜ್​ ಇತ್ತೀಚೆಗೆ WhatsApp​ನಲ್ಲಿ ಹರಿದಾಡುತ್ತಿದೆ.

ಅದನ್ನು ನೋಡಿದ ಜನರು ಹಾಗೂ ಡಿಸೆಂಬರ್​ನಲ್ಲಿ ಪ್ರಯಾಣಿಸಲು ಮುಂಗಡವಾಗಿ ಟಿಕೆಟ್​ ಬುಕ್​ ಮಾಡಿದ್ದವರು ಗಾಬರಿಯಾಗಿದ್ದಾರೆ ಎಂದು ಹೇಳಲಾಗಿದೆ. ಏನಿದು ಏಕಾಏಕಿ ನಿರ್ಧಾರ ಎಂಬರ್ಥದ ಚರ್ಚೆಯನ್ನು ಸೋಷಿಯಲ್ ಮೀಡಿಯಾಗಳಲ್ಲಿ ನಡೆಸುತ್ತಿದ್ದಾರೆ. ಹಾಗೊಮ್ಮೆ ನಿಮಗೂ ಈ ಮೆಸೇಜ್​ ಬಂದಿದ್ದರೆ ಇದನ್ನು ಖಂಡಿತ ನಂಬಬೇಡಿ. ಯಾಕಂದ್ರೆ, ಇದೊಂದು ಪಕ್ಕಾ ಸುಳ್ಳು ಸುದ್ದಿ.

ಹೌದು, ರೈಲು ಸಂಚಾರ ಸ್ಥಗಿತಗೊಳ್ಳುವ ಬಗ್ಗೆ PIB (ಪ್ರೆಸ್​ ಇನ್​ಫರ್ಮೇಶನ್ ಬ್ಯೂರೋ) ಫ್ಯಾಕ್ಟ್​ಚೆಕ್​ ನಡೆಸಿದ್ದು ಅದರ ಅಸಲಿಯತ್ತನ್ನು ತನ್ನ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿಕೊಂಡಿದೆ. ಕೊವಿಡ್​ ಹಿನ್ನೆಲೆಯಲ್ಲಿ ಶುರುವಾದ ವಿಶೇಷ ರೈಲುಗಳು ಸೇರಿ ಯಾವ ರೈಲುಗಳ ಸಂಚಾರವೂ ಸ್ಥಗಿತಗೊಳ್ಳುವುದಿಲ್ಲ. ಭಾರತೀಯ ರೈಲ್ವೆ ಇಲಾಖೆ ಅಂಥ ನಿರ್ಧಾರಗಳನ್ನು ಕೈಗೊಂಡಿಲ್ಲ. ಯಾರೂ ಹೆದರುವ ಅಥವಾ ಗಾಬರಿಯಾಗುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಹಾಗೇ, ಸುಳ್ಳು WhatsApp​ ಮೆಸೇಜ್​ನ ಸ್ಕ್ರೀನ್​ಶಾಟ್​ ಕೂಡ ಶೇರ್ ಮಾಡಿಕೊಂಡಿದೆ.

ಕೊವಿಡ್​ ಬಿಕ್ಕಟ್ಟು ಶುರುವಾದಾಗಿನಿಂದ ಒಂದಲ್ಲ ಒಂದು ಸುಳ್ಳುಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಲೇ ಇವೆ. ಈ ಹಿಂದೆಯೂ ಹಲವು ವದಂತಿ​ಗಳು ಹರಿದಾಡಿದ್ದು ಜನರು ಗಲಿಬಿಲಿಗೊಳ್ಳುವಂಥ ಘಟನೆಗಳು ಸಹ ನಡೆದಿತ್ತು. 2019ರ ಡಿಸೆಂಬರ್​ನಲ್ಲಿ ಫ್ಯಾಕ್ಟ್​ಚೆಕ್​ ವಿಭಾಗವನ್ನು ಶುರು ಮಾಡಿದ PIB ಕೊವಿಡ್, ಲಾಕ್​ಡೌನ್​, ವಾಹನಗಳ ಸಂಚಾರ ಸೇರಿ ಅನೇಕ ವಿಚಾರಗಳಲ್ಲಿ ಹರಡಿದ್ದ ಸುಳ್ಳುಸುದ್ದಿಗಳ ಬಗ್ಗೆ ಫ್ಯಾಕ್ಟ್​​ಚೆಕ್​ ನಡೆಸಿ, ಜನರಿಗೆ ಸತ್ಯಾಂಶ ತಿಳಿಸುವ ಕೆಲಸದಲ್ಲಿ ತೊಡಗಿದೆ.

Copyright © All rights reserved Newsnap | Newsever by AF themes.
error: Content is protected !!