December 22, 2024

Newsnap Kannada

The World at your finger tips!

RCB WIN

RCB ಕಪ್ ಗೆಲ್ಲುವವರೆಗೆ ಮದುವೆ ಆಗಲ್ಲ – ಅಭಿಮಾನಿಯ ಪೋಸ್ಟರ್ ವೈರಲ್

Spread the love

15 ನೇ ಆವೃತ್ತಿ ಐಪಿಎಲ್‍ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ವೇಳೆ (RCB) ಆರ್​ಸಿಬಿ ಅಭಿಮಾನಿಯೊಬ್ಬರು ಹಿಡಿದಿದ್ದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ.

ಆರ್​ಸಿಬಿ ಮತ್ತು ಚೆನ್ನೈ ನಡುವಿನ ಪಂದ್ಯದ ವೇಳೆ ಆರ್​ಸಿಬಿ ಅಭಿಮಾನಿ ಹುಡುಗಿಯೊಬ್ಬಳು ಆರ್​ಸಿಬಿ ಕಪ್ ಗೆಲ್ಲುವ ವರೆಗೆ ಮದುವೆ ಆಗಲ್ಲ ಎಂದು ಬರೆದುಕೊಂಡಿದ್ದ ಪೋಸ್ಟರ್ ಒಂದು ಕ್ಯಾಮೆರಾ ಕಣ್ಣಿಗೆ ಬಿದ್ದಿದೆ.

ಕ್ಯಾಮೆರಾಮ್ಯಾನ್ ಗ್ಯಾಲರಿ ಕಡೆ ಫೋಕಸ್ ಮಾಡಿ ಪೋಸ್ಟರ್ ಹಿಡಿದು ನಿಂತಿದ್ದ ಯುವತಿಯನ್ನು ಚಿತ್ರಿಸುತ್ತಿದ್ದಂತೆ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ ತೊಡಗಿದೆ.

14 ಆವೃತ್ತಿಗಳಲ್ಲಿ ಕಪ್ ಗೆಲ್ಲಲು ವಿಫಲವಾಗಿರುವ ಆರ್​ಸಿಬಿ ತಂಡ ಈ ಬಾರಿಯಾದರು ಕಪ್ ಗೆಲ್ಲಲಿ ಎಂಬ ಬಯಕೆ ಅಭಿಮಾನಿಗಳದ್ದು,

ಪ್ರತಿ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ಆರ್​ಸಿಬಿ ಕಪ್ ಗೆಲ್ಲಲಿ ಎಂದು ಅಭಿಮಾನಿಗಳು ಹಾರೈಸುತ್ತಾರೆ. ಐಪಿಎಲ್‍ನಲ್ಲಿರುವ 10 ತಂಡಗಳ ಪೈಕಿ ಆರ್​ಸಿಬಿ ತಂಡಕ್ಕೆ ಅತಿ ಹೆಚ್ಚು ಅಭಿಮಾನಿಗಳಿದ್ದು, ಸಾಮಾಜಿಕ ಜಾಲತಾಣದಲ್ಲಿ ಆರ್​ಸಿಬಿ ತಂಡಕ್ಕೆ ಚಿಯರ್ ಆಪ್ ಮಾಡುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!