ತಮಿಳುನಾಡಿನ ಕಾಂಗ್ರೆಸ್ ವಕ್ತಾರೆ ಹಾಗೂ ಚಿತ್ರನಟಿ ಖುಷ್ಬೂ ಬಿಜೆಪಿ ಸೇರಲಿದ್ದಾರೆಯೇ ಎಂಬ ಅನುಮಾನಗಳು ದಟ್ಟವಾಗಿವೆ.
ಖುಷ್ಬೂ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಬಿಜೆಪಿ ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ತಮಿಳು ನಾಡಿನಲ್ಲಿ ಮುಂಬರುವ ಚುಣಾವಣೆಗೆ ಈಗಿನಿಂದಲೇ ತಯಾರಿ ನಡೆಸಿರುವ ಬಿಜೆಪಿ, ಖುಷ್ಬೂ ಅವರನ್ನು ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ. 2010 ರಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಅಧಿಕಾರದಲ್ಲಿದ್ದಾಗ ಖುಷ್ಬೂ ಡಿಎಂಕೆಗೆ ಸೇರ್ಪಡೆಗೊಂಡಿದ್ದರು. ಆದರೆ 2014ರಲ್ಲಿ ಸೋನಿಯಾ ಗಾಂಧಿಯವರ ಭೇಟಿಯ ತರುವಾಯ ಖುಷ್ಬೂ ಕಾಂಗ್ರೆಸ್ ಸೇರಿದ್ದರು. ಆಗ ಅವರು ‘ಕಾಂಗ್ರೆಸ್‌ಗೆ ಮಾತ್ರ ದೇಶದ ಜನರನ್ನು ಒಗ್ಗೂಡಿಸಲು ಮತ್ತು ದೇಶದ ಜನಕ್ಕೆ ಹಿತವನ್ನು ಮಾಡಲು ಸಾಧ್ಯ’ ಎಂದಿದ್ದರು. ನಂತರದ ದಿನಗಳಲ್ಲಿ ಕಾಂಗ್ರೆಸ್ ಅವರಿಗೆ ಯಾವುದೇ ಚುಣಾವಣೆಗೆ ಟಿಕೇಟ್ ನೀಡಿರಲಿಲ್ಲ ಮತ್ತು ರಾಜ್ಯ ಸಭೆಗೆ ಆಯ್ಕೆ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿಯೇ ಅವರು ಬಿಜೆಪಿ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಖುಷ್ಬೂ ಹಾಗೂ ತಮಿಳುನಾಡಿನ ಐಆರ್‌ಎಸ್ ಅಧಿಕಾರಿ ಮತ್ತು ಯೂಟ್ಯೂಬರ್ ಒಬ್ಬರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಈ ಕುರಿತ ಕಾರ್ಯತಂತ್ರವನ್ನು ತಮಿಳು ನಾಡಿನ ಬಿಜೆಪಿ ಅಧ್ಯಕ್ಷ ಎಲ್. ಮುರುಗನ್ ಹೆಣೆಯುತ್ತಿದ್ದಾರೆ. ಸದ್ಯ ಅವರು ಶನಿವಾರದಿಂದಲೂ ದೆಹಲಿಯಲ್ಲೇ ಬಿಡಾರ ಹೂಡಿದ್ದಾರೆ ಎನ್ನಲಾಗಿದೆ.
More Stories
ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ