December 23, 2024

Newsnap Kannada

The World at your finger tips!

WhatsApp Image 2023 04 20 at 4.59.38 PM

ಮಾಜಿ ಸಿಎಂ ಸಿದ್ದುಗಿಂತ ಪತ್ನಿ ಪಾರ್ವತಿಯೇ ಹೆಚ್ಚು ಶ್ರೀಮಂತೆ !

Spread the love

ಮಾಜಿ ಸಿಎಂ ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆ ವೇಳ ಮಾಡಿರುವ ಆಸ್ತಿ ವಿವರದಲ್ಲಿ ತಮಗಿಂತ ಪತ್ನಿ ಪಾರ್ವತಿ ಶ್ರೀಮಂತೆ ಎಂದಿದ್ದಾರೆ.

ಮೈಸೂರು ವರುಣಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಆಸ್ತಿ ವಿವರವನ್ನು ನೀಡಿದ್ದಾರೆ.

ಸಿದ್ದರಾಮಯ್ಯಗಿಂತ ಅವರ ಪತ್ನಿಯೇ ಹೆಚ್ಚು ಶ್ರೀಮಂತೆಯಾಗಿದ್ದಾರೆ. 13 ಬಾರಿ ರಾಜ್ಯದ ಬಜೆಟ್‌ ಮಂಡಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರು, ಬೆ೦ಗಳೂರು ಸೇರಿದಂತೆ ಹಲವು ಕಡೆ ಆಸ್ತಿ ಹೊಂದಿದ್ದಾರೆ, ಜೊತೆಗೆ ಸಾಲವನ್ನು ಸಹ ಹೊಂದಿದ್ದಾರೆ.

ಪತಿ – ಪತ್ನಿ ಕೋಟಿ ಆಸ್ತಿ ಒಡೆಯರು:

ಸಿದ್ದರಾಮಯ್ಯ ಅವರ ಒಟ್ಟು ಆಸ್ತಿ ಮೌಲ್ಯ 19.29 ಕೋಟಿ, ಅದರಲ್ಲಿ ಸಾಲ 6.89 ಕೋಟಿ. ಒಟ್ಟು ಆಸ್ತಿಯಲ್ಲಿ ಚರಾಸ್ತಿ 9.58 ಕೋಟಿ, ಸ್ಮಿರಾಸ್ತಿ 9.43 ಕೋಟಿ ಇದರ ಜೊತೆಗೆ ಪತ್ನಿ ಪಾರ್ವತಿ ಸಿದ್ದರಾಮಯ್ಯ ಒಟ್ಟು ಆಸ್ತಿ ಮೌಲ್ಯ 30.82 ಕೋಟಿ. ಅದರಲ್ಲಿ ಸಾಲ 16.24 ಕೋಟಿ, ಒಟ್ಟು ಚರಾಸ್ತಿ 11.26 ಕೋಟಿ, ಸ್ನಿರಾಸ್ತಿ 19.56 ಕೋಟಿಯನ್ನು ಹೊಂದಿದ್ದಾರೆ.

ಸಿದ್ದರಾಮಯ್ಯ ಹೆಸರಿನಲ್ಲಿ 28 ಲಕ್ಷ ರೂ. ಮೌಲ್ಯದ ಕಾರು ಹಾಗೂ 350 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ಇದ. ಹೆ೦ಡತಿ ಪಾರ್ವತಿ ಸಿದ್ದರಾಮಯ್ಯ ಅವರು 640 ಗ್ರಾಂ ಚಿನ್ನ, 4.5 ಕೆಜಿ ಬೆಳ್ಳಿ ಹೊಂದಿದ್ದಾರೆ. ಸಿದ್ದರಾಮಯ್ಯ ಅವರಿಗಿಂತ ಹೆಚ್ಚು ಶ್ರೀಮಂತೆಯಾದ ಅವರ ಪತ್ನಿ ಹೆಸರಿನಲ್ಲಿ ಸಾಲವು ಸಹ ಹೆಚ್ಚಾಗಿದೆ.

Copyright © All rights reserved Newsnap | Newsever by AF themes.
error: Content is protected !!