January 9, 2025

Newsnap Kannada

The World at your finger tips!

ashwini

ಹೆಂಡತಿ ಕೊಲೆ ಮಾಡಿ, ದೆವ್ವ ಆಗುವ ಭಯಕ್ಕೆ ದೇಹ ತುಂಡರಿಸಿ ನಾಲೆಗೆ ಎಸೆದ ಪತಿ, ಭಾವನ ಬಂಧನ

Spread the love

ಹೆಂತಿಯ ಮೇಲಿನ ದ್ವೇಷಕ್ಕೋ ಅಥವಾ ಇನ್ನೊಬ್ಬಳ ಮೇಲಿನ ವ್ಯಾಮೋಹಕ್ಕೋ ಕಟ್ಟಿಕೊಂಡ ಹೆಂಡತಿಯನ್ನು ಬಾವನ ಜೊತೆ ಗೂಡಿ ಪತಿಯೇ ಬರ್ಬರವಾಗಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ನಂತರ ಆಕೆ ದೆವ್ವವಾಗಿ ಕಾಡುವ ಭಯದಿಂದ ಆಕೆಯ ದೇಹವನ್ನು ಕತ್ತರಿಸಿ ನಾಲೆಗೆ ಬೀಸಾಡಿದ ಪತಿ ಆಕೆಯ ಭಾವನನ್ನು ಕೆ ಆರ್ ಪೇಟೆ ಗ್ರಾಮಾಂತರ ಪೋಲಿಸರು ಬಂಧಿಸಿದ್ದಾರೆ.

gb

ಈ ಘಟನೆಗೆ ಸಂಬಂದಿಸಿದಂತೆ ಮಂಡ್ಯ ಎಸ್ಪಿ ಡಾ. ಅಶ್ವಿನಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಆಶಾ ಎಂಬ ಮಹಿಳೆ ಕೊಲೆಯಾದವಳು.ಈ ಕ್ರೂರತೆಯಿಂದ ಮೂವರು ಮಕ್ಕಳು ಅನಾಥವಾಗಿ ತಾಯಿಯನ್ನು ಕಳೆದುಕೊಂಡಿದ್ದಾರೆ.

ಕಳೆದ ನವಂಬರ್ 17 ರಂದು ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಬಂಡಿಹೊಳೆ ಸಮೀಪ ಹೇಮಾವತಿ ನಾಲೆಯಲ್ಲಿ ಮಹಿಳೆಯೊಬ್ಬಳ ತುಂಡರಿಸಿದ ದೇಹ ಸಿಕ್ಕಿತ್ತು.
ಈ ಶವ ನೀರಿನಲ್ಲಿ ಇದ್ದ ಕಾರಣ ಗುರುತಿಸಲು ಸ್ಪಷ್ಟವಾಗಿ ಆಗುತ್ತಿರಲಿಲ್ಲ. ಹೀಗಾಗಿ ಪೊಲೀಸರಿಗೆ ತಲೆ ನೋವು ಉಂಟಾಗಿತ್ತು.


ದೇಹದ ಗುರುತು ಪತ್ತೆ ಆಗಿದ್ದು ಹೇಗೆ? :

ಕೆಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಕಳೆದ ತಿಂಗಳು ಪಾಂಡವಪುರ ಪೊಲೀಸ್ ಠಾಣೆಗೆ ದೇಶವಳ್ಳಿ ಗ್ರಾಮದ ವ್ಯಕ್ತಿ ತನ್ನ ಮಗಳು ಆಶಾ ನಾಲ್ಕು ತಿಂಗಳಿನಿಂದ ಕಾಣೆಯಾಗಿದ್ದಾಳೆ ಎಂದು ದೂರು ನೀಡಿರುವ ಸಂಗತಿ ಅರಿತರು. ಆಗ ಪಾಂಡವಪುರ ಪೊಲೀಸರು ಕೆಆರ್ ಪೇಟೆ ಪೊಲೀಸ್ ಠಾಣೆಗೆ ಈ ಬಗ್ಗೆ ತಿಳಿಸಿದ್ದಾರೆ.

ಈ ವೇಳೆ ಪೊಲೀಸರು ದೂರು ನೀಡಿದ ವ್ಯಕ್ತಿಯನ್ನು ವಿಚಾರಣೆ ಮಾಡುವ ವೇಳೆ ಹೇಮಾವತಿ ನಾಲೆಯಲ್ಲಿ ದೊರೆತ ತುಂಡರಿಸಿದ ದೇಹಗಳ ಫೋಟೋಗಳನ್ನು ತೋರಿಸುತ್ತಾರೆ. ಫೋಟೋದಲ್ಲಿನ ಮುಖ ದೂರುದಾರನ ಮುಖ ಹೋಲುತ್ತದೆ. ಬಳಿಕ ಒಂದು ಕೈ ಮೇಲೆ ಇದ್ದ ಮೀನಿನ ಟ್ಯಾಟು ಇರುವ ಫೋಟೋವನ್ನು ನೋಡಿದಾಗ ಆತ ಇದು ನನ್ನ ಮಗಳೇ ಎಂದು ಹೇಳುತ್ತಾನೆ.

ಆರೋಪಿಗಳ ಸೆರೆಗೆ ಬಲೆ ಬೀಸಿದ ಪೋಲಿಸರು ಈ ವ್ಯಕ್ತಿಯ ಹೇಳಿಕೆಯ ಮೇಲೆ ಹಂತಕರ ಸೆರೆಗೆ ಬಲೆ ಬೀಸುತ್ತಾರೆ. ತೀವ್ರವಾದ ತನಿಖೆಯ ನಂತರ ಮೃತ ಆಶಾಳ ಗಂಡ ರಂಗಪ್ಪ ಹಾಗೂ ಬಾವ ರಾಮಚಂದ್ರ ಕೊಲೆ ಮಾಡಿರುವುದು ಪೊಲೀಸರಿಗೆ ತಿಳಿಯುತ್ತದೆ.
ಇಬ್ಬರನ್ನು ವಿಚಾರಣೆ ಮಾಡಿದಾಗ, ಆಶಾ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು ಅದಕ್ಕೆ ನಾವು ದೇಶಹಳ್ಳಿಯ ಹೊರಗಡೆ ಕರೆದುಕೊಂಡು ಹೋಗಿ ಕಬ್ಬು ಕಡಿಯುವ ಮಚ್ಚಿನಿಂದ ಕೊಲೆ ಮಾಡಿದೆ. ಆಕೆ ದೆವ್ವವಾಗಿ ನಮ್ಮನ್ನ ಕಾಡಬಹುದು ಎಂದು ಆಕೆಯನ್ನು ತುಂಡು ತುಂಡಾಗಿ ಕತ್ತರಿಸಿ ನಾಲೆಗೆ ಎಸೆದೆವು ಎಂದು ಬಾಯಿ ಬಿಟ್ಟಿದ್ದಾರೆ. ಆದರೆ ಆಶಾಳ ಸಂಬಂಧಿಕರು ರಂಗಪ್ಪ ರಾಮಚಂದ್ರನ ಮಗಳನ್ನು ಮದುವೆಯಾಗಬೇಕು ಎಂದುಕೊಂಡಿದ್ದ. ಇದೇ ಕಾರಣಕ್ಕೆ ಮನೆಯಲ್ಲಿ ಜಗಳವಾಗುತ್ತಿತ್ತು, ಈ ವೇಳೆ ನಿನ್ನ ಕತ್ತರಿಸಿಯಾದರು ಮದುವೆಯಾಗುತ್ತೇನೆ ಎಂದು ಆಶಾಳಿಗೆ ಬೆದರಿಕೆ ಹಾಕುತ್ತಿದ್ದ, ಇದೇ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಹೇಳುತ್ತಿದ್ದಾರೆ.

ಪೋಲಿಸರ ಅತಿಥಿಯಾಗಿರುವ ಇಬ್ಬರು ಆರೋಪಿಗಳು ಈಗ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

Copyright © All rights reserved Newsnap | Newsever by AF themes.
error: Content is protected !!