November 16, 2024

Newsnap Kannada

The World at your finger tips!

BJP , Congress , MLC

ಆರ್ ಎಸ್ ಎಸ್ ಎಂದರೆ ಮೈಲಿಗೆ ಏಕೆ? ಸಿದ್ದು‌ಗೆ ವಿಶ್ವನಾಥ್‌ ಪ್ರಶ್ನೆ

Spread the love

ಕುರುಬರ ಎಸ್‌ಟಿ ಹೋರಾಟಕ್ಕೆ ಎಲ್ಲ ಸಂಘಟನೆ, ಸಮುದಾಯಗಳು ಹಾಗೂ ಪಕ್ಷಗಳ ಬೆಂಬಲ ಅಗತ್ಯ. ಆದರೆ ಆರ್‌ಎಸ್‌ಎಸ್‌ ಕಂಡರೆ ಯಾಕೆ ಮೈಲಿಗೆ ರೀತಿಯಲ್ಲಿ ನಡೆದುಕೊಳ್ಳುತ್ತೀರಾ ಎಂದು ಸಿದ್ದರಾಮಯ್ಯಗೆ ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಪ್ರಶ್ನೆ ಮಾಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಕುರುಬರ ಎಸ್‌ಟಿ ಮೀಸಲಾತಿ ಹೋರಾಟದಲ್ಲಿ ಆರ್‌ಎಸ್‌ಎಸ್‌ ಕೈವಾಡವಿದೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಉತ್ತರಿಸಿದ ವಿಶ್ವನಾಥ್ ಆರ್‌ಎಸ್‌ಎಸ್‌ ಅನ್ನು ದೇಶದಲ್ಲಿ ಬ್ಯಾನ್‌ ಮಾಡಿದ್ದಾರಾ? ಇಲ್ಲ ಬಹಿಷ್ಕರಿಸಿದ್ದಾರಾ? ದೇಶದಲ್ಲಿ ಯೂತ್‌ ಕಾಂಗ್ರೆಸ್‌, ಯುವಮೋರ್ಚ ಕೂಡ ಇದೆ. ಇವೆಲ್ಲ ಸಂಘಟನೆಗಳು ಅಲ್ಲವೇ? ಹೀಗಿರುವಾಗ ಆರ್‌ಎಸ್‌ಎಸ್‌ ಎಂದರೆ ಯಾಕೆ ಮೈಲಿಗೆ ಎಂದು ಪ್ರಶ್ನಿಸಿದರು.

ಈ ಹೋರಾಟದಲ್ಲಿ ನನ್ನ, ಈಶ್ವರಪ್ಪ, ರೇವಣ್ಣ, ಸಿದ್ದರಾಮಯ್ಯ ಪ್ರತಿಷ್ಠೆ ಅಲ್ಲ. ಇಡೀ ಸಮುದಾಯಕ್ಕಾಗಿ ಪಕ್ಷಾತೀತವಾಗಿ ಹೋರಾಟ ಮಾಡುತ್ತಿದ್ದೇವೆ. ಇದಕ್ಕೆ ಬೇರೆ ಸಮುದಾಯಗಳ ಬೆಂಬಲವನ್ನೂ ಕೇಳುತ್ತಿದ್ದೇವೆ. ಮೇಲ್ವರ್ಗ ಸಮುದಾಯದ ಸಹಕಾರಬೇಕು. ಮೇಲ್ವರ್ಗದವರ ಆಶಯದಿಂದ ಕೆಳವರ್ಗದವರ ಕಲ್ಯಾಣ ಆಗಬೇಕು ಎಂದು ದೇವರಾಜ ಅರಸ್‌ರ ಸಿದ್ಧಾಂತ. ನಮ್ಮ ಹೋರಾಟ ಕುರಿತು ರಾಜ್ಯಾದ್ಯಂತ ಪತ್ರ ಚಳವಳಿಗೂ ಕರೆ ನೀಡಲಿದ್ದೇವೆ ಎಂದು ತಿಳಿಸಿದರು.

ತೆಲಂಗಾಣ ರಾಜ್ಯದಲ್ಲಿ ಜೀವನ ನಡೆಸುತ್ತಿರುವ ಕುರುಬ ಸಮುದಾಯದ ಪ್ರತಿಯೊಬ್ಬರಿಗೂ ಅಲ್ಲಿಯ ಮುಖ್ಯಮಂತ್ರಿ ಅವರು 10 ಸಾವಿರ ರು ಹಣ 20 ಕುರಿಗಳನ್ನು ಉಚಿತವಾಗಿ ಕೊಟ್ಟರು. ಅಲ್ಲದೇ, ಸಮುದಾಯಕ್ಕಾಗಿ 50 ಕೋಟಿ ರೂ. ಬಿಡುಗಡೆ ಮಾಡಿದರು, ಎಂಎಲ್‌ಸಿ ಸ್ಥಾನ ಕೊಟ್ಟರು. ಇದೆಲ್ಲ ಹೇಗೆ ಸಾಧ್ಯವಾಯಿತು ಎಂದು ಮರು ಪ್ರಶ್ನೆ ಮಾಡಿದರು.

Copyright © All rights reserved Newsnap | Newsever by AF themes.
error: Content is protected !!