ನನಗೆ ಅಕ್ರಮ ಸಂಬಂಧ ಇತ್ತಂತೆ, ಮಕ್ಕಳು ಬೇಡ ಎಂದು ನಾನೇ ಅಬಾರ್ಷನ್ ಮಾಡಿಸಿಕೊಂಡಿದ್ದೇನೆ ಅಂತೆಲ್ಲಾ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ವಿಚ್ಛೇದನ ಎಂಬುದೇ ನೋವಿನ ವಿಷಯವಾಗಿದೆ. ಅದರಿಂದ ಹೊರ ಬರಲು ಸಮಯ ಬೇಕಿದೆ. ಆದರೆ ಅದರ ನಡುವೆ ಈ ರೀತಿಯ ರೂಮರ್‌ಗಳು ಹಬ್ಬಿದೆ. ಆದರೆ ಇವುಗಳಿಂದ ನನ್ನನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ಟ್ವೀಟ್ ಮೂಲಕ ಅಸಮಾಧಾನವನ್ನು ನಟಿ ಸಮಂತಾ ಹೊರ ಹಾಕಿದ್ದಾರೆ.
ಟಾಲಿವುಡ್‍ನ ಕ್ಯೂಟ್ ಕಪಲ್ ಎಂದೆ ಕರೆಸಿಕೊಳ್ಳುತ್ತಿದ್ದ ಸಮಂತಾ, ನಾಗಚೈತನ್ಯ ವಿಚ್ಛೇದನ ಪಡೆದುಕೊಂಡು ದೂರವಾದ ನಂತರ ಈ ಜೋಡಿ ಕುರಿತಾಗಿ ಹಲವು ವಿಚಾರಗಳು ಹರಿದಾಡುತ್ತಿದ್ದವು. ಇದಕ್ಕೆ ಸಮಂತಾ ಕಾರವಾಗಿ ಪ್ರಕ್ರಿಯೆ ನೀಡಿದ್ದಾರೆ.
ಸಂಸಾರದ ಒಡೆಯಲು ಸಮಂತಾನೇ ಕಾರಣ ಎಂಬ ಮಾತು ಕೇಳಿಬರುತ್ತಿತ್ತು. ಈ ಪರಿಣಾಮ ಬೇಸರಗೊಂಡ ಸಮಂತಾ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ, ಮಹಿಳೆಯರು ಮಾತ್ರ ನಿರಂತರವಾಗಿ ನೈತಿಕವಾಗಿ ಪ್ರಶ್ನಾರ್ಹವಾಗಿದ್ದರೆ, ಅದೇ ಪುರುಷ ಮಾಡಿದಾಗ ನೈತಿಕವಾಗಿ ಅವರನ್ನು ಪ್ರಶ್ನಿಸುವುದಿಲ್ಲ ಯಾಕೆ ಎಂದು ಪ್ರಶ್ನಿಸಿ ನಾವು ಸಮಾಜದಲ್ಲಿ ಮೂಲಭೂತ ನೈತಿಕತೆಯನ್ನು ಹೊಂದಿಲ್ಲ ಎಂದಿದ್ದಾರೆ.
ಅಕ್ಕಿನೇನಿ ಕುಟುಂಬ ಸಮಂತಾಗೆ ಜೀವನಾಂಶವಾಗಿ 200 ಕೋಟಿ ರು ನೀಡಲು ಮುಂದಾಗಿತ್ತು. ಆದರೆ ಸಮಂತಾ ನನಗೆ ಜೀವನಾಂಶ ಬೇಡ ಹಾಗೂ ನಾಗ ಚೈತನ್ಯ ಅಥವಾ ಅವರ ಕುಟುಂಬದವರಿಂದ ಒಂದು ಪೈಸೆ ಕೂಡ ತೆಗೆದುಕೊಳ್ಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
More Stories
BCCI ನೂತನ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ಆಯ್ಕೆ
ಹುಟ್ಟುಹಬ್ಬದ ದಿನವೇ ಬಾಲಕನ ದುರ್ಮರಣ
KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ