December 19, 2024

Newsnap Kannada

The World at your finger tips!

death,BJP,suicide

rekha: i was in 6 years live in relationship

ಬಿಜೆಪಿ ಮುಖಂಡ ಅನಂತ್ ಆತ್ಮಹತ್ಯೆ ನಂತರ ಸಿಕ್ಕ ಡೆತ್ ನೋಟ್ ಬರೆದದ್ದು ಯಾರು?

Spread the love

ಬ್ಯಾಡರಹಳ್ಳಿ ಬಿಜೆಪಿ ಮುಖಂಡನ ಸಾವಿನ ಸುತ್ತ ಹತ್ತಾರು ಅನುಮಾನಗಳು, ಹೊಸ ತಿರುವುಗಳು ಗೊಚರವಾಗುತ್ತವೆ.

ಅನಂತ್ ಪತ್ನಿ ಸುಮಾ ಹಾಗೂ ಗೆಳತಿ ರೇಖಾ ನಡುವಿನ ಮಾತುಕತೆ ವೈರಲ್ ಆದ ನಂತರ ಆಡಿಯೋ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​ ಕೊಟ್ಟಿದೆ.

ಅದರಲ್ಲೂ ಮೃತನ ಮಡದಿ ಆಡಿದ್ದಾರೆನ್ನಲಾದ ಮಾತುಗಳು ಕರಾಳ ಸತ್ಯವನ್ನ ಸಾರಿ ಸಾರಿ ಹೇಳುವಂತಿದೆ. ಹಾಗಾದರೆ ನನ್ನ ಗಂಡ ನರಳಿ ನರಳಿ ಸಾಯ್ಬೇಕು ಅಂತಾ ಹೆಂಡ್ತಿ ಹೇಳಿದ್ಯಾಕೆ..? ಅನಂತರಾಜು ಸೂಸೈಡ್​​ ಕೇಸ್​ನಲ್ಲಿ ಜೆಡಿಎಸ್​ ಮುಖಂಡರೊಬ್ಬರ ವಿಚಾರ ಪ್ರಸ್ತಾಪವಾಗಿದ್ದೇಕೆ..? ಎಂಬ ವಿಚಾರದ ಸತ್ಯ ಹೊರಬೇಕಿದೆ.

ಯೂ ಟರ್ನ್ ಹೊಡೆದ ಆತ್ಮಹತ್ಯೆ :

ಈ ಸಾವು ಪೊಲೀಸರನ್ನು ಸಾಕಷ್ಟು ಆಯಾಮಗಳಲ್ಲಿ ತನಿಖೆ ಮಾಡುವಂತೆ ಮಾಡಿದೆ. ಅನಂತರಾಜು ಸಾವಿಗೆ, ರೇಖಾ ಕಾರಣ ಎಂದು ಸುಮಾ ಸಿಡಿಸಿದ ಆರೋಪದ ಇದೀಗ ಆಕೆಯ ಕಡೆಗೇ ಯೂ ಟರ್ನ್​ ಹೊಡೆದಿದೆ. ಸೂಸೈಡ್​ ಮಾಡ್ಕೊಂಡ 20 ದಿನಗಳ ಹಿಂದೆ ನಡೆದ ಆ ಆಡಿಯೋ ಇದೀಗ ಪ್ರಕರಣಕ್ಕೆ ಹೊಸ ಟ್ವಿಸ್ಟ್​ ಕೊಟ್ಟಿದೆ.
ಈ ಒಂದು ಸಾವು ಪೊಲೀಸರನ್ನ ಸಾಕಷ್ಟು ಆಯಾಮಗಳಲ್ಲಿ ತನಿಖೆ ಮಾಡುವಂತೆ ಮಾಡಿದೆ.

ಅನಂತರಾಜು ಮನೆಯಲ್ಲಿ ಸಿಕ್ಕ ಅದೊಂದು ಡೆತ್​​ ನೋಟ್​ ಮೇಲೆ ಕೂಡ ಡೌಟ್ ಮೂಡಿದೆ. ಪ್ರಿಯಾ ಸುಮಾ ನನ್ನನ್ನು ನೀನು ಕ್ಷಮಿಸಿ ಬಿಡು. ನಾನು ಕ್ಷಮೇ ಕೇಳಲು ಕೂಡ ಅರ್ಹನಲ್ಲ. ಹೆಣ್ಣಿನ ಸಹವಾಸ ಮಾಡಿ, ಫೋಟೋ ವಿಡಿಯೋಗಳ ಟ್ರ್ಯಾಪ್​​ಗೆ ಸಿಲುಕಿ, ಬ್ಲ್ಯಾಕ್ ಮೇಲ್ ಮಾಡಿಸಿಕೊಂಡು ನಿನಗೆ ಮುಖ ತೋರಿಸಲು ಸಾಧ್ಯವಾಗ್ತಿಲ್ಲ.. ನನ್ನ ಮಕ್ಕಳನ್ನ ಚೆನ್ನಾಗಿ ನೋಡಿಕೋ ಎಂದು, ಅನಂತರಾಜು ಸಾಯುವ ಮುನ್ನ ಬರೆದಿದ್ರಂತೆ.

ಇದೀಗ ಈ ಡೆತ್​​ ನೋಟ್​ ಕುರಿತು ಕೂಡ ಸಾಕಷ್ಟು ಸಂಶಯ ಮೂಡಿದೆ. ನಿಜಕ್ಕೂ ಅನಂತರಾಜುವೇ ಡೆತ್ ನೋಟ್ ಬರೆದ್ರಾ ಅನ್ನೋ ಪ್ರಶ್ನೆ ಕೂಡ ಹುಟ್ಟಿಕೊಂಡಿದ್ದು, ಪೊಲೀಸರು ಈ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ. ಇಂತಹ ಹೊತ್ತಲ್ಲೆ ರೇಖಾ ಹಾಗೂ ಜೆಡಿಎಸ್ ಮುಖಂಡನೊಬ್ಬನ ಭೇಟಿ ವಿಚಾರ ಕೂಡ ತನಿಖೆ ನಡೆದಿದೆ.

ಇದನ್ನು ಓದಿ –ನಾಗಮಂಗಲ ಹಳೆ ವೈಷಮ್ಯಕ್ಕೆ ಯುವಕನ ಕಿಡ್ನಾಪ್ – ಕೊಲೆ ಮಾಡಿದ ಕಿರಾತಕರು

Copyright © All rights reserved Newsnap | Newsever by AF themes.
error: Content is protected !!