January 5, 2025

Newsnap Kannada

The World at your finger tips!

bigboss

‘ಬಿಗ್​ಬಾಸ್​’ ಮನೆಗೆ ಈ ಬಾರಿ ಯಾರಿಗೆಲ್ಲಾ ಎಂಟ್ರಿ ಸಿಗಬಹುದು?

Spread the love

ಬಿಗ್ ಬಾಸ್ ಸೀಜನ್ 8 ಕ್ಕೆ ದಿನಗಣನೆ ಶುರುವಾಗಿದೆ. ಬಹುಷ್ಯಃ ಜನವರಿ 3 ನೇ
ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಎಂಟ್ರಿ ಕೊಡುತ್ತಾರೆ ಎಂಬ ಕುತೂಹಲ ಇದ್ದೇ ಇದೆ.

ಎಲ್ಲರಿಗೂ ಬಿಗ್​ಬಾಸ್​ ಮನೆಗೆ ಎಂಟ್ರಿ ಸಿಗೋದಿಲ್ಲ. ರಿಯಾಲಿಟಿ ಶೋ ಎಂದ ಮೇಲೆ ಮನರಂಜನೆನೇ ಮುಖ್ಯ. ಅದಕ್ಕೆ ಪೂರಕವಾಗಿ ಸ್ಪರ್ಧಿಗಳ ಆಯ್ಕೆ ನಡೆಯುತ್ತದೆ. ಈ ಶೋ ನಲ್ಲಿ ಹಾಡುಗಾರರು, ಹಾಸ್ಯ ನಟರು, ಹಿರಿಯ ನಾಗರಿಕರು, ಹೀರೋಯಿನ್ಸ್​, ಆರ್​ಜೆ, ಸ್ವಾಮೀಜಿಗಳು ಇಂತಹ ಒಂದಷ್ಟು ಲೆಕ್ಕ ಹಾಕಿ 16ರಿಂದ 17 ಜನರ ಲಿಸ್ಟ್​ ಪಕ್ಕಾ ಆಗುತ್ತದೆ.

ಬಿಗ್ ಬಾಸ್ ಎಂದರೆ ಅದು ಗೃಹಬಂಧನವೇ ಸರಿ. ಅದಕ್ಕೆ ಯಾರೆಲ್ಲಾ ಸಿದ್ದರಿದ್ದಾರೆ ಎನ್ನುವುದನ್ನು ಗಮನಿಸೋಣ

ಯಾರಿಗೆಲ್ಲಾ ಬಿಗ್ ಬಾಸ್ ಗೆ ಎಂಟ್ರಿ ?

ಡ್ರೋನ್ ಪ್ರತಾಪ್, ಸೋನು ಗೌಡ, ಸಂಖ್ಯಾಶಾಸ್ತ್ರದ ಆರ್ಯವರ್ಧನ್,
ಮಿ ಸುನೀಲ್​ ರಾವ್, ಶುಭಾ ಪೂಂಜಾ, ತಬಲಾ ನಾಣಿ, ಅನುಷಾ ಗೌಡ, ಟೆನ್ನಿಸ್ ಕೃಷ್ಣ ಸ್ನೇಹಿತೆಯರಾದ ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿ ಇಬ್ಬರಲ್ಲಿ ಒಬ್ಬರು ಹೀಗೆ 18 ಜನರ ತಂಡ ರೆಡಿ ಆಗ್ತಾ ಇದೆ. ಈ ಪಟ್ಟಿ ಮತ್ತೆ ಬದಲಾಗುವ ಸಾಧ್ಯತೆ ಯೂ ಇದೆ.

ಕಂಠಸಿರಿಯಿಂದ ಕನ್ನಡಿಗರ ಮನಗೆದ್ದ ಗಾಯಕ ಹನುಮಂತ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರ-ಬಡ್ನಿ ಗ್ರಾಮದ ಈ ಹಳ್ಳಿ ಪ್ರತಿಭೆ ಕಳೆದ ಬಾರಿಯೇ ಬಿಗ್​ಬಾಸ್​ ಮನೆ ಪ್ರವೇಶ ಮಾಡುವ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ಆದ್ರೆ, ಅದು ಸಾಧ್ಯವಾಗಿರಲಿಲ್ಲ ಆದ್ರೀಗ ಈ ಬಾರಿ ಬಿಗ್​ಬಾಸ್​ ಸೀಸನ್​ಗೆ ಹನುಮಂತ ದೊಡ್ಮನೆ ಪ್ರವೇಶಿಸೋದು ಬಹುತೇಕ ಖಚಿತ ಎನ್ನಲಾಗ್ತಿದೆ.

ನಂಬರ್‌ ಅಂದ್ರೆ ನಾನು, ನಾನು ಅಂದ್ರೆ ನಂಬರ್‌ ಅಂತ ಸಂಖ್ಯಾಶಾಸ್ತ್ರ ಹೇಳೋ ಆರ್ಯವರ್ಧನ್‌ ಕೂಡ ಈ ಬಾರಿ ಬಿಗ್‌ಬಾಸ್‌ ಮನೆಯಲ್ಲಿ ಕಾಣಿಸಿಕೊಂಡರೆ ಅಚ್ಚರಿಯಿಲ್ಲ.

ಬಿಗ್​ಬಾಸ್​​​ ಹಿಂದಿನ ಸೀಸನ್​ಗಳಲ್ಲಿ ಸ್ವಾಮಿಜಿಗಳು ಸ್ಪರ್ಧಿಗಳಾಗಿ ಬಂದಿದ್ದನ್ನು ನೋಡಿದ್ದೇವೆ. ಹಾಗೇ ಈ ಸೀಸನ್​ನಲ್ಲಿ ಆರ್ಯವರ್ಧನ್​ ಎಂಟ್ರಿ ಕೊಡೋದು ಬಹುತೇಕ ಖಚಿತ ಅನ್ನೋ ಮಾಹಿತಿ ಇದೆ.

ಕಾಮಿಡಿಯನ್ ಟೆನ್ನಿಸ್​ ಕೃಷ್ಣ. ಇತ್ತೀಚೆನ ವರ್ಷಗಳಲ್ಲಿ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿಲ್ಲ. ಬಿಗ್​ಬಾಸ್​ ಮನೆಗೆ ಬಂದ್ರೆ, ಕಚಗುಳಿ ಇಟ್ಟು ಪ್ರೇಕ್ಷಕರನ್ನು ರಂಜಿಸೋದ್ರಲ್ಲಿ ನೋ ಡೌಟ್.

ಹನುಮಂತನ ರೀತಿಯಲ್ಲೇ ಕಿರುತೆರೆಯಲ್ಲಿ ತಮ್ಮ ಗಾಯನದ ಮೂಲಕ ಮನೆಮಾತಾಗಿರುವವರು ಗೋವರ್ಧನ್​ ತಾತ. ಮೂಲತಃ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೆ ಸಿ ರೊಪ್ಪ ಗ್ರಾಮದವರು. ನಾಟಕಗಳಲ್ಲಿ ಬಣ್ಣ ಹಚ್ಚುತ್ತಾ ಹಾಡುಗಳನ್ನ ಹಾಡುತ್ತಿದ್ದ ಗೋವರ್ಧನ್​ ತಾತ, ಈಗ ಗಾಯಕರಾಗಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಬಿಗ್​ಬಾಸ್​ ಮನೆಗೆ ಗೋವರ್ಧನ್​ ತಾತ ಬಂದ್ರೆ, ಉಳಿದವರ ನಾಟಕ ನಡೆಯೋದಿಲ್ಲ. ಗೋವರ್ಧನ್​​ ತಾತ ಬಿಗ್​ಬಾಸ್​ ಮನೆಗೆ ಅನಿರೀಕ್ಷಿತ ಎಂಟ್ರಿ ಆಗುತ್ತೆ.

ಮಿಸ್ಟರ್​ ಅಂಡ್​ ಮಿಸ್ಸಸ್​ ರಾಮಾಚಾರಿ ಸಿನಿಮಾದಲ್ಲಿ ರಾಧಿಕಾ ಪಂಡಿತ್​ ಸ್ನೇಹಿತೆಯರಾಗಿ ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿ ಬಣ್ಣ ಹಚ್ಚಿದ್ರು.. ಇದೀಗ ಇಬ್ರು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ.. ಇವರಿಬ್ಬರೂ, ಅಥವಾ ಒಬ್ಬರಿಗೆ ದೊಡ್ಮನೆಗೆ ಟಿಕೆಟ್​ ಸಿಗೋ ಸುಳಿವು ಸಿಕ್ತಿದೆ.

ಇಂತಿ ನಿನ್ನ ಪ್ರೀತಿಯ ಸಿನಿಮಾ ಖ್ಯಾತಿಯ ಸೋನು ಗೌಡ ಕೂಡ ಬಿಗ್​ಬಾಸ್​ ಮನೆ ಪ್ರವೇಶಿಸುವ ಸಾಧ್ಯತೆ ಇದೆ.

ಟಿಕ್​ಟಾಕ್​ ವೀಡಿಯೋಗಳಿಂದ ಫೇಮಸ್​ ಆಗಿರೋ ಬಿಂದು ಗೌಡ ಬಿಗ್​ಬಾಸ್​ ಮನೆಗೆ ಪ್ರವೇಶ ಪಡೆದ್ರು, ಅಚ್ಚರಿ ಪಡಬೇಕಿಲ್ಲ..

ಜನವರಿ ಮೂರನೇ ವಾರದವರೆಗೆ ಕಾದ್ರೆ, ಬಿಗ್​ಬಾಸ್​​ ಶೋನ ಅಸಲಿ ಆಟ ನೋಡಬಹುದು.

Copyright © All rights reserved Newsnap | Newsever by AF themes.
error: Content is protected !!