December 23, 2024

Newsnap Kannada

The World at your finger tips!

whats app

ಫೆ 8 ರಂದು ವಾಟ್ಸಪ್ ಕಠಿಣ ನಿಮಯ : ಸಾಮಾನ್ಯ ಬಳಕೆದಾರರಿಗೆ ರಿಲೀಫ್

Spread the love

ವಾಟ್ಸಪ್‌ನಲ್ಲಿ ಇನ್ನು ಮುಂದೆ ಬಳಕೆದಾರರು ತಮ್ಮ ಮಾಹಿತಿಯನ್ನು ಫೇಸ್‌ಬುಕ್‌ ಜೊತೆ ಹಂಚಿಕೊಳ್ಳಬೇಕು ಎಂಬ ನೂತನ ನಿಯಮದಲ್ಲಿ ಕೊಂಚ ರಿಲೀಫ್ ನೀಡಲಾಗಿದೆ.

ವಾಟ್ಸಪ್‌ ಸಂಸ್ಥೆ ಸ್ಪಷ್ಟನೆಯಂತೆ ಫೆ.8 ರಿಂದ ಜಾರಿ ಆಗಲಿರುವ ನೂತನ ನಿಯಮ ವಾಟ್ಸಪ್‌ನಲ್ಲಿ ಬ್ಯುಸಿನೆಸ್‌ ಅಕೌಂಟ್‌ನ ಚಾಟ್‌ಗಳಿಗೆ ಮಾತ್ರ ಅನ್ವಯ ಆಗಲಿದೆ. ಸಾಮಾನ್ಯ ಸಂದೇಶ ವಿನಿಮಯಕ್ಕೆಂದು ಬಳಸುವ ಬಳಕೆದಾರರ ನಿಯಮಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಹೊಸ ನಿಯಮ ಜಾರಿಯಿಂದ ಬ್ಯುಸಿನೆಸ್‌ ಅಕೌಂಟ್‌ ಇರುವವರು ಫೇಸ್‌ಬುಕ್‌ನ ನೆರವಿನೊಂದಿಗೆ ಹೆಚ್ಚಿನ ಸುರಕ್ಷಿತ ಸೇವೆಯನ್ನು ಪಡೆಯಲು ಸಾಧ್ಯವಾಗಲಿದೆ.

ಬಹುತೇಕ ಜನರು ವಾಟ್ಸಪ್‌ ಅನ್ನು ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಸಂವಹನಕ್ಕೆ ಬಳಕೆ ಮಾಡುವ ಕಾರಣ ಅವರ ಮಾಹಿತಿ ಗಳನ್ನು ಫೇಸ್‌ಬುಕ್‌ ಬಳಕೆ ಮಾಡುವುದಿಲ್ಲ.

ವಾಟ್ಸಪ್‌ ಬ್ಯುಸಿನೆಸ್‌ ಮೂಲಕ ಸಂವಹನ ನಡೆಸಬೇಕೇ? ಅಥವಾ ಬೇಡವೇ ಎಂಬ ಆಯ್ಕೆಯನ್ನು ಕೂಡ ಬಳಕೆದಾರಿಗೇ ನೀಡಲಾಗಿದೆ.‌

Copyright © All rights reserved Newsnap | Newsever by AF themes.
error: Content is protected !!