ಮೈಸೂರು: ಸಿದ್ದರಾಮಯ್ಯ 40 ವರ್ಷಗಳಿಂದ ವಿಧಾನಸಭೆಗೆ ಹೋಗಿದ್ದಾರೆ. ಅವರ ಹೆಸರನ್ನು ರಸ್ತೆಗೆ ಇಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿ, ಮಾಜಿ ಸಂಸದ ಪ್ರತಾಪ್ ಸಿಂಹ ಸಿದ್ದರಾಮಯ್ಯನವರ ಪರವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಕೆಆರ್‌ಎಸ್ ರಸ್ತೆಗೆ “ಸಿದ್ದರಾಮಯ್ಯ ಆರೋಗ್ಯ ರಸ್ತೆ” ಎಂದು ನಾಮಕರಣ ಮಾಡಬೇಕೆಂದು ಪಾಲಿಕೆ ತೀರ್ಮಾನಿಸಿದ್ದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಪ್ರತಾಪ್ ಸಿಂಹ ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯನ ಕೊಡುಗೆ ಪ್ರಾಮುಖ್ಯ:
ಪ್ರತಾಪ್ ಸಿಂಹ ಅವರು ಸಿದ್ದರಾಮಯ್ಯನವರ ಸಾಧನೆಗಳನ್ನು ಮೆಚ್ಚಿ ಹಾಡಿ ಹೊಗಳಿದ್ದಾರೆ. “ಸಿದ್ದರಾಮಯ್ಯ ಮೈಸೂರಿನ ಸುಪುತ್ರರು. ಸೈದ್ಧಾಂತಿಕವಾಗಿ ನಾವು ಅವರನ್ನು ವಿರೋಧಿಸಬಹುದು, ಆದರೆ ಈ ವಿಷಯದಲ್ಲಿ ಅವರ ಹೆಸರನ್ನು ಬಳಸುವಲ್ಲಿ ಸಮಸ್ಯೆ ಇಲ್ಲ. ಅವರು ಎರಡು ಬಾರಿ ಬಹುಮತದೊಂದಿಗೆ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇದ್ದರು. ಮೈಸೂರಿಗೆ ಅವರ ಕೊಡುಗೆ ಅಪಾರ.”
ಸಿದ್ದರಾಮಯ್ಯನವರ ಸಾಧನೆಗಳು:
- ಜಯದೇವ ಆಸ್ಪತ್ರೆ ಕಟ್ಟಿಸಿದವರು.
- ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿದವರು.
- ರಾಜಪಥದ ಅಭಿವೃದ್ಧಿ ಕಾರ್ಯಗಳು.
“ಮಹಾರಾಜರ ಹೆಸರಿನಲ್ಲಿ ಅನೇಕ ಸ್ಥಳಗಳಿಗೆ ಗೌರವ ನೀಡಲಾಗಿದೆ. ಆದರೆ ಮಹಾರಾಜರ ನಂತರ ಬಂದ ಸಾಧಕರಿಗೂ ಗೌರವ ನೀಡುವುದು ಅಗತ್ಯ. ವಿಶ್ವೇಶ್ವರಯ್ಯನವರಂಥ ಇಂಜಿನಿಯರ್ ಇಲ್ಲದಿದ್ದರೆ ಕನ್ನಂಬಾಡಿ ಕಟ್ಟಲು ಸಾಧ್ಯವಾಗುತ್ತಿತ್ತಾ? ಮಿರ್ಜಾ ಇಸ್ಮಾಯಿಲ್ ಇರದಿದ್ದರೆ ಬೆಂಗಳೂರಿಗೆ ವಿದ್ಯುತ್ ತಲುಪಿಸೋಕೆ ಆಗುತ್ತಿತ್ತಾ?” ಎಂದು ಅವರು ಪ್ರಶ್ನಿಸಿದರು.
ಸಾಧಕರಿಗೆ ಗೌರವ ಅಗತ್ಯ:
“ಬೆಂಗಳೂರಿನಲ್ಲಿ ಕೆಂಪೇಗೌಡನ ನಂತರ ಬಂದ ಸಾಧಕರಿಗೆ ಗೌರವ ನೀಡಿದ್ದೇವೆ. ಅದೇ ರೀತಿ ಮೈಸೂರಿನಲ್ಲೂ ಮಹಾರಾಜರ ನಂತರ ಬಂದ ಸಾಧಕರಿಗೆ ಗೌರವ ನೀಡಬೇಕಾಗಿದೆ” ಎಂದು ಪ್ರತಾಪ್ ಸಿಂಹ ಮನವಿ ಮಾಡಿದರು.
ಪಕ್ಷಬೇಧದಿಂದ ಮೇಲಾದಂತಹ ರಾಜಕಾರಣ ಬೇಡ:
“ಸಾಧಕರು ಮಾತ್ರ ಬಿಜೆಪಿಯಲ್ಲಿಲ್ಲ, ಎಲ್ಲ ಪಕ್ಷಗಳಲ್ಲಿ ಇದ್ದಾರೆ. ಸಿದ್ದರಾಮಯ್ಯನವರ ಹೆಸರನ್ನು ಬಳಸುವ ವಿಚಾರದಲ್ಲಿ ಸಣ್ಣತನ ತೋರಿಸಬೇಡಿ. ತಕಾರರು ಎತ್ತಿದರೆ ಮೊಸರಿನಲ್ಲಿ ಕಲ್ಲು ಹುಡುಕಿದಂತಾಗುತ್ತದೆ” ಎಂದು ಹೇಳಿದರು.ಇದನ್ನು ಓದಿ –ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ಏರ್‌ಸ್ಟ್ರೈಕ್: 15 ಮಂದಿ ಮೃತ್ಯು
ಈ ಪ್ರಸ್ತಾಪವನ್ನು ಪಾಲಿಕೆ ಕೈಗೊಳ್ಳುವಲ್ಲಿ ಯಾವುದೇ ರಾಜಕೀಯ ಪ್ರೇರಣೆ ಇರಬಾರದು ಎಂಬುದು ಪ್ರತಾಪ್ ಸಿಂಹನವರ ಅಭಿಪ್ರಾಯವಾಗಿದೆ.
More Stories
ಸಂಸತ್ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ಏರ್‌ಸ್ಟ್ರೈಕ್: 15 ಮಂದಿ ಮೃತ್ಯು
ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ !