December 29, 2024

Newsnap Kannada

The World at your finger tips!

kona

ಈ ಕೋಣಕ್ಕೆ ಏಕಿಷ್ಟು ಬೆಲೆ ? ಆದಾಯ ಮೂಲ ಕೇಳಿದರೆ ದಂಗಾಗುತ್ತೀರಾ…..

Spread the love

ಶಾಲಾ ಪಠ್ಯದ ಕಥೆಗಳಲ್ಲಿ ಚಿನ್ನದ ಮೊಟ್ಟೆ ಇಡುವ ಕೋಳಿ ಬಗ್ಗೆ ಓದಿದ್ದೇವೆ, ಕೇಳಿದ್ದನ್ನು ಕರುಣಿಸುವ ಕಾಮಧೇನುವಿನ ಬಗ್ಗೆಯೂ ಕೇಳಿದ್ದೇವೆ. ಆದರೆ ಕೋಣವೊಂದು 9. 5 ಕೋಟಿ ಬೆಲೆ ಬಾಳುತ್ತದೆ ಎಂಬುದು ಅಚ್ಚರಿಯೇ ಸರಿ.

ಹೌದು, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶ ಗಡಿಯಲ್ಲಿರುವ ಚಿತ್ರಕೂಟದ ಗ್ರಾಮೋದಯ ಮೇಳದಲ್ಲಿ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆಯುತ್ತಿರುವ ಕೋಟ್ಯಾಂತರ ಬೆಲೆಬಾಳುವ ಕೋಣವೇ ಯುವರಾಜ.

kona1

ಬರೋಬ್ಬರಿ 11.5 ಅಡಿ ಉದ್ದ, 5.8 ಅಡಿ ಎತ್ತರ, 1500 ಕೆ.ಜಿ ತೂಕವಿರುವ ಯುವರಾಜ ಮುರ್ರಾ ತಳಿಯಾಗಿದ್ದು, ಕರಮ್ ವೀರ್ ಅವರಯ ರಾಜನಂತೆ ನೋಡಿಕೊಳ್ಳುತ್ತಿದ್ದಾರೆ. ದಿನವೊಂದಕ್ಕೆ ಯುವರಾಜನಿಗೆ 20 ಲೀಟರ್ ಹಾಲು, ಐದು ಕೆ.ಜಿ. ಸೇಬು, ಮತ್ತು ಉತ್ತಮ ಗುಣಮಟ್ಟದ ಹದಿನೈದು ಕೆ.ಜಿ ಪಶು ಆಹಾರವನ್ನು ನೀಡುತ್ತಾರೆ.

ಜೊತೆಗೆ 4 ರಿಂದ 5 ಲೀಟರ್ ನೀರು ಕುಡಿದ ಬಳಿಕ ನಾಲ್ಕೈದು ಕಿಲೋ ಮೀಟರ್ ವಾಕಿಂಗ್ ಕೂಡ ಮಾಡುವ ಯುವರಾಜ, ವಾರ್ಷಿಕ 50 ಲಕ್ಷ ರೂಪಾಯಿಯವರೆಗೆ ಆದಾಯ ತಂದು ಕೊಡುತ್ತಾನೆ.

ಅಂದಹಾಗೆ ಯುವರಾಜ ಆದಾಯ ಹೇಗೆ ತಂದು ಕೊಡುತ್ತಾನೆ ಎಂಬುದು ಎಲ್ಲರ ಸಹಜ ಪ್ರಶ್ನೆ. ಅಷ್ಟೊಂದು ಆದಾಯ ತಂದು ಕೊಡುತ್ತಿರುವುದು ಕೋಣದ ವೀರ್ಯವಂತೆ. ಕೋಣದ ವೀರ್ಯ ಮಾರಾಟದಿಂದಲೇ ಕರಮ್ ವೀರ್ ಗೆ ಲಕ್ಷ ರೂಪಾಯಿ ಆದಾಯ ಬರುತ್ತದೆ.

ಕೃತಕ ಸಂತಾನೋತ್ಪತ್ತಿಗೂ ಬಳಸುವ ವೀರ್ಯವನ್ನು ಯುವರಾಜನಿಂದ ಪ್ರತಿದಿನ 500 ಡೋಸ್ ‌ನಷ್ಟು ಮಾರಾಟ ಮಾಡಲಾಗುತ್ತದೆ.

ಯುವರಾಜನ ವೀರ್ಯಕ್ಕೆ ಉತ್ತರಭಾರತದಾದ್ಯಂತ ಭಾರೀ ಬೇಡಿಕೆಯಿದ್ದು, ಇದುವರೆಗೂ 1.5 ಲಕ್ಷ ಕರುಗಳನ್ನು ಪಡೆಯಲಾಗುತ್ತಿದೆಯಂತೆ. ಅಲ್ಲದೇ ಅಳಿವಿನಂಚಿನಲ್ಲಿರುವ ಮುರ್ರಾ ತಳಿಯನ್ನು ಸಂರಕ್ಷಿಸುವಲ್ಲಿಯೂ ಯುವರಾಜ ಕೊಡುಗೆ ಅಪಾರವಾಗಿದೆ‌

Copyright © All rights reserved Newsnap | Newsever by AF themes.
error: Content is protected !!