ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಜನತಾ ಲಾಕ್ಡೌನ್ ಬದಲಿಗೆ, ನಾಳೆಯಿಂದ (14 ದಿನಗಳ) ಕಾಲ ಮೇ 24ರವರೆಗೂ ಕಠಿಣ ಲಾಕ್ಡೌನ್ ಜಾರಿಗೊಳಿಸಲು ಸರ್ಕಾರ ಸಜ್ಜಾಗಿದೆ.
ನಾಳೆ ಬೆಳಗ್ಗೆ 6 ಗಂಟೆಯಿಂದ ಹೊಸ ಲಾಕ್ಡೌನ್ ನಿಯಮ ಜಾರಿಯಾಗುತ್ತೆ. ಈ ಬಾರಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧವಿದೆ. ಇನ್ನುಳಿದಂತೆ ಬಹುತೇಕ ನಿಯಮಗಳೆಲ್ಲಾ ಜನತಾ ಲಾಕ್ಡೌನ್ನ ಪಾರ್ಟ್ 1ರಿಂದ ಯಥಾವತ್ತಾಗಿ ನಕಲು ಮಾಡಲಾಗಿದೆ.
14 ದಿನ ಏನಿರುತ್ತೆ? ಏನಿರಲ್ಲ? ಎಂಬ ಮಾಹಿತಿ :
- ಆಸ್ಪತ್ರೆ, ಮೆಡಿಕಲ್, ನ್ಯಾಯಬೆಲೆ ಅಂಗಡಿ * ಹಾಲು (ಬೆಳಗ್ಗೆ 6ರಿಂದ ಸಂಜೆ 6ಗಂಟೆವರೆಗೆ) * ಹಾಪ್ಕಾಮ್ಸ್, ಹಣ್ಣು-ತರಕಾರಿ ಬೆಳಗ್ಗೆ 10 ಗಂಟೆವರೆಗೆ ತಳ್ಳುಗಾಡಿಯಲ್ಲಿ ಹಣ್ಣು-ತರಕಾರಿ ಸಂಜೆ 6 ಗಂಟೆಯವರೆಗೆ ಮಾರಬಹುದು.
- ದಿನಸಿ-ಮಾಂಸ (ಬೆಳಗ್ಗೆ 10 ಗಂಟೆವರೆಗೆ) * ಇಡೀ ದಿನ ಹೋಟೆಲ್ ಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಇರುತ್ತೆ ಮತ್ತು ಹೋಂ ಡೆಲಿವರಿ * ಮದ್ಯ ಪಾರ್ಸೆಲ್ ಬೆಳಗ್ಗೆ 10 ಗಂಟೆವರೆಗೆ ಮಾತ್ರ
- ಮನೆಯಲ್ಲಿ ಮಾತ್ರ ಮದುವೆ ನಡೆಸಬೇಕು. ಮದುವೆಯಲ್ಲಿ ಕೇವಲ 40 ಜನರಿಗಷ್ಟೇ ಭಾಗವಹಿಸಲು ಅವಕಾಶ.
- ಅಂತ್ಯಸಂಸ್ಕಾರದಲ್ಲಿ 5ಕ್ಕಿಂತ ಜನರು ಭಾಗವಹಿಸುವಂತಿಲ್ಲ
- ಆಹಾರ ಸಂಸ್ಕರಣಾ ಘಟಕ
- ರೈಲು, ವಿಮಾನ ಸಂಚಾರ ಇರುತ್ತದೆ.
ಏನಿರಲ್ಲ?
ಅಂತರ್ ಜಿಲ್ಲಾ ಓಡಾಟ , ಖಾಸಗಿ ವಾಹನ ಸಂಚಾರ * ಕೆಎಸ್ಆರ್ ಟಿಸಿ, ಬಿಎಂಟಿಸಿ ಬಸ್, ಮೆಟ್ರೋ, ಆಟೋ, ಟ್ಯಾಕ್ಸಿ * ಗಾರ್ಮೆಂಟ್ಸ್, ಕಾರ್ಖಾನೆ, ಖಾಸಗಿ ಕಂಪನಿ * ಮಾರುಕಟ್ಟೆಗಳು ಸಂಪೂರ್ಣ ಬಂದ್
- ಅಗತ್ಯ ವಸ್ತು ಖರೀದಿಗೆ ಜನ ನಡೆದುಕೊಂಡೇ ಹೋಗಬೇಕು.
- ಸಮೀಪದ ಅಂಗಡಿಗಳಲ್ಲಿ ದಿನ ಬಳಕೆ ವಸ್ತು ಖರೀದಿಸಬೇಕು.
- ಹೋಟೆಲ್, ಬಾರ್ ನಲ್ಲಿ ಪಾರ್ಸೆಲ್ ಲಭ್ಯವಿರುತ್ತೆ.
- ಆಟೋ, ಬೈಕ್, ಕಾರು ನಾಳೆ ರೋಡಿಗಿಳಿದ್ರೆ ಪೊಲೀಸರು ವಶಕ್ಕೆ ಪಡೆದುಕೊಳ್ಳೋದು ಬಹುತೇಕ ಖಚಿತ.
- ಅನಗತ್ಯವಾಗಿ ಓಡಾಡಿದ್ರೆ ಲಾಠಿ ಏಟು ಬೀಳೋದು ಫಿಕ್ಸ್ ಅಥವಾ ಪೊಲೀಸರು ಬಂಧಿಸಲೂಬಹುದು.
More Stories
ನವೆಂಬರ್ 28: ರಾಜ್ಯದ ಅಭಿವೃದ್ಧಿಗೆ ಮಹತ್ವದ ಸಚಿವ ಸಂಪುಟ ಸಭೆ
ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ