ನಾನಿಲ್ಲದೆ ನೀವು ಏನು ಮಾಡೋಕೆ ಆಗಲ್ಲ. ನಾನು ಮನಸ್ಸು ಮಾಡಿದ್ರೆ ಮೈಸೂರು ಎಪಿಎಂಸಿ ಏನು ಬೇಕಾದರೂ ಮಾಡುತ್ತೇನೆ ಎಂದು ಮೈಸೂರು ಎಪಿಎಂಸಿ ಕಾರ್ಯದರ್ಶಿ ವಿರುದ್ಧ ಶಾಸಕ ಜಿ.ಟಿ ದೇವೇಗೌಡ ಅವರು ಗುಡುಗಿದರು.
ಮೈಸೂರಿನಲ್ಲಿ ನಡೆದ ಎಪಿಎಂಸಿ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಗಮನಕ್ಕೆ ತರದೆ ಸರ್ಕಾರಕ್ಕೆ ಏನೇ ಗಮನ ಹರಿಸಿದ್ರೂ ಏನು ಆಗಲ್ಲ. ನಿನಗೆ ನೇರವಾಗೇ ಹೇಳ್ತೇನೆ. ಇದುವರೆಗೆ ನಾನು ನಿಮ್ಮಲ್ಲರಿಗೂ ಸ್ವಾತಂತ್ರ್ಯ ಕೊಟ್ಟಿದ್ದೇನೆ ಅಂದ್ರೆ ಚೆನ್ನಾಗಿ ನಡೆಸಿಕೊಂಡು ಹೋಗಲಿ ಅನ್ನೋ ಉದ್ದೇಶ ಎಂದು ತಾಕೀತು ಮಾಡಿದರು.
ನಾನು ಈ ಕ್ಷೇತ್ರದ ಶಾಸಕನಾಗಿದ್ದು, ಎಪಿಎಂಸಿ ಸಂಪೂರ್ಣ ಅಭಿವೃದ್ಧಿ ಪಡಿಸಿರೋನು ನಾನು. ನಮ್ಮ ಉಸ್ತುವಾರಿ ಸಚಿವರು ಎಸ್.ಟಿ.ಸೋಮಶೇಖರ್ ನನಗೆ ಬಹಳ ಆತ್ಮೀಯರು. ನೀವು ನನ್ನ ಬಿಟ್ಟು ನೇರವಾಗಿ ಕೆಲಸ ಮಾಡಿಸಿಕೊಳ್ಳೋಕೆ ಅವರ ಹತ್ತಿರ ಹೋಗ್ತೀರಾ. ಅವರೇ ಕರೆ ಮಾಡಿ ನನಗೆ ಹೇಳ್ತಾರೆ. ನಿಮ್ಮವರು ಬಂದಿದ್ರೂ ಅಂತ. ನೀವ್ಯಾರು ನನ್ನ ಬಿಟ್ಟು ಮೈಸೂರು ಎಪಿಎಂಸಿ ವಿಚಾರವಾಗಿ ಸರ್ಕಾರದಿಂದ ಏನು ಕೆಲಸ ಮಾಡಿಸಿಕೊಳ್ಳೋಕೆ ಆಗೋದಿಲ್ಲ ಎಂದರು.
- ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
- 2024-25ನೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
- 10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ
- HMPV ವೈರಸ್ ಕರ್ನಾಟಕಕ್ಕೆ ಪ್ರವೇಶ: ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ ಸೋಂಕು ದೃಢ
- ಮಳೆ ನಿಂತರೂ ಮರದ ಹನಿ ನಿಲ್ಲದು
More Stories
ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
2024-25ನೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
HMPV ವೈರಸ್ ಕರ್ನಾಟಕಕ್ಕೆ ಪ್ರವೇಶ: ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ ಸೋಂಕು ದೃಢ