ಕುಮಾರಸ್ವಾಮಿ ಯಾವ ಸೀಮೆ ಲೀಡರ್ ? ಜೆಡಿಎಸ್ ಕೋಮುವಾದಿ ಪಕ್ಷದೊಂದಿಗೆ ಸೇರಿಕೊಂಡಿದೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾರವಾಗಿ ಹೇಳಿದರು.
ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಜಮೀರ್ ಪರಿಷತ್‌ನಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿವೇಳೆ ಬಿಜೆಪಿಗೆ ಜೆಡಿಎಸ್‌ನವರು ಬೆಂಬಲ ನೀಡಿದ್ದಾರೆ. ಉಪಸಭಾಪತಿ ಚುನಾವಣೆಯಲ್ಲೂ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಹೀಗಾಗಿ ಮೊದಲು ಜೆಡಿಎಸ್ ನಲ್ಲಿ ಆ ಎಸ್ (ಜಾತ್ಯಾತೀತ) ಹಣೆಪಟ್ಟಿ ತೆಗೆದು ಹಾಕಲಿ. ಇದು ಯಾವ ಸೀಮೆ ಜಾತ್ಯತೀತ ಪಕ್ಷ. ಜೆಡಿಎಸ್ ಈಗ ಸತ್ತಿರುವ ಪಕ್ಷವೆಂದು ಜಮೀರ್ ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ಜೆಡಿಎಸ್‌ನಲ್ಲಿದ್ದಾಗ ಆ ಪಕ್ಷಕ್ಕೆ 59 ಸೀಟ್ ಗಳು ಬಂದಿತ್ತು. ಈಗ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಲೀಡರ್ ಎಂದು ಹೇಳ್ತಾರೆ. ಈಗ ಅವರಿಗೆ 59 ನಂಬರ್ ರೀಚ್ ಮಾಡೋಕೆ ಆಗಿಲ್ಲ.ಆಗುವುದಿಲ್ಲ ಎಂದು ಹೇಳಿದರು.
2006ರಲ್ಲಿ ಹೆಚ್‌ಡಿಕೆ ಒಳ್ಳೆಯ ಆಡಳಿತವನ್ನು ಕೊಟ್ಟಿದ್ದರು. ಆಗಿನ ಕುಮಾರಸ್ವಾಮಿ ಆಡಳಿತವನ್ನ ನಾನು ಒಪ್ಪಿಕೊಳ್ತೇನೆ. ಈಗ ಅವರು 59 ನಂಬರ್ ರೀಚ್ ಮಾಡುವುದಕ್ಕೆ ಆಗಲ್ಲ. ಕುಮಾರಸ್ವಾಮಿ ಯಾವ ಸೀಮೆ ಲೀಡರ್ ಎಂದು ಜಮೀರ್ ವಾಗ್ದಾಳಿ ನಡೆಸಿದರು.
ಇಬ್ರಾಹಿಂ ಬಾಯಲ್ಲಿ ಲಡ್ಡು ಇಟ್ಟುಕೊಂಡಿದ್ರಾ? :
ಸಿ.ಎಂ.ಇಬ್ರಾಹಿಂ ಸೋತರೂ 2 ಬಾರಿ ಎಂಎಲ್ ಸಿ ಮಾಡಿದ್ದಾರೆ. ಇದಕ್ಕಿಂತ ಸಿ.ಎಂ.ಇಬ್ರಾಹಿಂಗೆ ಇನ್ನೇನು ಮಾಡಬೇಕು? ಎಂದು ಪ್ರಶ್ನಿಸಿದರು.
‘ಇಬ್ರಾಹಿಂ ಆಗ ಬಾಯಿಯಲ್ಲಿ ಲಡ್ಡು ಇಟ್ಟುಕೊಂಡಿದ್ರಾ? ಕಾಂಗ್ರೆಸ್ ಅವಧಿಯಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚು ಅನುದಾನ ಸಿಕ್ಕಿದೆ. 120 ಕೋಟಿ ಇದ್ದದ್ದು 3,100 ಕೋಟಿಗೆ ಹೆಚ್ಚಿಸಿದ್ದರು. ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಏನು ಮಾಡಿಲ್ಲ ಅಂತಿದ್ದಾರಲ್ಲ. ಅನುದಾನ ಹೆಚ್ಚಿಸಿದ ಸಮಯದಲ್ಲಿ ಇಬ್ರಾಹಿಂ ಕಾಂಗ್ರೆಸ್‌ನಲ್ಲಿದದರು. ಆಗ ಏಕೆ ಸಿ.ಎಂ.ಇಬ್ರಾಹಿಂ ಏನೂ ಮಾತನಾಡಿಲ್ಲವೆಂದು ಪ್ರಶ್ನೆ ಮಾಡಿದರು.
ಅಲ್ಪ ಸಂಖ್ಯಾತರ ಅನುದಾನ ಹೆಚ್ಚಿಸಿದಾಗ ಕಾಂಗ್ರೆಸ್ನಲ್ಲೇ ಇದ್ದ ಇಬ್ರಾಹಿಂ ಆಗ ಬಾಯಿಯಲ್ಲಿ ಲಡ್ಡು ಇಟ್ಟುಕೊಂಡಿದ್ರಾ? ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಏನು ಮಾಡಿಲ್ಲ ಅಂತಿದ್ದಾರಲ್ಲ. ಆಗ ಬಾಯಿಯಲ್ಲಿ ಲಡ್ಡು ಇಟ್ಟುಕೊಂಡಿದ್ರಾ? ಎಂದು ಇಬ್ರಾಹಿಂ ವಿರುದ್ಧ ಜಮೀರ್ ತೀವ್ರ ವಾಗ್ದಾಳಿ ನಡೆಸಿದರು.
- ಹಸುಗಳ ಕೆಚ್ಚಲು ಕೊಯ್ದಆರೋಪಿ ಬಂಧನ : ಜ.24 ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶ
- ದುಬೈ ಕಾರ್ ರೇಸ್ನಲ್ಲಿ ನಟ ಅಜಿತ್ ಕುಮಾರ್ ಭರ್ಜರಿ ಸಾಧನೆ
- ಮಿಸೆಸ್ ಇಂಡಿಯಾ ಕಿರೀಟ ಗೆದ್ದ ಮದ್ದೂರಿನ ಡಾ. ಪ್ರಿಯಾ ಗೋಸ್ವಾಮಿ
- BCCI ನೂತನ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ಆಯ್ಕೆ
- ಹುಟ್ಟುಹಬ್ಬದ ದಿನವೇ ಬಾಲಕನ ದುರ್ಮರಣ
More Stories
ಹುಟ್ಟುಹಬ್ಬದ ದಿನವೇ ಬಾಲಕನ ದುರ್ಮರಣ
KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ
ಮಂಡ್ಯ ರೈತರನ್ನು ಕಾಡುತ್ತಿರುವ ವಕ್ಫ್ ಭೂಮಿ ವಿವಾದ