ಅಮೆರಿಕದ ಅತ್ಯಂತ ದುಬಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಐಷಾರಾಮ ಜೀವನ ಅಲ್ಲ.
ಐಷಾರಾಮ ಜೀವನ ಎಂದರೆ ಆರೋಗ್ಯವಂತರಾಗಿರುವುದು.
ಐಷಾರಾಮ ಎಂದರೆ ದೊಡ್ಡ ದೊಡ್ಡ ಪ್ರವಾಸ, ವಿಹಾರಕ್ಕೆ ಹೋಗುವುದು, ದೊಡ್ಡ ರೆಸಾರ್ಟ್ ಭೋಜನ ಅಥವಾ ಪ್ರಸಿದ್ಧ ಬಾಣಸಿಗರು ತಯಾರಿಸಿದ ಆಹಾರವನ್ನು ತಿನ್ನುವುದು ಎಂದಲ್ಲ.
ಐಷಾರಾಮ ಎಂದರೆ ನಿಮ್ಮ ಸ್ವಂತ ಮನೆಯ ಹಿತ್ತಲಿನಲ್ಲಿ ಹೊಸದಾಗಿ ಬೆಳೆದ ಸಾವಯವ ತರಕಾರಿಗಳನ್ನು ತಿನ್ನುವುದು.
ಐಷಾರಾಮ ಎಂದರೆ ನಿಮ್ಮ ಮನೆಯಲ್ಲಿ ಎಲಿವೇಟರ್ ಇರುವುದು ಎಂದಲ್ಲ.
ಐಷಾರಾಮ ಎಂದರೆ 3-4 ಮಹಡಿಗಳನ್ನು ಅನಾಯಾಸವಾಗಿ ಏರುವ ಸಾಮರ್ಥ್ಯವನ್ನು ಹೊಂದಿರುವುದು.
ಐಷಾರಾಮ ಎಂದರೆ ದೊಡ್ಡ ರೆಫ್ರಿಜರೇಟರ್ ಅನ್ನು ಖರೀದಿಸುವ ಸಾಮರ್ಥ್ಯವನ್ನು ಹೊಂದಿರುವುದಲ್ಲ
ಐಷಾರಾಮ ಎಂದರೆ ದಿನಕ್ಕೆ 2/ 3 ಬಾರಿ ತಾಜಾ ಫ್ರೆಷ್ ಬೇಯಿಸಿದ ಆಹಾರವನ್ನು ತಿನ್ನುವ ಲಭ್ಯತೆ ಮತ್ತು ಸಾಮರ್ಥ್ಯವನ್ನು ಹೊಂದಿರುವುದು.
ಐಷಾರಾಮ ಎಂದರೆ ಹೋಮ್ ಥಿಯೇಟರ್ ವ್ಯವಸ್ಥೆಯನ್ನು ಹೊಂದುವುದು ಮತ್ತು ಅದರಲ್ಲಿ ಹಿಮಾಲಯನ್ ಎಕ್ಸ್‌ಪೆಡಿಶನ್‌ಗಳನ್ನು ನೋಡುವುದು ಅಲ್ಲ.
ಐಷಾರಾಮ ಎಂದರೆ ಹಿಮಾಲಯದ ದಂಡಯಾತ್ರೆಯನ್ನು, ಅಥವಾ ಅದರಂತಹ ಸಣ್ಣ ಪುಟ್ಟ ಗುಡ್ಡುಗಾಡು ಪ್ರದೇಶ ಪ್ರತ್ಯಕ್ಷ ಕಂಡು (ಭೌತಿಕವಾಗಿ) ಅನುಭವಿಸಲು ಸಾಧ್ಯವಾಗುವದು.
60 ರ ದಶಕದಲ್ಲಿ, ಕಾರು ಹೊಂದುವುದು ಒಂದು ಐಷಾರಾಮ ಜೀವನದ ಒಂದು ಭಾಗವಾಗಿತ್ತು.
70 ರ ದಶಕದಲ್ಲಿ, ದೂರದರ್ಶನವನ್ನು ಹೊಂದುವುದು ಒಂದು ಐಷಾರಾಮ ಜೀವನದ ಅವಿಭಾಜ್ಯ ಅಂಗವಾಗಿತ್ತು.
80 ರ ದಶಕದಲ್ಲಿ ದೂರವಾಣಿಗಳು ಐಷಾರಾಮದ ಒಂದು ವಸ್ತು ಆಗಿತ್ತು.
90 ರ ದಶಕದಲ್ಲಿ ಕಂಪ್ಯೂಟರ್‌ಗಳು ಐಷಾರಾಮ ಜೀವನದ ಮಹತ್ತರ ಭಾಗ ವಾದ್ದವು .
ಈಗ ಐಷಾರಾಮ ಜೀವನ ಎಂದರೆ ಆರೋಗ್ಯವಾಗಿರುವುದು, ಪ್ರಾಮಾಣಿಕವಾಗಿರಲು ಪ್ರಯತ್ನಿಸುವದು, ಸದಾಕಾಲ ಸಂತೋಷವಾಗಿರಲು ಇಚ್ಛೆಸುವದು, ಸಂತೋಷದ ದಾಂಪತ್ಯ ಜೀವನಕ್ಕಾಗಿ, ಕುಟುಂಬದಲ್ಲಿ ಪ್ರೀತಿ, ಆತ್ಮೀಯತೆ, ವಿಸ್ವಾಸ ಹೊಂದಿರುವದು , ಪ್ರೀತಿಯ ಸ್ನೇಹಿತರ ಜೊತೆಯಲ್ಲಿರುವದು. ಗುರು ಹಿರಿಯರೊಂದಿಗೆ ಸೌಜನ್ಯದಿಂದಿರುವದು, ಮಾಲಿನ್ಯವಿಲ್ಲದ ಸ್ಥಳದಲ್ಲಿ ಉಳಿಯಲು, ಚಾರಣ, ಕೋಟೆಗಳ ಮೂಲಕ ಅಲೆದಾಡಲು, ಪ್ರಕೃತಿಯ ಮಡಿಲಲ್ಲಿ ನಡೆಯುವದು (ವಾಕಿಂಗ್).ಕರುನಾಡ ಜಿಲ್ಲೆಗಳ ಕಿರು ಪರಿಚಯ – 8 – ಗದಗ
ಇಂತಹ ಸಂಗತಿಗಳೆಲ್ಲ ಅಪರೂಪವೆನಿಸಿವೆ ಮತ್ತು ಈ ಅಪರೂಪದ ವಸ್ತುಗಳನ್ನು ನಮ್ಮೊಂದಿಗೆ ಹೊಂದಿರುವುದೇ ಇಂದಿನ ನಿಜವಾದ ಐಷಾರಾಮದ ವಿಷಯಗಳಾಗಿವೆ !
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು