ನಾನು ತಾಯಿಯಾಗಿ ಕೇಳಿಕೊಳ್ಳುತ್ತೇನೆ. ದಯವಿಟ್ಟು ಪೂರ್ತಿ ವಿಷಯ ತಿಳಿಯದೆ ಏನನ್ನು ಮಾತನಾಡಬೇಡಿ. ನನ್ನ ಮಕ್ಕಳ ಸಲುವಾಗಿ ನಮ್ಮ ವೈಯಕ್ತಿಕ ವಿಷಯಗಳನ್ನು ಗೌಪ್ಯವಾಗಿಡಿ.
- ಇದು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಜನ, ಮಾಧ್ಯಮಗಳಿಗೆ ಮಾಡಿಕೊಂಡ ಮನವಿ.
ಈ ಕುರಿತಂತೆ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಾಕಿರುವ ನಟಿ ಶಿಲ್ಪಾ ನಾನು ಕಾನೂನು ಪಾಲಿಸುವ ಭಾರತದ ಹೆಮ್ಮಯ ಪ್ರಜೆ. ಕಳೆದ 29 ವರ್ಷಗಳಿಂದ ನನ್ನ ವೃತ್ತಿಜೀವನದಲ್ಲಿ ಗೌರವ ಸ್ಥಾನ ಪಡೆಯಲು ತುಂಬಾ ಪರಿಶ್ರಮವನ್ನು ಪಡುತ್ತಿದ್ದೇನೆ ಎಂದಿದ್ದಾರೆ.
ಪತಿ ರಾಜ್ ಕುಂದ್ರಾ ಜೈಲಿಗೆ ಹೋದಾಗಿನಿಂದ ಅಷ್ಟಾಗಿ ಶಿಲ್ಪಾ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಇಂದು ತಮ್ಮ ವಿರುದ್ಧ ಹರಿದಾಡುತ್ತಿರುವ ಸುಳ್ಳು ಮಾಹಿತಿಗಳಿಗೆ ನೊಂದು ಪೋಸ್ಟ್ ಮಾಡಿದ್ದಾರೆ.
ಹೌದು ಹಲವು ದಿನಗಳಿಂದ ನಾನು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದೇನೆ. ನನ್ನ ಮೇಲೆ ಬರುತ್ತಿರುವ ವದಂತಿಗಳು, ಮಾಧ್ಯಮದಲ್ಲಿ ನಮ್ಮ ಮೇಲೆ ವಿನಾಕಾರಣ ಮಾಡುತ್ತಿರುವ ಆರೋಪಗಳನ್ನು ಗಮನಿಸಿದ್ದೇನೆ. ನನ್ನನ್ನು ಸೇರಿ ನಮ್ಮ ಇಡೀ ಕುಟುಂಬವನ್ನು ಟ್ರೋಲ್ ಮಾಡಿರುವ ಪೋಸ್ಟ್ ಗಳನ್ನೂ ಕೂಡ ನೋಡಿದ್ದೇನೆ ಎಂದು ಹೇಳಿದ್ದಾರೆ.
ಏನು ಗೊತ್ತಿಲ್ಲದೇ ಸುಮ್ಮನೆ ಸುಳ್ಳು ಆರೋಪಗಳನ್ನು ಮಾಡಬೇಡಿ. ಇದರಲ್ಲಿ ನನ್ನದು ತಪ್ಪಿಲ್ಲ ಎಂದಿದ್ದಾರೆ.
ನನ್ನ ಫಿಲಾಸಪಿ ‘ನೆವರ್ ಕಂಪ್ಲಿನ್, ನೆವರ್ ಎಕ್ಸೆಪ್ಲೆಯನ್’ ಅದನ್ನು ಇಲ್ಲಿ ನೆನಪಿಸಲು ಇಚ್ಚಿಸುತ್ತೇನೆ. ಬೇಡದ ಅಪವಾದಗಳಿಗೆ ನಮ್ಮನ್ನು ದೂಡಬೇಡಿ. ನನಗೆ ಮುಂಬೈ ಪೊಲೀಸ್ ಮತ್ತು ನ್ಯಾಯಾಂಗದ ಮೇಲೆ ಪೂರ್ಣ ನಂಬಿಕೆಯಿದೆ. ಅವರು ಸರಿಯಾಗಿ ತನಿಖೆ ಮಾಡಿ ನ್ಯಾಯವನ್ನು ಕೊಡಿಸುತ್ತಾರೆ. ಎಂಬ ವಿಶ್ವಾಸವಿದೆ ಎಂದಿದ್ದಾರೆ.


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ