December 22, 2024

Newsnap Kannada

The World at your finger tips!

virat 1

RCB ನಾಯಕತ್ವದಿಂದ ಹೊರ ಬರಲು ಕಾರಣವನ್ನು ಬಿಚ್ಟಿಟ್ಟ ವಿರಾಟ್

Spread the love

ದೀರ್ಘಕಾಲದ ಮೈಂಡ್​ ಒಂದೇ ವಿಷಯದ ಬಗ್ಗೆ ಹೆಚ್ಚು ಗಮನ ನೀಡುವುದರಿಂದ ಆಟವನ್ನ ಸಂಭ್ರಮಿಸಲು ಸಾಧ್ಯವಿಲ್ಲ. ಆರ್​ಸಿಬಿ ಕ್ಯಾಪ್ಟೆನ್ಸಿಯಿಂದ ಹಿಂದೆ ಸರಿಯಲು ಇದೂ ಒಂದು ಕಾರಣವಾಗಿತ್ತು ಎಂದು RCB ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹೇಳಿದರು.

ಆರ್​ಸಿಬಿ ತಂಡದ ನಾಯಕತ್ವ ತ್ಯಜಿಸಿದ್ದರ ಹಿಂದಿನ ಕಾರಣವನ್ನ ವಿರಾಟ್​ ಕೊಹ್ಲಿ ಬಹಿರಂಗಪಡಿಸಿದ್ದಾರೆ.

ನಾಯಕತ್ವದಿಂದ ಕೆಳಗಿಳಿದದ್ದು ನನ್ನ ಪ್ರಕಾರ ಒಳ್ಳೆಯ ಬದಲಾವಣೆ, ಈಗ ನಾನು ಹೆಚ್ಚು ರಿಲ್ಯಾಕ್ಸ್ ಆಗಿದ್ದೇನೆ ಎಂದು ಕೊಹ್ಲಿ ಹೇಳಿದ್ದಾರೆ.

ಹತ್ತು ವರ್ಷಗಳ ಕಾಲ ಆರ್​​ಸಿಬಿ ತಂಡವನ್ನು ಮುನ್ನಡೆಸಿದ್ದ ಕೊಹ್ಲಿ, ಕಳೆದ ವರ್ಷಕ್ಕೆ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು .

ಐಪಿಎಲ್​ 15ನೇ ಸೀಸನ್​ ಅನ್ನು ವಿರಾಟ್​ ಕೊಹ್ಲಿ ಕ್ಯಾಪ್ಟನ್ಸಿ ಇಲ್ಲದೇ ಆರ್​​ಸಿಬಿ ಮುನ್ನೆಡೆಸುತ್ತಿದೆ. ಕೊಹ್ಲಿ ಉತ್ತರಾಧಿಕಾರಿಯಾಗಿ ಫ್ಲಾಪ್​ ಡುಪ್ಲೆಸಿಸ್​ ಅವರನ್ನ ಆರ್​ಸಿಬಿ ಮ್ಯಾನೇಜ್ಮೆಂಟ್ ನೇಮಿಸಿದೆ.

Copyright © All rights reserved Newsnap | Newsever by AF themes.
error: Content is protected !!